ಬಾಲಿವುಡ್ ನಟಿ ನೋರಾ ಫತೇಹಿಗೆ(Nora Fatehi) ಏನಾಯ್ತು ? ಹೌದು ಸದಾ ಡ್ಯಾನ್ಸ್ ಅಂತ ಬ್ಯುಸಿ ಇರೋ ನಟಿಯನ್ನು ಸ್ಟ್ರೆಚರ್‌ನಲ್ಲಿ ಎತ್ತಿ ಒಯ್ಯಲಾಗಿದೆ. ಆಗಿದ್ದೇನು ?
ಕಳೆದ ವರ್ಷ ಅವರ ಸಖತ್ ಹಿಟ್ ಆದ 'ನಾಚ್ ಮೇರಿ ರಾಣಿ' ಯಶಸ್ಸಿನ ನಂತರ, ನೋರಾ ಫತೇಹಿ(Nora Fatehi) ಮತ್ತೊಂದು ಸಖತ್ ಸಾಂಗ್ ತಯಾರಿಸಲು ಮರಳಿದ್ದಾರೆ. ಸ್ಟೈಲಿಷ್ ನಟಿ ಈಗ ಗುರು ರಾಂಧವಾ ಅವರೊಂದಿಗೆ ಮುಂಬರುವ ಸಾಂಗ್ 'ಡ್ಯಾನ್ಸ್ ಮೇರಿ ರಾಣಿ' ಮೂಲಕ ತನ್ನ ಅಭಿಮಾನಿಗಳು ಮತ್ತು ಫಾಲೋವರ್ಸ್ಗೆ ಸಖತ್ ಟ್ರೀಟ್ ನೀಡಲು ಸಿದ್ಧರಾಗಿದ್ದಾರೆ. ಹೊಸ ಟ್ರ್ಯಾಕ್ ಅನ್ನು ಗೀತರಚನೆಕಾರ ರಶ್ಮಿ ಬರೆದಿದ್ದಾರೆ. ತನಿಷ್ಕ್ ಬಾಗ್ಚಿ ಸಂಯೋಜಿಸಿದ್ದಾರೆ. ಜಹ್ರಾ ಎಸ್ ಖಾನ್ ಅವರು ತಮ್ಮ ಗಾಯನವನ್ನು ಸಹ ನೀಡಿದ್ದಾರೆ. ಇತ್ತೀಚೆಗಷ್ಟೇ ನೋರಾ ಮತ್ಸ್ಯಕನ್ಯೆಯಾಗಿ ತನ್ನ ಲುಕ್ ಅನ್ನು ಶೇರ್ ಮಾಡಿದ್ದು, ಆಕೆಯ ಲುಕ್‌ಗೆ ಅಭಿಮಾನಿಗಳು ಮನಸೋತಿದ್ದಾರೆ.
ಮತ್ಸ್ಯಕನ್ಯೆಯಾಗಿ ಮರ್ಮೈಡ್ ಸೂಟ್‌ನಲ್ಲಿ ನೋರಾ ಫತೇಹಿ ಸಖತ್ ಸ್ಟೈಲಿಷ್ ಅಗಿ ಕಾಣುತ್ತಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಮುಂಬರುವ ಹಾಡಿನ ಚಿತ್ರೀಕರಣದ ಸಮಯದಲ್ಲಿ, ನೋರಾ ತನ್ನ ವಿಶೇಷ ವೇಷಭೂಷಣದಲ್ಲಿ ನಡೆಯುವಂತೆಯೂ, ಓಡುವಂತೆಯೂ ಇರಲಿಲ್ಲ. ಹೌದು. ಇದೇ ನೋಡಿ ಫನ್ನಿ ಪಾಯಿಂಟ್. ಮೀನನ ಬಾಲ ಇಟ್ಟಾದ ಮೇಲೆ ನಡೆಯುವುದಾದರೂ ಹೇಗೆ ? ನಟಿಯನ್ನು ಆಕೆಯ ತಂಡವು ಸ್ಟ್ರೆಚರ್‌ನಲ್ಲಿ ಮಲಗಿಸಿ ಸುತ್ತಲೂ ಸಾಗಿಸಬೇಕಾಯಿತು.
ನೋರಾ ನೋಟ ಕಂಡು 'ಅಬ್ಬಬ್ಬಾ' ಎಂದ್ರು!
