ಹಿಮೇಶ್ ರೆಶಮಿಯಾ ದೆಹಲಿ ಮ್ಯೂಸಿಕ್ ಕಾನ್ಸರ್ಟ್ ಅದ್ಧೂರಿಯಾಗಿ ನಡೆದಿದೆ. ಜನಸಾಗರವೇ ಸೇರಿತ್ತು. ಹಿಮೇಶ್ ಹಾಡು, ಮ್ಯೂಸಿಕ್ ಕಾರ್ಯಕ್ರಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಕಾಂಡೋಮ್ ಜಾಹೀರಾತು ಭಾರಿ ವೈರಲ್ ಆಗಿದೆ.
ನವದೆಹಲಿ (ಜು.22) ಬಾಲಿವುಡ್ ಗಾಯಕ ಹಿಮೇಶ್ ರೆಶಮಿಯಾ ಮ್ಯೂಸಿಕ್ ಕಾನ್ಸರ್ಟ್ ಅದ್ಧೂರಿ ಹಾಗೂ ಅಭೂತಪೂರ್ವ ಯಶಸ್ಸು ಕಂಡಿದೆ. ದೆಹಲಿಯ ಇಂದಿರಾ ಗಾಂಧಿ ಅರೆನಾದಲ್ಲಿ ಆಯೋಜಿಸಿದ್ದ ಈ ಮ್ಯೂಸಿಕ್ ಕಾನ್ಸರ್ಟ್‌ಗೆ ಜನಸಾಗರವೇ ಹರಿದು ಬಂದಿತ್ತು. ಇತ್ತ ಸಿಂಗರ್ ಹಿಮೇಶ್ ತಮ್ಮ ಎವರ್‌ಗ್ರೀನ್ ಆಶಿಕ್ ಬನಾಯಾ, ತಂದೂರಿ ನೈಟ್ಸ್, ಹುಕ್ಕಾ ಬಾರ್ ಸೇರಿದಂತೆ ಹಲವು ಹಾಡುಗಳನ್ನು ಹಾಡಿ ರಂಚಿಸಿದ್ದಾರೆ. ಆದರೆ ಹಿಮೇಶ್ ರೆಶಮಿಯಾ ಮ್ಯೂಸಿಕ್ ಕಾನ್ಸರ್ಟ್ ಬೆನ್ನಲ್ಲೇ ಡ್ಯುರೆಕ್ಸ್ ಕಾಂಡೋಮ್ ಆ್ಯಡ್ ಭಾರಿ ವೈರಲ್ ಆಗಿದೆ.
ನವದಹೆಲಿ ಮ್ಯೂಸಿಕ್ ಕಾನ್ಸರ್ಟ್‌ನಲ್ಲಿ ಹಿಮೇಶ್ ರೆಶಮಿಯಾ ತಮ್ಮ ಸಿಗ್ನೇಚರ್ ಹೆಚ್ಆರ್ ಕ್ಯಾಪ್, ಸ್ಟೈಲೀಶ್ ಜಾಕೆಟ್ ಮೂಲಕ ವೇದಿಕೆಗೆ ಎಂಟ್ರಿಕೊಟ್ಟಿದ್ದರು. ಇತ್ತ ತಮ್ಮ ಅತೀ ಜನಪ್ರಿಯ ಆಶೀಕ್ ಬನಾಯಾ ಆಪ್ನೆ ಹಾಡು ಹಾಡುವ ಮೊದಲು ಎಲ್ಲರೂ ಕ್ಯಾಪ್ ಧರಿಸುವಂತೆ ಸೂಚಿಸಿದ್ದರು. ಸಾವಿರಾರು ಮಂದಿ ಹಿಮೇಶ್ ರೆಶಮಿಯಾ ಸಿಗ್ನೇಚರ್ ಕ್ಯಾಪ್ ಧರಿಸಿ ಹಾಡಿಗೆ ಕುಣಿದಾಡಿದ್ದಾರೆ.
