ಡೆಸ್ಟಿನೇಷನ್ ವೆಡ್ಡಿಂಗ್ ತಯಾರಿಯಲ್ಲಿ ಬ್ಯುಸಿಯಲ್ಲಿರುವ ಮದುಮಗಳು ನಿಹಾರಿಕಾ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೊಂದಿಗೆ ವಿಶೇಷ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ನಿಹಾರಿಕಾ ಫೋಟೋ ವೈರಲ್ ಆಗುತ್ತಿದ್ದಂತೆ ತಂದೆ ನಾಗಬಾಬು ಕಮೆಂಟ್‌ ಕೂಡ ಸದ್ದು ಮಾಡುತ್ತಿದೆ.

ಮದುಮಗಳ ಲಂಗದೊಳಗೆ ನುಗ್ಗಿದ ಸ್ನೇಹಿತರು; ಸತ್ಯ ತಿಳಿಯಲು ಫೋಟೋ ನೋಡಿ! 

ಡಿಸೆಂಬರ್ 9ರಂದು ಉದಯ್‌ಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ನಿಹಾರಿಕಾ, ಈಗಾಗಲೇ ರಾಜಸ್ಥಾನಕ್ಕೆ  ಕುಟುಂಬಸ್ಥರ ಜೊತೆ ಪ್ರಯಾಣ ಶುರು ಮಾಡಿದ್ದಾರೆ.  ಸಂಗೀತ ಹಾಗೂ ಮದುವೆಗೆ ಬ್ಯುಸಿನೆಸ್‌ ಮ್ಯಾನ್‌ ಚೈತನ್ಯ ಹಾಗೂ ನಿಹಾರಿಕಾ ವಸ್ತ್ರ ವಿನ್ಯಾಸ ಮಾಡಿಸಿದ್ದಾರೆ.  ಮದುವೆ ಪೂರ್ವ ಕಾರ್ಯಕ್ರಮಗಳಲ್ಲಿ ನಿಹಾರಿಕಾ ತೊಟ್ಟು ಉಡುಗೆಗಳೂ ಸೂಪರ್ಬ್ ಆಗಿವೆ. ಅದರಲ್ಲೂ ನೀಲಿ ಬಣ್ಣದ ಸೀರೆ ತುಂಬಾನೇ ಸ್ಪೆಷಲ್ ಅವರಿಗೆ.

 

ನಿಹಾರಿಕಾ ಡಿಸೈನರ್ ಬ್ಲೌಸ್ ಮಾಡಿಸಿ ಪೂಜೆಗೆ ತೊಟ್ಟಿದ್ದ ನೀಲಿ ಸೀರೆ ಬೇರೆ ಯಾರದ್ದೂ ಅಲ್ಲ, ಅವರ ತಾಯಿಯ ನಿಶ್ಚಿತಾರ್ಥದ ಸೀರೆ. 30 ವರ್ಷ ಈ ಹಳೇ ಸೀರೆಯನ್ನು ತಾಯಿ ಧರಿಸಿದಾಗ ಹೇಗಿತ್ತು, ಹಾಗೂ ಈಗ ಹೇಗಿದೆ ಎಂದು ಎರಡೂ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. '30 ವರ್ಷ ಹಳೇದು' ಎಂದು ನಿಹಾರಿಕ ಪೋಟೋ ಜೊತೆ ಪೋಸ್ಟ್ ಹಾಗಿದ್ದಾರೆ. ತಂದೆ ನಾಗಬಾಬು 'ನನ್ನ ಪತ್ನಿ ಸುಂದರಿ, ಆದರೆ ನನ್ನ ನಿಹಾ ಮುದ್ದು ಮಗಳು ದೇವತೆ' ಎಂದು ಕಮೆಂಟ್ ಮಾಡಿದ್ದಾರೆ.

ಚಿರಂಜೀವಿ ಸಹೋದರನ ಪುತ್ರಿ ನಿಹಾರಿಕಾ ನಿಶ್ಚಿತಾರ್ಥ; ಸಂಭ್ರಮ ಹೇಗಿತ್ತು ನೋಡಿ!