ಬಾಲಿವುಡ್ ಸೆಲೆಬ್ರಿಟಿಗಳಿಗೆ ಕೊರೋನಾ ಶಾಕ್ ಅರ್ಜುನ್ ಕಪೂರ್, ಕರೀನಾ ನಂತರ ಈಗ ನೋರಾಗೂ ಪಾಸಿಟಿವ್ ಮನೆಯಲ್ಲೇ ಕ್ವಾರೆಂಟೈನ್ ಆದ ಡ್ಯಾನ್ಸಿಂಗ್ ಕ್ವೀನ್

ನಟಿ ನೋರಾ ಫತೇಹಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮಗೆ COVID-19 ಗೆ ಪಾಸಿಟಿವ್ ದೃಢಪಟ್ಟಿರುವುದನ್ನು ತಿಳಿಸಿದ್ದಾರೆ. ಕೊರೋನಾಗೆ ಟೆಸ್ಟ್ ಮಾಡಿಸಿದ ನಟಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಹೇ ಗಯ್ಸ್ ದುರದೃಷ್ಟವಶಾತ್ ನಾನು ಸದ್ಯಕ್ಕೆ ಕೊರೋನಾದೊಂದಿಗೆ ಹೋರಾಡುತ್ತಿದ್ದೇನೆ. ಕೊರೋನಾ ನನಗೆ ತೀವ್ರವಾಗಿ ಹೊಡೆದಿದೆ! ನಾನು ಈಗ ವೈದ್ಯರ ಮೇಲ್ವಿಚಾರಣೆಯಲ್ಲಿ ಕೆಲವು ದಿನಗಳಿಂದ ಹಾಸಿಗೆ ಹಿಡಿದಿದ್ದೇನೆ ಎಂದು ಅವರು ತಮ್ಮ Instagram ಸ್ಟೋರಿಯಲ್ಲಿ ಬರೆದಿದ್ದಾರೆ. 29 ವರ್ಷದ ನಟಿ, ದಯವಿಟ್ಟು ಸುರಕ್ಷಿತವಾಗಿರಿ, ನಿಮ್ಮ ಮಾಸ್ಕ್‌ಗಳನ್ನು ಧರಿಸಿ, ಇದು ವೇಗವಾಗಿ ಹರಡುತ್ತದೆ. ಪ್ರತಿಯೊಬ್ಬರ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತದೆ! ಎಂದಿದ್ದಾರೆ.

ಕೊರೋನಾ ಯಾರಿಗಾದರೂ ಬರಬಹುದು, ದಯವಿಟ್ಟು ಜಾಗರೂಕರಾಗಿರಿ! ನಾನು ಚೇತರಿಸಿಕೊಳ್ಳಲು ಕೆಲಸ ಮಾಡುತ್ತಿದ್ದೇನೆ. ಈ ಕ್ಷಣದಲ್ಲಿ ಅದು ಮುಖ್ಯವಾಗಿದೆ. ನಿಮ್ಮ ಆರೋಗ್ಯಕ್ಕಿಂತ ಯಾವುದೂ ಮುಖ್ಯವಲ್ಲ! ಕಾಳಜಿ ವಹಿಸಿ, ಸುರಕ್ಷಿತವಾಗಿರಿ ಎಂದು ನೋಹಾ ಪೋಸ್ಟ್ ಮಾಡಿದ್ದಾರೆ.

ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ಕೇಂದ್ರದ ವಾರ್ನಿಂಗ್!

ನೋರಾ ಫತೇಹಿ ಅವರ ವಕ್ತಾರರು ಎರಡು ದಿನಗಳ ಹಿಂದೆ ನಟಿಗೆ ಪಾಸಿಟಿವ್ ದೃಢಪಟ್ಟಿರುವುದನ್ನು ಎನೌನ್ಸ್ ಮಾಡಿದ್ದರು. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಧಿಕಾರಿಗಳೊಂದಿಗೆ ಅವರು ಸಹಕರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ನಟಿಯ ಚಿತ್ರಗಳು ಹಳೆಯದಾಗಿವೆ. ನಟಿಗೆ COVID-19 ದೃಢಪಟ್ಟ ನಂತರ ಅವರು ಹೊರಗೆ ಬಂದಿಲ್ಲ ಎಂದು ವಕ್ತಾರರು ಹೇಳಿದ್ದಾರೆ.

ನಿನ್ನೆಯಿಂದ ಚಲಾವಣೆಯಲ್ಲಿರುವ ಸ್ಪಾಟಿಂಗ್ ಫೋಟೋಗಳು ಹಳೆಯವು. ನೋರಾ ಇತ್ತೀಚೆಗೆ ಎಲ್ಲಿಯೂ ಹೊರಬಂದಿಲ್ಲ. ಆದ್ದರಿಂದ ದಯವಿಟ್ಟು ಹಳೆಯ ಫೊಟೋಸ್ ಇಗ್ನೋರ್ ಮಾಡಲು ನಾವು ವಿನಂತಿಸುತ್ತೇವೆ ಎಂದು ವಕ್ತಾರರು ತಿಳಿಸಿದ್ದಾರೆ.

ನೋರಾ ಫತೇಹಿ ಅವರು ಸತ್ಯಮೇವ ಜಯತೇ ಚಿತ್ರದ ದಿಲ್ಬರ್ ಹಾಡಿನ ನೃತ್ಯದ ಮೂಲಕ ಜನಪ್ರಿಯರಾದರು. ಅವರು ವರುಣ್ ಧವನ್ ಮತ್ತು ಶ್ರದ್ಧಾ ಕಪೂರ್ ಅವರೊಂದಿಗೆ ಸ್ಟ್ರೀಟ್ ಡ್ಯಾನ್ಸರ್ 3D ಯಂತಹ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಸಲ್ಮಾನ್ ಖಾನ್ ಅವರ ಭಾರತ್ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಜಾನ್ ಅಬ್ರಹಾಂ ಮತ್ತು ದಿವ್ಯಾ ಖೋಸ್ಲಾ ಕುಮಾರ್ ನಟಿಸಿದ ಸತ್ಯಮೇವ ಜಯತೆ 2 ಅನ್ನು ಒಳಗೊಂಡಿದ್ದರು. ನೋರಾ ಭುಜ್: ದಿ ಪ್ರೈಡ್ ಆಫ್ ಇಂಡಿಯಾದಲ್ಲಿ ಅಜಯ್ ದೇವಗನ್, ಸಂಜಯ್ ದತ್ ಮತ್ತು ಸೋನಾಕ್ಷಿ ಸಿನ್ಹಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.