Asianet Suvarna News Asianet Suvarna News

ತಲಾ ಅಜಿತ್ ಮನೆಯೆದುರು ಆತ್ಮಹತ್ಯೆಗೆ ಯತ್ನಿಸಿದ ನರ್ಸ್

ನಿಮ್ಮಿಂದ ನನ್ನ ಕೆಲಸ ಕಿತ್ತುಕೊಂಡರು, ನನ್ನ ಸಾವಿಗೆ ನೀವೇ ಕಾರಣ ಎಂದು ಆತ್ಮಹತ್ಯೆಗೆ ಯತ್ನಿಸಿದ ಖಾಸಗಿ ಆಸ್ಪತ್ರೆ ನರ್ಸ್...

Nurse attempts suicide by setting herself ablaze in front of actor Thala Ajith house vcs
Author
Bangalore, First Published Oct 7, 2021, 1:42 PM IST
  • Facebook
  • Twitter
  • Whatsapp

ಕಾಲಿವುಡ್ (Kollywood) ಸೂಪರ್ ಸ್ಟಾರ್, ಸಾಲ್ಟ್‌ ಆ್ಯಂಡ್ ಪೆಪ್ಪರ್‌ (Salt and Pepper) ಹ್ಯಾಂಡ್ಸಮ್ ತಲಾ ಅಜಿತ್ (Ajith Kumar) ಸೋಷಿಯಲ್ ಮೀಡಿಯಾ, ಪ್ರಚಾರ ಹಾಗೂ ಪ್ಯಾಪರಾಜಿಗಳಿಂದ ಸದಾ ಕೊಂಚ ದೂರ ಉಳಿಯುವ ವ್ಯಕ್ತಿ. ವೈಯಕ್ತಿಕ ವಿಚಾರಗಳನ್ನು ತುಂಬಾನೇ ಪ್ರೈವೇಟ್ ಆಗಿಡಲು ಇಷ್ಟ ಪಡುವ ವ್ಯಕ್ತಿಯೇ ಆದರೂ ಅಭಿಮಾನಿಗಳು ಶೇರ್ ಮಾಡಿಕೊಳ್ಳುವ ವಿಡಿಯೋ ಹಾಗೂ ಫೋಟೋಗಳ ಬಗ್ಗೆ ಏನೂ ಮಾತನಾಡುವುದಿಲ್ಲ.

ಆದರೆ ಕಳೆದು ವರ್ಷ ಅಜಿತ್ ಮತ್ತು ಪತ್ನಿ ಶಾಲಿನಿ (Shalini Ajith) ಖಾಸಗಿ ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಅಜಿತ್‌ ಅಸಿಸ್ಟೆಂಟ್‌ ಇಂಥ ವೀಡಿಯೋಗಳ ಬಗ್ಗೆ ಮೊದಲೇ ಮುನ್ನೆಚ್ಚರಿಕೆ ವಹಿಸಿರುತ್ತಾರೆ. ಆದರೂ ಈ ರೀತಿ ಖಾಸಗೀ ವಿಚಾರಗಳು ಹೊರ ಬಂದರೆ, ಸುಮ್ಮನೆ ಬಿಡುವವರಲ್ಲ.  ಆ ಆಸ್ಪತ್ರೆಯಲ್ಲಿ ನರ್ಸ್ (Nurse) ಆಗಿ ಕೆಲಸ ಮಾಡುತ್ತಿದ್ದ ಫಿರ್ಜಾನಾ (Farzana) ಹೆಸರಿನ ಮಹಿಳೆ  ದಂಪತಿ ವಿಡಿಯೋ ಸೆರೆ ಹಿಡಿದು ಅಪ್ಲೋಡ್ ಮಾಡಿದ್ದರು. ಇದು ಅಜಿತ್ ಮ್ಯಾನೇಜ್‌ಮೆಂಟ್‌ ಗಮನಕ್ಕೆ ಬಂದ ಕೂಡಲೇ ಆಕೆಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಅಂದಿನಿಂದಲೂ ಅಜಿತ್ ಕುಟುಂಬವನ್ನು ಭೇಟಿ ಮಾಡಲು ಫಿರ್ಜಾನಾ  ಪ್ರಯತ್ನಿಸುತ್ತಲೇ ಇದ್ದರು.