ಏನಿದು ನೋ ಕ್ಯಾಪ್ ನೋ ಎಂಟ್ರಿ
ಹಿಮೇಶ್ ರೆಶಮಿಯಾ ಮ್ಯೂಸಿಕ್ ಕಾರ್ಯಕ್ರಮಕ್ಕೆದ ಬೆನ್ನಲ್ಲೇ ಡ್ಯುರೆಕ್ಸ್ ನೋ ಕ್ಯಾಪ್ ನೋ ಎಂಟ್ರಿ ಜಾಹೀರಾತು ಭಾರಿ ವೈರಲ್ ಆಗಿದೆ. ದೆಹಲಿಯ ಹಲೆವೆಡೆ ಡ್ಯುರೆಕ್ಸ್ ಈ ಜಾಹೀರಾತು ಫಲಕ ಹಾಕಿದೆ. ಡ್ಯುರೆಕ್ಸ್ ಕಾಂಡೋಮ್ ಹಾಗೂ ಕೆಂಪು ಬಣ್ಣದ ಹಿಮೇಶ್ ರೆಶಮಿಯಾ ಸಿಗ್ನೇಚರ್ ಕ್ಯಾಪ್ ಕೂಡ ಇಟ್ಟಿರುವ ಜಾಹೀರಾತು ಇದಾಗಿದೆ. ಒಂದೇ ವಾಕ್ಯದಲ್ಲಿ ಡ್ಯುರೆಕ್ಸ್ ಮತ್ತೆ ಭಾರಿ ಸಂಚಲನ ಮೂಡಿಸಿದೆ. ನೋ ಕ್ಯಾಪ್ ನೋ ಎಂಟ್ರಿ ಈ ಜಾಹೀರಾತಿನಲ್ಲಿ ಅದು ಪರ್ಫಾಮೆನ್ಸ್ ಆಗಿದ್ದರೂ ಅಥವಾ ಯಾರನ್ನಾದರೂ ಫಾಲೋ ಮಾಡುವುದಾದರು ಎಂದು ಬರೆದಿದ್ದಾರೆ. ಈ ಮೂಲಕ ಡ್ಯುರೆಕ್ಸ್ ಮತ್ತೆ ದೇಶಾದ್ಯಂತ ಪ್ರಚಾರ ಗಿಟ್ಟಿಸಿಕೊಂಡಿದೆ.
ಸಂಗಾತಿ ಜೊತೆಗಿನ ಪರ್ಫಾಮೆನ್ಸ್ ಇರಬಹುದು, ಅಥವಾ ನಿಮ್ಮ ನೆಚ್ಚಿನವರನ್ನು ಫಾಲೋ ಮಾಡುವುದೇ ಆಗಿರಬಹುದು, ಕ್ಯಾಪ್ ಮುಖ್ಯ ಎಂಬ ಸಂದೇಶದ ಕಾಂಡೋಮ್ ಜಾಹೀರಾತನ್ನು ಡ್ಯುರೆಕ್ಸ್ ನೀಡಿದೆ. ಹಿಮೇಶ್ ರೆಶಮಿಯಾ ಕ್ಯಾಪ್ ಧರಿಸುವಂತೆ ಮ್ಯೂಸಿಕ್ ಕಾನ್ಸರ್ಟ್ ವೇಳೆ ಸೂಚಿಸಿದ್ದರು. ಇದೇ ಮನವಿಯನ್ನು ಇದೀಗ ಡ್ಯುರೆಕ್ಸ್ ತನ್ನ ಎಂದಿನ ಶೈಲಿಯಲ್ಲಿ ಜಾಹೀರಾತು ಮೂಲಕ ಬಳಿಸಿಕೊಂಡಿದೆ.
ಇದೀಗ ಈ ಜಾಹೀರಾತು ಹಾಗೂ ಹಿಮೇಶ್ ರೆಶ್ಮಿಯಾ ಕಾನ್ಸರ್ಟ್ ಭಾರಿ ಸದ್ದು ಮಾಡುತ್ತಿದೆ. ಡ್ಯುರೆಕ್ಸ್ ಕಾಂಡೋಮ್ ಕುರಿತ ಜಾಹೀರಾತಿಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಎರಡೂ ಕೂಡ ಇಮೋಶನ್ ಹಾಗೂ ಅತೀ ಮುಖ್ಯ ಎಂದಿದ್ದಾರೆ. ಎರಡೂ ಕೂಡ ಟೋಪಿ, ಆದರೆ ಕೆಲಸ ಮಾತ್ರ ದೊಡ್ಡದು ಎಂದು ಹಲವರು ಕಮೆಂಟ್ ಮಾಡಿದ್ದಾರೆ.
