ಬೇಸಿಗೆ ಇಲ್ಲಿದೆ ನೋಡಿ! ಸಮ್ಮರ್ ಬಂದಿದ್ದೇ ತಡ, ಬೇಸಗೆಯ ಬಿಸಿಗಿಂತಲೂ ಹಾಟ್ ಲುಕ್‌ನಲ್ಲಿ ಮಿಂಚುತ್ತಿದ್ದಾರೆ ಬಾಲಿವುಡ್ ನಟಿಯರು. ಲೇಟೆಸ್ಟ್ ಆಗಿ ನಟಿ ಇಶಾ ಅವರ ಸರದಿ.

ಇಶಾ ಕೊಪ್ಪಿಕರ್ ಅವರ ಇನ್ಸ್ಟಾಗ್ರಾಮ್ ಪೋಸ್ಟ್‌ ವೈರಲ್ ಆಗಿದೆ. ನಟಿ ಇಶಾ ತನ್ನ ಇನ್ಸ್ಟಾಗ್ರಾಂ ಫ್ಯಾಮಿಲಿಗೆ ತನ್ನ ಈಜುಡುಗೆ ಫೋಟೋಶೂಟ್‌ನ ಫೋಟೋ ತೋರಿಸಿದ್ದಾರೆ.

ಪಿಗ್ಗಿಯ ಈ ಸಮ್ಮರ್ ಡ್ರೆಸ್ ಬೆಲೆಗೆ ಒಂದಲ್ಲ, 4 ಗೇಮಿಂಗ್ ಲ್ಯಾಪ್‌ಟಾಪ್ ಬರ್ತಿತ್ತು..!

ಫೋಟೋಗಳಲ್ಲಿ, ನಟಿ ಕಪ್ಪು ಮತ್ತು ಬಿಳಿ ಪಟ್ಟಿಯ ಈಜುಡುಗೆಯಲ್ಲಿ ಈಜುಕೊಳದ ಮುಂದೆ ಪೋಸ್ ಕೊಡೋದನ್ನು ಕಾಣಬಹುದು. ಅವಳು ತನ್ನ ಈಜುಡುಗೆಯನ್ನು ಬ್ರೈಟ್ ಹಳದಿ ಬ್ಲೇಜರ್, ಚಿನ್ನದ ಮೊಣಕಾಲು ತನಕ ಉದ್ದದ ಬೂಟುಗಳು ಮತ್ತು ಪಾರದರ್ಶಕ ಸನ್‌ಗ್ಲಾಸ್‌ನೊಂದಿಗೆ ಸೇರಿಸಿದ್ದಾರೆ.

ಏಕ್ ವಿವಾ ಐಸಾ ಭಿ ನಟಿ ಫೋಟೋ ಜೊತೆಗೆ ಚಮತ್ಕಾರಿ ಶೀರ್ಷಿಕೆ ಬರೆದಿದ್ದಾರೆ. ಮುಂಬರುವ ವಾರದಲ್ಲಿ ತಾಪಮಾನವು ಏರಿಕೆಯಾಗಲಿದೆ ಎಂದು ನಾನು ಕೇಳಿದೆ, ಅದನ್ನು ಸ್ವಲ್ಪ ಹೆಚ್ಚಿಸುವ ಯೋಚನೆ ಇದೆ ಎಂದು ಹಾಸ್ಯವಾಗಿ ಬರೆದಿದ್ದಾರೆ.