ಗುರುವಾರ ನೋರಾ ತಮ್ಮ ಬೀಚ್ ಫೋಟೋಶೂಟ್‌ನಿಂದ ಗುರು ರಾಂಧವಾ ಅವರೊಂದಿಗೆ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಗೋವಾ ಬೀಚ್‌ನಲ್ಲಿ ಹಾಟ್ ಆಗಿ ಕಾಣಿಸಿದ್ದಾರೆ ನಟಿ. ಬೆಳ್ಳಿಯಿಂದ ಅಲಂಕರಿಸಲ್ಪಟ್ಟ ಕಟ್-ಔಟ್ ಡ್ರೆಸ್ ಧರಿಸಿರುವ ನೋರಾ ಅಭಿಮಾನಿಗಳ ಮನಸು ಗೆದ್ದಿದ್ದಾರೆ. ಫೋಟೋವನ್ನು ಹಂಚಿಕೊಂಡ ಅವರು, ಗುರು ರಾಂಧವ ಮತ್ತು ನಾನು ನಿಮ್ಮೆಲ್ಲರನ್ನೂ ಕುಣಿಸಲು ಹಿಂತಿರುಗಿದ್ದೇವೆ! ಶೀಘ್ರದಲ್ಲೇ #DanceMeriRani ನಲ್ಲಿ ಸಿಜ್ಲ್ ಮಾಡಲು ಸಿದ್ಧರಾಗಿ. 12:21 12/21 ರಂದು ಹಾಡು ಬಿಡುಗಡೆಯಾಗುತ್ತಿದೆ. ಟ್ಯೂನ್ ಮಾಡಿ! ಎಂದು ಬರೆದಿದ್ದಾರೆ.
ಗೋವಾ ಫೋಟೋ ವೈರಲ್:
ಇದು ಅಧಿಕೃತವಾಗಿ ಇಡೀ ಬಾಲಿವುಡ್ ಉದ್ಯಮಕ್ಕೆ ಅತ್ಯಂತ ರೋಮ್ಯಾಂಟಿಕ್ ಸಮಯವಾಗಿದೆ. ಇತ್ತೀಚಿನ ದಿನಗಳಲ್ಲಿ, ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಸೇರಿದಂತೆ ಪ್ರಮುಖ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಜೀವನದಲ್ಲಿ ಸಂಪೂರ್ಣ ಹೊಸ ಪ್ರೀತಿಯ ಅಧ್ಯಾಯವನ್ನು ಪ್ರಾರಂಭಿಸುವುದನ್ನು ಅಭಿಮಾನಿಗಳು ನೋಡಿದ್ದಾರೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಯಾಗಲು ಹೊರಟಿದ್ದಾರೆ. ಅಂತೂ ಬಾಲಿವುಡ್ ಚಂದದ ಹಿರೋಯಿನ್‌ಗಳೆಲ್ಲರೂ ಫ್ಯಾಮಿಲಿ ಲೈಫ್ ಶುರು ಮಾಡುತ್ತಿದ್ದಾರೆ. ಇದರ ಮಧ್ಯೆ, ಅಭಿಮಾನಿಗಳು ಗೋವಾದಲ್ಲಿ ಮತ್ತೊಂದು ಪ್ರಣಯ ಜೋಡಿಗಳನ್ನು ಗುರುತಿಸಿದ್ದಾರೆ. ಹೊಸ ಜೋಡಿ ಯಾರು ಎಂದು ಆಶ್ಚರ್ಯ ಪಡುತ್ತಿದ್ದೀರಾ?
ನೋರಾ ಫತೇಹಿ ಮತ್ತು ಗುರು ರಾಂಧವಾ ಅವರು ಸೋಷಿಯಲ್ ಮೀಡಿಯಾದಲ್ಲಿ ಥ್ರಿಲ್ ಮೂಡಿಸಿದ್ದಾರೆ. ಇಬ್ಬರೂ ಒಟ್ಟಿಗೆ ಕೆಲವು ಬೀಚ್ ಸಮಯವನ್ನು ಆನಂದಿಸುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಚಿತ್ರಗಳಲ್ಲಿ, ಇಬ್ಬರೂ ಪರಸ್ಪರ ಮಾತನಾಡುವಾಗ ಜೋರಾಗಿ ನಗುತ್ತಿರುವುದನ್ನು ಕಾಣಬಹುದು. ಒಂದು ಫೋಟೋದಲ್ಲಿ, ಇಬ್ಬರೂ ತುಂಬಾ ಸಂತೋಷದಿಂದ ಕಾಣುತ್ತಿದ್ದರೆ, ಮತ್ತೊಂದರಲ್ಲಿ ಬೀಚ್ ತೀರದಲ್ಲಿ ನೀರಿನಲ್ಲಿ ನಡೆಯುವುದನ್ನು ಆನಂದಿಸುತ್ತಾರೆ. ವೈರಲ್ ಫೋಟೋಗಳನ್ನು ನೋಡಿದಾಗ, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆಯೇ ಎನಿಸುತ್ತಿದೆ.