Nurse attempts suicide by setting herself ablaze in front of actor Thala Ajith house vcs

ಕೆಲವು ತಿಂಗಳ ಹಿಂದೆ ಅಜಿತ್ ಪತ್ನಿ ಶಾಲಿನಿ ಅವರನ್ನು ಭೇಟಿ ಮಾಡಿ, ನಡೆದಿರುವ ಘಟನೆಯನ್ನು ವಿವರಿಸಿದ್ದರು. ಆಸ್ಪತ್ರೆ (Hospital) ಮ್ಯಾನೇಜ್‌ಮೆಂಟ್ ಜೊತೆ ಮಾತನಾಡಿದ ಶಾಲಿನಿ, ಫಿರ್ಜಾನಾ ಅವರನ್ನು ಮರು ಕೆಲಸಕ್ಕೆ ಸೇರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಫಿರ್ಜಾನಾ ಆಸ್ಪತ್ರೆಯಲ್ಲಿರುವ ಕೆಲವು ಸಿಬ್ಬಂದಿ ಜೊತೆ ಹಾಗೂ ಇನ್ನಿತರ ಜೊತೆ ಕಿರಿಕ್ ಮಾಡಿಕೊಳ್ಳುವ ಕಾರಣ ಬೇಡವೇ ಬೇಡ ಎಂದು ಮ್ಯಾನೇಜ್‌ಮೆಂಟ್‌ನವರು ತಿಳಿಸಿದ್ದಾರೆ. 

ಬೈಕ್‌ ಪಕ್ಕಕ್ಕಿಟ್ಟು ಸೈಕಲ್ ಏರಿದ ನಟ ಅಜಿತ್; 30 ಸಾವಿರಕ್ಕೂ ಅಧಿಕ ಕಿಮೀ. ಸವಾರಿ!

ಅಜಿತ್‌ ಕುಟುಂಬದಿಂದ ನನ್ನ ಕೆಲಸ ಹೋಗಿದೆ. ನನಗೆ ಬೇರೆ ಎಲ್ಲಿಯೂ ಕೆಲಸ ಸಿಗುತ್ತಿಲ್ಲ, ಎಂದು ನರ್ಸ್ ಫಿರ್ಜಾನಾ ಅಕ್ಟೋಬರ್ 6ರಂದು, ಅಜಿತ್ ಮನೆ ಮುಂದೆ ಕುಳಿತು ಪ್ರತಿಭಟನೆ ಮಾಡಿದ್ದಾರೆ. ಸ್ನೇಹಿತೆ ಸಹಾಯ ಪಡೆದು, ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದಾರೆ. ತಕ್ಷಣವೇ ಸುತ್ತ ಇದ್ದ ಜನರು ನೀರು ಹಾಕಿ ನರ್ಸ್ ಫಿರ್ಜಾನಾರನ್ನು ರಕ್ಷಣೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಫಿರ್ಜಾನಾ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ರಸ್ತೆ ಬದಿ ಇಡ್ಲಿ ಮಾರುತ್ತಿದ್ದ ವ್ಯಕ್ತಿಗೆ 1 ಲಕ್ಷ ರೂ ನೀಡಿದ ಅಜಿತ್, ಕಾರಣ ಸಖತ್ ಟ್ರೆಂಡಿಂಗ್!

ಸದ್ಯ ಅಜಿತ್ Valimai ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಟೀಸರ್ ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಲಾಗಿತ್ತು. ಬೋನಿ ಕಪೂರ್ (Boney Kapoor) ನಿರ್ಮಾಣ ಮಾಡಿರುವ ಈ ಚಿತ್ರದ ಬಗ್ಗೆ ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ಮುಂದಿನ ವರ್ಷ ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ ಮಾಡುತ್ತಿದೆ ತಂಡ.

Follow Us:
Download App:
  • android
  • ios