ಬಾಲಿವುಡ್‌ ಸ್ಟಾರ್ ಕಿಡ್, ಸೋಷಿಯಲ್ ಮೀಡಿಯಾ ಸ್ಟಾರ್ ತೈಮೂರ್‌ ಅಲಿ ಖಾನ್‌ 4ನೇ ವಯಸ್ಸಿಗೆ ಮದುವೆ ಪ್ರಪೋಸಲ್ಸ್ ಬರಲು ಶುರುವಾಗಿವೆ. ನಟಿ ಕರೀನಾ ಕಪೂರ್‌ ನಡೆಸಿಕೊಡುವ 'ವಾಟ್‌ ವಿಮೆನ್ ವಾಂಟ್' ಕಾರ್ಯಕ್ರಮದಲ್ಲಿ ನಟಿ ನೋರಾ ಫತೇಹಿ ಏನು ಹೇಳಿದ್ದಾರೆ ಕೇಳಿಸಿಕೊಳ್ಳಿ...

ತೈಮೂರ್‌ಗೆ ಸಿಕ್ಕಾಪಟ್ಟೆ ಸಿಟ್ಟು: ಮೀಡಿಯಾ ನೋಡಿ ನಾಟ್‌ ಎಲೌಡ್ ಎಂದು ಕಿರುಚಿದ ಕರೀನಾ ಮಗ 

ನೋರಾ ಫತೇಹಿ ಅಂದ್ರೆ ಡ್ಯಾನ್ಸ್, ಡ್ಯಾನ್ಸ್ ಅಂದ್ರೆ ನೋರಾ. ಯಾವ ಕಾರ್ಯಕ್ರಮದಲ್ಲಿ ಭಾಗಿಯಾದರೂ ನೋರಾಳ ಡ್ಯಾನ್ಸ್ ಬಗ್ಗೆ ಮಾತನಾಡದೇ ಸಂದರ್ಶನ ಮುಂದುವರಿಯುವುದಿಲ್ಲ. ಈ ವೇಳೆ ನೋರಾ 'ತೈಮೂರ್ ದೊಡ್ಡವನಾದ ಮೇಲೆ ನಾನು ಆವನ ಜೊತೆ ಮದುವೆಯಾಗ ಬೇಕು ಎಂದುಕೊಂಡಿರುವೆ. ನೀವು ಎಂಗೇಜ್‌ಮೆಂಟ್ ಅಥವಾ ಮದುವೆಗೆ ಪ್ಲಾನ್ ಮಾಡುತ್ತಿದ್ದೀರಾ? ನಾನು ಎಷ್ಟು ವರ್ಷ ಬೇಕಾದರೂ ಸಿಂಗಲ್‌ ಆಗಿರಲು ಸಿದ್ಧ, ಕಾಯಲು ರೆಡಿಯಾಗಿರುವೆ,' ಎಂದು ಹೇಳುತ್ತಾರೆ.

ಮದುವೆ ಪ್ರಪೋಸ್‌ ಬಗ್ಗೆ ಕೇಳಿ ಶಾಕ್ ಆದ ಕರೀನಾ ಕಪೂರ್ 'ತೈಮೂರ್‌ಗೆ ಇನ್ನೂ 4 ವರ್ಷ. ಮದುವೆಯಾಗಲು ತುಂಬಾ ವರ್ಷಗಳು ಬೇಕು. ಡೋಂಟ್ ವರಿ,' ಎಂದು ಉತ್ತರಿಸುತ್ತಾರೆ. 

Happy Birthday ತೈಮೂರ್: ಹುಲ್ಲು ಹೊತ್ತು ತರ್ತಾನೆ ಸೈಫ್ ಮುದ್ದಿನ ಮಗ 

ಕರೀನಾ ಹಾಗೂ ಸೈಫ್‌ ಮೊದಲ ಪುತ್ರ ತೈಮೂರ್ ಹುಟ್ಟಿದಾಗಿನಿಂದಲೂ ಕ್ಯಾಮೆರಾ ಕಣ್ಣುಗಳಿಗೆ ಗುರಿಯಾಗಿರುವ ಬಾಲಕ. ತೈಮೂರ್ ಹೆಸರಿನಲ್ಲಿ ಅಭಿಮಾನಿಗಳು ಗೊಂಬೆಗಳನ್ನು ತಯಾರಿಸಿದ್ದರು. ಇತ್ತೀಚಿಗೆ ಕ್ಯಾಮೆರಾ ಕಂಡರೆ 'No ಫೋಟೋ' ಎಂದು ಕೂಗಿ ಹೇಳುವ ಧ್ವನಿಯೂ ವೈರಲ್ ಆಗುತ್ತಿದೆ.  ತೈಮೂರ್ ಪಡೆಯುತ್ತಿರುವ ಅಟೆನ್ಷನ್‌ ಎರಡನೇ ಮಗು ಕೂಡ ಪಡೆಯಲಿದೆಯೇ ನೋಡಬೇಕು...

"