ಸಹ ನಟಿ ಜೊತೆ ಪತಿಯ ಲವ್ವಿ-ಡವ್ವಿ; ರೆಡ್‌ಹ್ಯಾಂಡ್ ಆಗಿ ಹಿಡಿದು ನಡುರಸ್ತೆಲೇ ಥಳಿಸಿದ ಪತ್ನಿ
ಪತಿ ಸಹ ನಟಿಯ ಜೊತೆ ಸುತ್ತಾಡುತ್ತಿರುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪತ್ನಿ ಮಧ್ಯರಸ್ತೆಯಲ್ಲೇ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪತಿ ಸಹ ನಟಿಯ ಜೊತೆ ಸುತ್ತಾಡುತ್ತಿರುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪತ್ನಿ ಮಧ್ಯರಸ್ತೆಯಲ್ಲೇ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇತ್ತೀಚಿಗಷ್ಟೆ ಸ್ಯಾಂಡಲ್ ವುಡ್ ನಟಿ ಪವಿತ್ರಾ ಲೋಕೇಶ್ ಮತ್ತು ಟಾಲಿವುಡ್ ನಟ ನರೇಶ್ ವಿಚಾರದಲ್ಲೂ ಹೀಗೆ ಆಗಿತ್ತು. ಪವಿತ್ರಾ ಲೋಕೇಶ್ ಜೊತೆ ನರೇಶ್ ಸುತ್ತಾಡುತ್ತಿದ್ದಾರೆ ಎಂದು ಪತ್ನಿ ರಮ್ಯಾ ರಂಪಾಟ ಮಾಡಿದ್ದರು. ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಪವಿತ್ರಾ ಲೋಕೇಶ್ ಮತ್ತು ನರೇಶ್ ಇಬ್ಬರು ಒಟ್ಟಿಗೆ ತಂಗಿದ್ದ ವಿಚಾರ ಗೊತ್ತಾಗಿ ಪತ್ನಿ ರಮ್ಯಾ ಹೋಟೆಲ್ ಮುಂದೆ ಹೋಗಿ ಗಲಾಟೆ ಮಾಡಿ, ಚಪ್ಪಲಿಯಲ್ಲಿ ಹೊಡೆಯಲು ಮುಂದಾಗಿದ್ರು. ಬಳಿಕ ಪೊಲೀಸ್ ತಡೆದು ಪವಿತ್ರಾ ಲೋಕೇಶ್ ಮತ್ತು ನರೇಶ್ ಅವರನ್ನು ಅಲ್ಲಿಂದ ಕಳುಹಿಸಿದ್ದರು. ಇದೀಗ ಮತ್ತೊಂದು ಇಂತದ್ದೆ ಘಟನೆ ಒಡಿಯಾದಲ್ಲಿ ನಡೆದಿದೆ. ನಟ ಬಾಬುಸನ್ ಮೊಹಂತಿ ಮತ್ತು ಸಹ ನಟಿ ಪ್ರಕೃತಿ ಮಿಶ್ರಾ ಒಟ್ಟೊಟ್ಟಿಗೆ ಸುತ್ತಾಡುತ್ತಿರುವುದನ್ನು ಪತ್ನಿ ತೃಪ್ತಿ ರೆಡ್ ಹ್ಯಾಂಡ್ ಆಗಿ ಹಿಡಿದು ನಡುರಸ್ತೆಯಲ್ಲೇ ಥಳಿಸಿದ್ದಾರೆ. ಮೂವರು ಮಧ್ಯರಸ್ತೆಯಲ್ಲೇ ಕೂದಳು ಹಿಡಿದು ಕಿತ್ತಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಡಿಶಾದ ಜನನಿಬಿಡ ಭುವನೇಶ್ವರ ರಸ್ತೆಯಲ್ಲಿ ಜಗಳವಾಡಿದ್ದಾರೆ. ನಟ ಬಾಬುಸನ್ ಮೊಹಂತಿ ಮತ್ತು ಸಹ ನಟಿ ಪ್ರಕೃತಿ ಮಿಶ್ರಾ ಇಬ್ಬರೂ ಒಟ್ಟಿಗೆ ಕಾರಿನಲ್ಲಿ ಹೋಗುತ್ತಿದ್ದರು. ಅವರನ್ನೇ ಫಾಲೋ ಮಾಡಿಕೊಂಡು ಬಂದ ಪತ್ನಿ ತೃಪ್ತಿ ನಡುರಸ್ತೆಯಲ್ಲೇ ಕಾರನ್ನು ತಡೆದು ನಿಲ್ಲಿಸಿ ತನ್ನ ಪತಿಯ ಪಕ್ಕದಲ್ಲಿ ಕಾರಿನಲ್ಲಿ ಕುಳಿತಿದ್ದ ನಟಿ ಪ್ರಕೃತಿಯನ್ನು ಕೂದಲು ಹಿಡಿದು ಕೆಳಗೆ ಎಳೆದು ಹಾಕಿದ್ದಾರೆ ತೃಪ್ತಿ. ಬಳಿಕ ಗಂಡನನ್ನು ತರಾಟೆ ತೆಗೆದುಕೊಂಡರು. ಕಲಾದಿವರ ಬೀದಿ ಜಗಳದ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ. ಈ ಪ್ರಕರಣ ಇದೀಗ ವೈರಲ್ ಆಗಿದೆ. ಈ ವಿಷಯ ಭುವನೇಶ್ವರದ ಖರವೇಲ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ನಟಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಪ್ರಕೃತಿಯ ಕೂದಲನ್ನು ಎಳೆಯಲು ಪ್ರಯತ್ನಿದರು. ನಟಿ ಪ್ರಕೃತಿಯನ್ನು ಆಟೋ ರಿಕ್ಷಾವನ್ನು ಹತ್ತದಂತೆ ತಡೆದು ತನ್ನ ಕುಟುಂಬವನ್ನು ಹಾಳುಮಾಡಿದ್ದಾಳೆ ಎಂದು ಕೂಗಾಡಿದರು. ತೃಪ್ತಿ ತನ್ನ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾಳೆ ಎಂದು ಪ್ರಕೃತಿ ಸಹ ಕೂಗಾಡಿದರು.&
ನಟ ಬಾಬುಶಾನ್ ಇತ್ತೀಚಿಗಷ್ಟೆ ಒಡಿಯಾದ ಪ್ರೇಮಂ ಸಿನಮಾದಲ್ಲಿ ಪ್ರಕೃತಿಯೊಂದಿಗೆ ತೆರೆಹಂಚಿಕೊಂಡಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ನಟಿ ಪ್ರಕೃತಿ ಅವರ ತಾಯಿ ಕೃಷ್ಣಪ್ರಿಯಾ ಮಿಶ್ರಾ ಖರವೇಲ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ, ಕೆಲವು ಜನರು ತಮ್ಮ ಮಗಳು ಕೆಲಸಕ್ಕೆ ಹೋಗುತ್ತಿದ್ದ ವಾಹನವನ್ನು ತಡೆದು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀದ್ದಾರೆ ಎಂದು ಭುವನೇಶ್ವರ್ ಡಿಸಿಪಿ ಪ್ರತೀಕ್ ಸಿಂಗ್ ಹೇಳಿದ್ದಾರೆ. ಇನ್ನು ಪ್ರಕರಣದ ತನಿಖೆ ನಡೆಯುತ್ತಿದೆ ಎಂದಿದ್ದಾರೆ.