95ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಭಾರತೀಯ ಕಾಲಮಾನ ಇಂದು (ಸೋಮವಾರ) ಮುಂಜಾನೆ 5.30ರಿಂದ ಆರಂಭವಾಗಲಿದೆ. ಈ ಕಾರ್ಯಕ್ರಮ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ.

ನವದೆಹಲಿ (ಮಾ.13): ಜಾಗತಿಕ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಗಳಾದ ಆಸ್ಕರ್‌ ಸೋಮವಾರ ಬೆಳಗ್ಗೆ ಘೋಷಣೆಯಾಗಲಿವೆ. ಈ ಬಾರಿ ಭಾರತದ ಮೂರು ಚಿತ್ರಗಳು ಸ್ಪರ್ಧೆಯಲ್ಲಿವೆ. ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಚಿತ್ರದ ‘ನಾಟು ನಾಟು’ ಗೀತೆ, ಸಾಕ್ಷ್ಯಚಿತ್ರಗಳಾದ ‘ಆಲ್‌ ದಟ್‌ ಬ್ರೀದ್ಸ್‌’ ಮತ್ತು ‘ಎಲಿಫೆಂಟ್‌ ವಿಸ್ಪರ್ಸ್‌’ ಈ ಬಾರಿ ಆಸ್ಕರ್‌ ರೇಸ್‌ನಲ್ಲಿವೆ. 

95ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಭಾರತೀಯ ಕಾಲಮಾನ ಇಂದು (ಸೋಮವಾರ) ಮುಂಜಾನೆ 5.30ರಿಂದ ಆರಂಭವಾಗಲಿದೆ. ಈ ಕಾರ್ಯಕ್ರಮ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ. ಸಾಕ್ಷ್ಯಚಿತ್ರ ವಿಭಾಗದಲ್ಲಿ ಶೌನಕ್‌ ಸೇನ್‌ ಅವರ ‘ಆಲ್‌ ದ ಬ್ರೀದ್ಸಸ’ ನಾಮನಿರ್ದೇಶನಗೊಂಡಿದ್ದು, ಇದು 2022ರಲ್ಲಿ ‘ವರ್ಲ್ಡ್‌ ಸಿನಿಮಾ ಗ್ರಾಂಡ್‌ ಜ್ಯೂರಿ ಪ್ರೈಸ್‌’ ಮತ್ತು ‘ಗೋಲ್ಡನ್‌ ಐ’ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಇನ್ನು ಕಾರ್ತಿಕಿ ಗೋನ್ಸಾಲ್ವೇಸ್‌ ಅವರ ‘ದ ಎಲಿಫೆಂಟ್‌ ವಿಸ್ಪರ್ಸ್‌’ ಸಹ ಕಿರು ಅವಧಿಯ ಸಾಕ್ಷ್ಯಚಿತ್ರ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ.

ಪ್ರಶಸ್ತಿ ಸಮಾರಂಭಕ್ಕೆ ದೀಪಿಕಾ ನಿರೂಪಕಿ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ಮಾರ್ಚ್ 12ರಂದು ಲಾಸ್ ಏಂಜಲೀಸ್ ನಲ್ಲಿ ಅಕಾಡೆಮಿ ಅವಾರ್ಡ್ ಸಮಾರಂಭ ನಡೆಯಲಿದೆ. ಇಡೀ ವಿಶ್ವವೇ ಎದುರು ನೋಡುತ್ತಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಈ ವರ್ಷ ಭಾರತೀಯರಿಗೂ ವಿಶೇಷವಾಗಿದೆ. ಈ ಬಾರಿ ತೆಲುಗಿನ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ಆಸ್ಕರ್‌ಗೆ ನಾಮನಿರ್ದೇಶನ ಗೊಂಡಿದೆ. ಹಾಗಾಗಿ ಈ ಬಾರಿ ಭಾರತಕ್ಕೆ ಒಂದು ಆಸ್ಕರ್ ಪಕ್ಕಾ ಎನ್ನುವ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಹಾಗಾಗಿ ಈ ಬಾರಿ ತುಂಬಾ ವಿಶೇಷವಾಗಿದೆ. ಈ ನಡುವೆ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಬಹಿರಂಗವಾಗಿದೆ.

Oscars 2023: ಮಾ.13ಕ್ಕೆ ಆಸ್ಕರ್‌ ಪ್ರಶಸ್ತಿ ಪ್ರಕಟ: ಭಾರತದ ಚಿತ್ರಗಳು ಮೂರು ವಿಭಾಗದಲ್ಲಿ ಸ್ಪರ್ಧೆ

ಆಸ್ಕರ್ 2023 ಸಮಾರಂಭಕ್ಕೆ ಬಾಲಿವುಡ್ ಸ್ಟಾರ್ ದೀಪಿಕಾ ಪಡುಕೋಣೆ ಎಂಟ್ರಿ ಕೊಡುತ್ತಿದ್ದಾರೆ. ಆಸ್ಕರ್ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ದೀಪಿಕಾ ಕೂಡ ಒಬ್ಬರಾಗಿದ್ದಾರೆ. ಅಷ್ಟಕ್ಕೂ ದೀಪಿಕಾ ಯಾಕೆ ಆಸ್ಕರ್ ವೇದಿಕೆಯಲ್ಲಿ ಅಂತೀರಾ? ಈ ಬಾರಿಯ ಆಸ್ಕರ್ ಸಮಾರಂಭದಲ್ಲಿ ದೀಪಿಕಾ ನಿರೂಪಕರಲ್ಲಿ ಒಬ್ಬರಾಗಿದ್ದಾರೆ. ಹಾಲಿವುಡ್‌ನ ಖ್ಯಾತ ಕಲಾವಿದರ ಜೊತೆ ಬಾಲಿವುಡ್ ಸ್ಟಾರ್ ಕೂಡ ಒಬ್ಬರಾಗಿರುವುದು ವಿಶೇಷವಾಗಿದೆ. ಡ್ವೇನ್ ಜಾನ್ಸನ್, ಎಮಿಲಿ ಬ್ಲಂಟ್, ಮೈಕೆಲ್ ಬಿ. ಜೋರ್ಡಾನ್ ಸೇರಿದಂತೆ ಇನ್ನು ಅನೇಕರ ಜೊತೆಗೆ ದೀಪಿಕಾ ಕೂಡ ಇರುವುದು ಭಾರತೀಯರಿಗೆ ಹೆಮ್ಮೆಯ ವಿಚಾರವಾಗಿದೆ.