Asianet Suvarna News Asianet Suvarna News

FIFA World Cup 2022; ತಲೆಕೆಳಗಾಗಿ ರಾಷ್ಟ್ರಧ್ವಜ ಹಾರಿಸಿದ ನಟಿ ನೋರಾ ಫತೇಹಿ, ಸಖತ್ ಟ್ರೋಲ್

ನಟಿ ನೋರಾ ಫತೇಹಿ ಫಿಫಾ ವಿಶ್ವಕಪ್‌ನಲ್ಲಿ ತಲೆಕೆಳಗಾಗಿ ಭಾರತದ ಧ್ವಜ ಹಾರಿಸಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. 

Nora Fatehi gets trolled for holding national flag upside down at FIFA fan fest sgk
Author
First Published Dec 2, 2022, 5:48 PM IST

FIFA ವಿಶ್ವಕಪ್ 2022 ಕತಾರ್‌ನಲ್ಲಿ ನಡೆಯುತ್ತಿದೆ. ಇತ್ತೀಚಿಗಷ್ಟೆ ಫ್ಯಾನ್‌ಫೆಸ್ಟ್ ಮಾಡಲಾಗಿದ್ದು ಭಾರತದಿಂದ ನಟಿ, ಡಾನ್ಸರ್ ನೋರಾ ಫತೇಹಿ ಭಾಗವಹಿಸಿದ್ದರು. ಹಾಜರಿ ಹಾಕಿದ್ದಷ್ಟೆ ಅಲ್ಲದೇ ನೋರಾ ಫತೇಹಿ ವಿಶೇಷ ಪ್ರದರ್ಶನ ನೀಡಿದ್ದರು. ಬಾಲಿವುಡ್‌ನ ಅನೇಕ ಸೂಪರ್ ಹಿಟ್ ಹಾಡುಗಳಿಗೆ ನೋರಾ ಫತೇಹಿ ಹೆಜ್ಜೆ ಹಾಕಿದರು. ನೋರಾ ಅವರ ಜನಪ್ರಿಯಾ ಸಾಕಿ ಸಾಕಿ..., ಮಾನಿಕೆ...ಹಾಡು ಸೇರಿದಂತೆ ಅನೇಕ ಬಾಲಿವುಡ್ ಗೀತೆಗಳಿಗೆ ಡಾನ್ಸ್ ಮಾಡಿದರು. ಡಾನ್ಸ್ ಮಾಡುತ್ತಾ ಭಾರತದ ಧ್ವಜ ಹಾರಿದರು. ಜೈ ಹಿಂದ್ ಎಂದು ಕೂಗಿದರು. ಆದರೂ ನೋರಾ ಫತೇಹಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ತಿರಂಗಾಗೆ ಅವಮಾನ ಮಾಡಿದ್ದಾರೆ ಎಂದು ನೆಟ್ಟಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ. 

ನೃತ್ಯ ಮಾಡುವಾಗ ನೋರಾ ಫತೇಹಿ ಭಾರತದ ಧ್ವಜ ಹಾರಿದರು. ಧ್ವಜ ತೆಗೆದುಕೊಂಡ ನೋರಾ ಮೊದಲು ಸರಿಯಾಗಿ ಹಾರಿಸಿದರು. ಆದರೆ ನಂತರ ತಲೆಕೆಳಗಾಗಿ ರಾಷ್ಟ್ರಧ್ವಜವನ್ನು ಹಾರಿಸಿದರು. ದಿಲ್ಬರ್ ನಟಿ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ನೋರಾ ಉಲ್ಟಾ ತಿರಂಗಾ ಹಾರಿಸಿದ ಫೋಟೋ ಶೇರ್ ಮಾಡಿ ಅಸಮಾಧಾನ ಹೊರಹಾಕುತ್ತಿದ್ದಾರೆ.     

ಬ್ರೇಕ್ ಅಪ್ ನಂತರ ನೋರಾ ಫತೇಹಿ ಖಿನ್ನತೆಗೆ ಒಳಗಾಗಿದ್ದಾರಾ?

ನೋರಾ ಫತೇಹಿ ಡಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ನೋರಾ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದ್ಭುತವಾಗಿದ್ದು ಡಾನ್ಸ್ ಎಂದು ಹೇಳಿ ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. FIFA ವಿಶ್ವಕಪ್ 2022 ಕತಾರ್‌ನಲ್ಲಿ ನಿಮ್ಮ ಡಾನ್ಸ್ ನೋಡಿ ಸಂತಸವಾಯಿತು ಎಂದು ಹೇಳುತ್ತಿದ್ದಾರೆ. ಹಾರ್ಟ್ ಮತ್ತು ಬೆಂಕಿ ಇಮೋಜಿ ಇರಿಸಿ ಅಭಿನಂದಿಸುತ್ತಿದ್ದಾರೆ. ಆದರೆ ಅದೇ ಸಮಯಕ್ಕೆ ತಲೆಕಳಗಾಗಿ ತಿರಂಗಾ ಹಾರಿಸಿ ಟ್ರೋಲ್ ಆಗುತ್ತಿದ್ದಾರೆ.

FIFA 2022 - ಅಧಿಕೃತ ಫುಟ್‌ಬಾಲ್ ಗೀತೆಯನ್ನು ಹಾಡಲಿರುವ ನೋರಾ ಫತೇಹಿ

ನೋರಾ ಫತೇಹಿ ಸಿನಿಮಾ ವಿಚಾರಕ್ಕೆ ಬರುವುದಾದರೆ ಆಯುಷ್ಮಾನ್ ಖುರಾನ ಅವರ ಆಕ್ಷನ್ ಥ್ರಿಲ್ಲರ್ ಚಿತ್ರ `ಏನ್ ಆಕ್ಷನ್ ಹೀರೋ` ಸಿನಿಮಾದಲ್ಲಿ `ಜೇಧಾ ನಶಾ` ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ನೋರಾ ಡಾನ್ಸ್‌ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾ  ಜೊತೆಗೆ ಕಾಮಿಡಿ ಸಿನಿಮಾ `100%` ನಲ್ಲಿ ಜಾನ್ ಅಬ್ರಹಾಂ, ರಿತೇಶ್ ದೇಶಮುಖ್ ಮತ್ತು ಶೆಹನಾಜ್ ಗಿಲ್ ಅವರೊಂದಿಗೆ ನಟಿಸಿದ್ದಾರೆ. ಸಿನಿಮಾ ಜೊತೆಗೆ ಟಿವಿಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋ 'ಝಲಕ್ ದಿಕ್ಲಾ ಜಾ' ಸೀಸನ್ 10 ರಲ್ಲಿ ನೋರಾ ಜಡ್ಜ್ ಸ್ಥಾನದಲ್ಲಿ ಕುಳಿತಿದ್ದಾರೆ. ಕೊನೆಯದಾಗಿ ನೋರಾ ಸಿದ್ಧಾರ್ಥ್ ಮಲ್ಹೋತ್ರಾ ಅವರ ಥ್ಯಾಂಕ್ ಯು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಅಜಯ್ ದೇವಗನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 


 
 

Follow Us:
Download App:
  • android
  • ios