'ಪಬ್ಬು, ಕ್ಲಬ್ಬು ಅಂತಾ ಸುತ್ತಾಡಿದ್ದು ಬಿಟ್ಟರೆ ಮತ್ತೇನೂ ಮಾಡ್ಲಿಲ್ಲ..' ನಿಹಾರಿಕಾ ವಿರುದ್ಧ ಚೈತನ್ಯ ತಂದೆಯ ಆರೋಪ!

ಮೆಗಾಸ್ಟಾರ್‌ ಕುಟುಂಬದ ಕುಡಿ, ನಟ ನಾಗಬಾಬು ಅವರ ಪುತ್ರಿ ನಿಹಾರಿಕಾ ಕೊನಿಡೆಲಾ ವಿಚ್ಛೇದನ ಪಡೆದುಕೊಂಡಿದ್ದಾರೆ. ಅದಕ್ಕೆ ಕಾರಣ ಏನು ಅನ್ನೋದು ಗೊತ್ತಿಲ್ಲ. ಈ ನಡುವೆ ನಿಹಾರಿಕಾ ಅವರ ಪತಿಯ ತಂದೆ ಪ್ರಭಾಕರ್‌ ರಾವ್‌, ನಿಹಾರಿಕಾ ಬಗ್ಗೆ ಕಾಮೆಂಟ್‌ಗಳನ್ನು ಮಾಡಿದ್ದಾರೆ.

Niharika Konidela divorce Chaitanya Jonnalagadda Father comments on Megastar Family Daughter san

ಹೈದರಾಬಾದ್‌ (ಜು.11): ಟಾಲಿವುಡ್‌ ನಟಿ ಹಾಗೂ ಮೆಗಾಸ್ಟಾರ್‌ ಕುಟುಂಬದ ಕುಡಿ ನಿಹಾರಿಕಾ ಕೊನಿಡೆಲಾ ಹಾಗೂ ಜೊನ್ನಲಗಡ್ಡ ಚೈತನ್ಯ ಇತ್ತೀಚೆಗೆ ವಿವಾಹ ವಿಚ್ಛೇದನ ಪಡೆದುಕೊಂಡಿದ್ದಾರೆ. ಕೇವಲ ಎರಡೂವರೆ ವರ್ಷದಲ್ಲಿಯೇ ಇವರ ದಾಂಪತ್ಯ ಜೀವನ ಅಂತ್ಯ ಕಂಡಿದೆ. ರಾಜಸ್ಥಾನದ ಉದಯಪುರದಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದ ಈ ಜೋಡಿ ಸೋಶಿಯಲ್‌ ಮೀಡಿಯಾದಲ್ಲಿ ವಿಚ್ಛೇದನ ವಿಚಾರವನ್ನು ಅಧಿಕೃತವಾಗಿ ಹಂಚಿಕೊಂಡಿದೆ. ಅದರೊಂದಿಗೆ ಅವರ ವಿಚ್ಛೇದನ ಅರ್ಜಿಗಳು ಕೂಡ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇನ್ನು ಮೆಗಾಸ್ಟಾರ್‌ ಫ್ಯಾಮಿಲಿಗೆ ವಿಚ್ಛೇದನ ಅನ್ನೋದು ಹೊಸದಲ್ಲ. ಇದರಿಂದಾಗಿ ಅಭಿಮಾನಿಗಳು ಕೂಡ ಬೇಸರಗೊಂಡಿದ್ದಾರೆ. ಈ ನಡುವೆ ಇಬ್ಬರ ನಡುವೆ ಇಷ್ಟು ಬೇಗ ವಿಚ್ಛೇದನಕ್ಕೆ ಕಾರಣವೇನು ಅನ್ನೋದರ ಬಗ್‌ಗೆಯೂ ಕುತೂಹಲ ಆರಂಭವಾಗಿದೆ.  ನಾಗಬಾಬು ಪುತ್ರು ನಿಹಾರಿಕಾ ಕೆಲವೊಂದು ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ಇನ್ನೊಂದೆಡೆ ಚೈತನ್ಯ ಮಾಜಿ ಐಜಿ ಪ್ರಭಾಕರ್‌ ರಾವ್‌ ಅವರ ಪುತ್ರ.  ಇವರಿಬ್ಬರ ವಿಚ್ಛೇದನವಾಗಿ 10 ದಿನಗಳಾಗಿದ್ದರೂ, ಇಂದಿಗೂ ಯೂಟ್ಯೂಬ್‌ನಲ್ಲಿ ಇವರ ಕುರಿತಾದ ಒಂದಷ್ಟು ವಿವರಗಳು ಹರಿದಾಡುತ್ತಿದೆ.

