ತೆಲುಗು ರಾಜ್ಯದಲ್ಲಿ ಭೀಕರ ಪ್ರವಾಹ: ಆಂಧ್ರ ಮತ್ತು ತೆಲಂಗಾಣಕ್ಕೆ ತಲಾ 50 ಲಕ್ಷ ರೂ. ನೆರವು ಕೊಟ್ಟ ಜೂ. ಎನ್‌ಟಿಆರ್‌

ಇತ್ತೀಚೆಗೆ ಸುರಿದ ಮಳೆಗೆ ಎರಡೂ ತೆಲುಗು ರಾಜ್ಯಗಳಲ್ಲಿ ಪ್ರವಾಹ ಭೀತಿ ಹುಟ್ಟಿಸಿದೆ. ಸಿನಿ ತಾರೆಯರು ಸಂತ್ರಸ್ತರಿಗೆ ಆಸರೆಯಾಗಲು ಮುಂದೆ ಬಂದಿದ್ದಾರೆ. ಅದರಲ್ಲಿ ನಟ ಜ್ಯೂನಿಯರ್ ಎನ್‌ಟಿಆರ್ ಬರೋಬ್ಬರಿ 1 ಕೋಟಿ ರೂ. ಪರಿಹಾರ ನಿಧಿಗೆ ಹಣ ಸಹಾಯ ಮಾಡಿದ್ದಾರೆ.

NTR Donates Generously to Andhra Pradesh and Telangana Flood Relief sat

ಆಂಧ್ರಪ್ರದೇಶ/ ತೆಲಂಗಾಣ (ಸೆ.08) :  ತಮ್ಮ ಕಷ್ಟದ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ಸಿನಿಮಾ ತಾರೆಯರು ಯಾವಾಗಲೂ ಮುಂದಿರುತ್ತಾರೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಎರಡೂ ತೆಲುಗು ರಾಜ್ಯಗಳಲ್ಲಿ ಪ್ರವಾಹ ಉಂಟಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹ ಪೀಡಿತರಿಗೆ ಸಿನಿ ತಾರೆಯರು ನೆರವಾಗಲು ಮುಂದೆ ಬಂದಿದ್ದಾರೆ. ಜೂನಿಯರ್ ಎನ್‌ಟಿಆರ್ ಎರಡೂ ತೆಲುಗು ರಾಜ್ಯಗಳಿಗೆ ಸೇರಿ ಒಂದು ಕೋಟಿ ರೂಪಾಯಿಗಳನ್ನು (1 crore Rupees) ನೀಡಿದ್ದಾರೆ. ಈ ಬಗ್ಗೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

‘ಎರಡೂ ತೆಲುಗು ರಾಜ್ಯಗಳಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ನನ್ನನ್ನು ತುಂಬಾ ಕಲಚಿದೆ. ಪ್ರವಾಹ ಪೀಡಿತರು ಶೀಘ್ರವೇ ಈ ಸಂಕಷ್ಟದಿಂದ ಹೊರಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 50 ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಮೊಬೈಲ್‌ನಲ್ಲಿ ಎಷ್ಟೇ ಮಾತನಾಡಿದರೂ ಯಾವುದೇ ಕ್ಯಾನ್ಸರ್ ಬರೊಲ್ಲ: ವಿಶ್ವ ಆರೋಗ್ಯ ಸಂಸ್ಥೆ!

ವಿಶ್ವಕ್ ಸೇನ್ ಆಂಧ್ರಪ್ರದೇಶದ ಜನರಿಗೆ 5 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ‘ಈ ಕಷ್ಟದ ಸಮಯದಲ್ಲಿ, ಆಂಧ್ರಪ್ರದೇಶದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದೇನೆ. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವವರ ನೋವನ್ನು ಕಡಿಮೆ ಮಾಡಲು ನನ್ನಿಂದಾದ ಸಹಾಯ’ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ವೈಜಯಂತಿ ಮೂವీಸ್ ಆಂಧ್ರಪ್ರದೇಶ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದೆ. ‘ಆಯ್’ ಚಿತ್ರತಂಡವು ಪ್ರವಾಹ ಪೀಡಿತರಿಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿದೆ. ಸೋಮವಾರದಿಂದ ವಾರಾಂತ್ಯದವರೆಗೆ ಸಿನಿಮಾದ ಗಳಿಕೆಯಲ್ಲಿ ನಿರ್ಮಾಪಕರ ಪಾಲಿನ ಶೇಕಡಾ 25 ರಷ್ಟನ್ನು ಜನಸೇನಾ ಪಕ್ಷದ ಮೂಲಕ ನೀಡಲಾಗುವುದು ಎಂದು ಘೋಷಿಸಲಾಗಿದೆ.

Latest Videos
Follow Us:
Download App:
  • android
  • ios