ಒಡಿಶಾದ ಕಿರುತೆರೆಯ ಖ್ಯಾತ ನಟಿ (Odia TV actor) ರಶ್ಮಿರೇಖಾ (Rashmirekha) ಭುವನೇಶ್ವರದ ನಯಪಲ್ಲಿಯಲ್ಲಿರುವ ಬಾಡಿಗೆ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ರಶ್ಮಿ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸಾವಿನ ಹಿಂದೆ ಬಾಯ್‌ಫ್ರೆಂಡ್ ಸಂತೋಷ್ ಕೈವಾಡವಿದೆ ಎಂದು ತಂದೆ ಆರೋಪ ಮಾಡಿದ್ದಾರೆ. 

ಕಿರುತೆರೆ ನಟಿಯರ ಸರಣಿ ಸಾವು ಮುಂದು ವರೆದಿದೆ. ಇತ್ತೀಚಿಗೆ ಅನೇಕ ಟಿವಿ ಕಲಾವಿದರು ಜೀವ ಕಳೆದುಕೊಂಡಿದ್ದಾರೆ. ಕಳೆದ ತಿಂಗಳಿಂದ ಬೆಂಗಾಳಿಯ ಅನೇಕ ನಟಿಯರ ಮತ್ತು ಮಾಡೆಲ್‌ಗಳ ಅನುಮನಾಸ್ಪದ ಸಾವು ಕೋಲ್ಕತ್ತಾ ನಗರವನ್ನು ಬೆಚ್ಚಿಬೀಳಿಸಿದೆ. ಇದರ ಬೆನ್ನಲ್ಲೇ ಇದೀಗ ಮತ್ತೋರ್ವ ಕಿರುತೆರೆ ನಟಿ ಜೂನ್ 18ರಂದು ಶವವಾಗಿ ಪತ್ತೆಯಾಗಿದ್ದಾರೆ. ಒಡಿಶಾದ ಕಿರುತೆರೆಯ ಖ್ಯಾತ ನಟಿ (Odia TV actor) ರಶ್ಮಿರೇಖಾ (Rashmirekha) ಭುವನೇಶ್ವರದ ನಯಪಲ್ಲಿಯಲ್ಲಿರುವ ಬಾಡಿಗೆ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ರಶ್ಮಿ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸಾವಿನ ಹಿಂದೆ ಬಾಯ್‌ಫ್ರೆಂಡ್ ಸಂತೋಷ್ ಕೈವಾಡವಿದೆ ಎಂದು ತಂದೆ ಆರೋಪ ಮಾಡಿದ್ದಾರೆ. 

23 ವರ್ಷದ ನಟಿ ರಶ್ಮಿ ಒಡಿಶಾದ ಜಗತ್‌ಸಿಂಗ್‌ಪುರ್ ಜಿಲ್ಲೆಯವರು. ಒಡಿಶಾದ ಜನಪ್ರಿಯ ಧಾರವಾಗಿ ಕೆಮಿತಿ ಕಹಿಬಿ ಕಹಾ ಧಾರಾವಾಹಿ ಮೂಲಕ ಒಡಿಶಾ ಕಿರುತೆರೆ ಪ್ರೇಕ್ಷಕರ ಮನೆ ಮಾತಾಗಿದ್ದರು. ರಶ್ಮಿ ಸಾವಿನ ಬಗ್ಗೆ ಮನೆ ಮಾಲಿಕರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪೊಲೀಸರು ಸ್ಥಳಕ್ಕೆ ದಾವಿಸಿ ಮನೆಯ ಬಾಗಿಲನ್ನು ಒಡೆದು ಒಳಪ್ರವೇಸಿದರು. ರಶ್ಮಿ ಶವದ ಪಕ್ಕದಲ್ಲಿ ಡೆತ್‌ನೋಟ್ ಸಿಕ್ಕಿದ್ದು ಪೊಲೀಸರು ವಶಪಡಿಸಸಿಕೊಂಡಿದ್ದಾರೆ. 

ಖ್ಯಾತ ಕಿರುತೆರೆ ನಟಿ ಪಲ್ಲವಿ ಡೇ ಆತ್ಮಹತ್ಯೆಗೆ ಶರಣು

ಈ ಸಂಬಂಧ ಅಸಹಜಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 23 ವರ್ಷದ ನಟಿ ಜೂನ್ 18ರಂದು ರಾತ್ರಿ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ಮರಣೋತ್ತರ ಪರೀಕ್ಷಿಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಪ್ರಾಥಮಿಕ ವರದಿ ಪ್ರಕಾರ ಆಕೆಯ ಸಾವಿಗೆ ಯಾರು ಕಾರಣವಲ್ಲ ಎನ್ನುವ ಪತ್ರ ಸಿಕ್ಕಿರುವುದರಿಂದ ಆತ್ಮಹತ್ಯೆ ಎಂದು ತೋರುತ್ತದೆ ಎಂದು ಪೊಲೀಸರ್ ಮೂಲಗಳು ಮಾಹಿತಿ ನೀಡಿವೆ.

ಹುಟ್ಟುಹಬ್ಬದ ದಿನವೇ ಶವವಾಗಿ ಪತ್ತೆಯಾದ ನಟಿ, ಮಾಡೆಲ್ ಶಹಾನಾ; ಪತಿ ಅರೆಸ್ಟ್

ರಶ್ಮಿರೇಖಾ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ ತಂದೆ, ಮಗಳ ಸಾವಿನ ಬಗ್ಗೆ ಬೋಯ್‌ಫ್ರೆಂಡ್ ಸಂತೋಷ್ ಅವರಿಂದ ತಿಳಿಯಿತು ಎಂದು ಹೇಳಿದ್ದಾರೆ. 'ಶನಿವಾರ ನಾವು ಆಕೆಗೆ ಕರೆ ಮಾಡಿದರು ಉತ್ತರಿಸಿಲ್ಲ. ನಂತರ ಸಂತೋಷ್ ನಮಗೆ ಮಾಹಿತಿ ತಿಳಿಸಿದರು. ರಶ್ಮಿ ಮತ್ತು ಸಂತೋಷ್ ಇಬ್ಬರು ಗಂಡ-ಹೆಂಡತಿಯಾಗಿ ವಾಸಿಸುತ್ತಿದ್ದರು ಎನ್ನುವ ಮಾಹಿತಿ ಮಲೆ ಮಾಲಿಕರಿಂದ ಗೊತ್ತಾಯಿತು. ನಮಗೆ ಅದರ ಬಗ್ಗೆ ತಿಳಿದಿರಲಿಲ್ಲ' ಎಂದು ಹೇಳಿದ್ದಾರೆ.