ಇಂದಿಗೂ ಕೂಡ ಎರಡೂ ಕುಟುಂಬದವರು ಮದುವೆ ಮುರಿದುಹೋಗಿದ್ದಕ್ಕೆ ಕಾರಣವೇನು ಅನ್ನೋದನ್ನ ಸಾರ್ವಜನಿಕವಾಗಿ ಮಾತನಾಡುತ್ತಿಲ್ಲ. ನಿಹಾರಿಕಾ ಮಾತ್ರವಲ್ಲದೆ ಚೈತನ್ಯ ಅವರ ಕುರಿತಾಗಿಯೂ ಕೆಲವೊಂದು ನೆಗೆಟಿವ್‌ ಕಾಮೆಂಟ್‌ಗಳು ಬರುತ್ತಿವೆ. ಈ ನಡುವೆ ತನ್ನ ಆಪ್ತ ಸ್ನೇಹಿತರ ಬಳಿಕ ಚೈತನ್ಯ ಅವರ ತಂದೆ ಮಾಜಿ ಐಜಿ ಪ್ರಭಾಕರ್‌ ರಾವ್‌, ವಿಚ್ಛೇದನಕ್ಕೆ ಕಾರಣವೇನು ಅನ್ನೋದರ ಬಗ್ಗೆ ಮಾತನಾಡಿದ್ದಾರೆ.

'ಸಮಾಜದಲ್ಲಿ ಹಾಗೂ ನನ್ನ ಸಹೋದ್ಯೋಗಿಗಳ ಜೊತೆಯಿಂದ ಅಪಾರವಾದ ಗೌರವ ಪಡೆದ ವ್ಯಕ್ತಿ ನಾನು. ಆದರೆ, ಮನೆಯಲ್ಲಿ ನಿಹಾರಿಕಾ ಒಂದೇ ಒಂದು ದಿನವೂ ಹಿರಿಯರಿಗೆ ಗೌರವಪೂರ್ಣವಾಗಿ ನಡೆದುಕೊಳ್ಳಲಿಲ್ಲ. ಪತಿಯೊಂದಿಗೆ ಜೀವನ ಕಳೆಯುವ ಬಗ್ಗೆ ಆಕೆಗೆ ಆಸಕ್ತಿಯೇ ಇದ್ದಿರಲಿಲ್ಲ. ಒಂದೇ ಒಂದು ದಿನವೂ ಗಂಡನನ್ನು ಪ್ರೀತಿಯಿಂದ ಮಾತನಾಡಿಸಿದ್ದನ್ನು ನೋಡಲಿಲ್ಲ. ಬರೀ ಪಬ್ಬು, ಕ್ಲಬ್ಬು ಅಂತಾ ಸುತ್ತಾಡಿದ್ದು ಬಿಟ್ಟರೆ, ಮತ್ತೇನನ್ನೂ ಮಾಡಲಿಲ್ಲ. ಕುಟುಂಬದವರನ್ನು ಚೆನ್ನಾಗಿ ನೋಡೋದು ಹೋಗಲಿ, ಮಾತನಾಡಿಂಸಲೂ ಇಲ್ಲ. ಆದರೆ, ಈಗ ಮೆಗಾಸ್ಟಾರ್‌ನ ಅಭಿಮಾನಿಗಳು ನನ್ನ ಮಗನ ಕುರಿತಾಗಿ ಕೆಟ್ಟದಾಗಿ ಮಾತನಾಡೋದನ್ನ ಸಹಿಸಿಕೊಳ್ಳಲು ಆಗುತ್ತಿಲ್ಲ' ಎಂದು ಪ್ರಭಾಕರ್‌ ರಾವ್‌ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

 

ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ವಿಚ್ಛೇದನ

ಇನ್ನು ಪ್ರಭಾಕರ್‌ ರಾವ್‌ ತಮ್ಮ ಆಪ್ತ ಸ್ನೇಹಿತರ ಬಳಿ ಇಂಥ ಮಾತುಗಳನ್ನು ಹೇಳಿದ್ದಾರೋ ಇಲ್ಲವೋ ಅನ್ನೋದು ಗೊತ್ತಿಲ್ಲ. ಆದರೆ, ಈ ಮಾತು ಮಾತ್ರ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಡಿವೋರ್ಸ್ ಬೆನ್ನಲ್ಲೇ ಬೆಡ್​ ಮೇಲೆ ರೋಷನ್ ಬೇಕೆಂದ ನಟಿ Niharika Konidela, ಸಂಚಲನ!

Latest Videos
Follow Us:
Download App:
  • android
  • ios