ಸಿನಿಮಾ ಶೂಟಿಂಗ್, ಮಾಲ್ಡೀವ್ಸ್ ಟ್ರಿಪ್‌ನಿಂದ ಇಷ್ಟು ದಿನ ಸುದ್ದಿಯಾಗುತ್ತಿದ್ದ ಬಾಲಿವುಡ್‌ ಹಾಟ್‌ ನಟಿ ಮೌನಿ ರಾಯ್‌ ಫೋಟೋವನ್ನು ಇದ್ದಕ್ಕಿದ್ದಂತೆ ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್ ಟ್ಟಿಟರ್‌ ಖಾತೆಯಲ್ಲಿ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. ಯಾವಾಗಿನಿಂದ ಸಿನಿಮಾ ಅಪ್ಡೇಟ್ ಶುರುವಾಯ್ತು ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಅಡ್ಮಿನ್ ಕಾಲೆಳೆದಿದ್ದಾರೆ...

ಲವ್ಲೀ ರೆಡ್‌ನಲ್ಲಿ ಮೌನಿ ರಾಯ್: ಸಿಂಪಲ್ ಕಾಣಿಸೋ ಸೀರೆ ಇಷ್ಟೊಂದು ಕಾಸ್ಟ್ಲೀನಾ? 

ಎನ್‌ಎಸ್‌ಇ:
ಬ್ಲಾಕ್ ಟಾಪ್‌ನಲ್ಲಿ ಮಿಂಚುತ್ತಿರುವ ಮೌನಿ ಫೋಟೋ ಅಪ್ಲೋಡ್ ಮಾಡಿ 'ಶನಿವಾರದ ಟೆಂಪ್ರೇಚರ್‌ ಹೆಚ್ಚು ಮಾಡಲು...ಮೌನಿ ರಾಯ್‌ ಹಾಟ್‌ ಫೋಟೋ' ಎಂಬುದಾಗಿ ಟ್ಟೀಟ್ ಮಾಡಲಾಗಿತ್ತು. ಅದರ ಜೊತೆ ಸೆಕ್ಸಿ ದಿವಾ, ಹಾಟ್ ಗರ್ಲ್, ಬಾಲಿವುಡ್‌ ಬ್ಯೂಟಿ ದಿವಾ ಎಂದೆಲ್ಲಾ ಹ್ಯಾಷ್‌ಟ್ಯಾಗ್ ನೀಡಲಾಗಿತ್ತು. ಫೋಟೋ ಅಪ್ಲೋಡ್ ಆದ ಕೆಲವೇ ಕ್ಷಣಗಳ ಸ್ಕ್ರೀನ್‌ ಶಾಟ್‌ ತೆಗೆದುಕೊಂಡ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲು ಶುರು ಮಾಡಿದ್ದರು.

ಸ್ಪಷ್ಟನೆ:
ಭಾರತೀಯ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಟ್ಟಿಟರ್‌ ಖಾತೆಯಲ್ಲಿ ತನ್ನ ಫೋಟೋ ನೋಡಿ ಮೌನಿಯೂ ಶಾಕ್ ಆಗಿ, ಮೌನಕ್ಕೆ ಮೊರೆ ಹೋಗಿದ್ದು ಸುಳ್ಳಲ್ಲ. ಯಾವುದೇ ರೀತಿಯ ಪ್ರತ್ರಿಕ್ರಿಯೆ ನೀಡಿಲ್ಲ. ಅಷ್ಟರಲ್ಲಿ ಎನ್‌ಎಸ್‌ಇ ಈ ಕೃತ್ಯಕ್ಕೆ ಕ್ಷಮೆ ಕೇಳಿತ್ತು.

ಮಾಲ್ಡೀವ್ಸ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಮೌನಿ ರಾಯ್; ವಿಡಿಯೋ ವೈರಲ್! 

'ಇಂದು ಮಧ್ಯಾಹ್ನ 12.25ಕ್ಕೆ ಎನ್‌ಎಸ್‌ಇ ಟ್ಟೀಟರ್‌ನಲ್ಲಿ ಅನಗತ್ಯ ಪೋಸ್ಟ್ ಶೇರ್ ಮಾಡಲಾಗಿತ್ತು. Its human Error, ನಮ್ಮ ಟ್ಟಿಟರ್ ಖಾತೆ ಹ್ಯಾಕ್ ಆಗಿಲ್ಲ, ಏಜೆನ್ಸಿ ಮಾಡಿರುವ ತಪ್ಪಿದು. ನಮ್ಮ ಫಾಲೋವರ್ಸ್‌ಗೆ ಕ್ಷಮೆಯಾಚಿಸುತ್ತೇವೆ,'ಎಂದು ಟ್ಟೀಟ್ ಮಾಡಿ ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದೆ.

 

ಸ್ಟಾಕ್ ಮಾರುಕಟ್ಟೆಯಲ್ಲಿ ಹಣ ಹೂಡಿ, ಗೂಳಿಯ ಓಡಾಟದ ಕಡೆ ಗಮನ ಕೊಡೋ ಮಂದಿ ಸದಾ ಸ್ಟಾಕ್ ಎಕ್ಸ್‌ಚೇಂಜ್ ಮಾರುಕಟ್ಟೆ ಸೋಷಿಯಲ್ ಮೀಡಿಯಾ ಪುಟಗಳನ್ನು ಫಾಲೋ ಮಾಡುತ್ತಲೇ ಇರುತ್ತಾರೆ. ಅಂಥ ಸಂದರ್ಭದಲ್ಲಿ ಇಂಥ ಯಡವಟ್ಟಾದರೆ ಏನಾಗಿರಬೇಡ ಪರಿಸ್ಥಿತಿ? ಮನುಷ್ಯನಿಂದ ತಪ್ಪಾಗೋದು ಸಹಜ. ಆದರೆ, ಇಂಥ ಯಡವಟ್ಟಾದರೆ ಕಷ್ಟ.