* ಹುಟ್ಟುಹಬ್ಬದಂದು ನಟಿಯ ಕೂದಲಿಗೆ ಬೆಂಕಿ* ಕೇಕ್ ಮೇಲಿನ ಕ್ಯಾಂಡಲ್‌ ಆರಿಸುವಾಗ ನಡೆಯಿತು ದುರಂತ* ಕೂದಲೆಳೆ ಅಂತರದಲ್ಲಿ ಪಾರಾದ ಹಾಲಿವುಡ್ ನಟಿ

ಮುಂಬೈ(ಸೆ.23): ಹಾಲಿವುಡ್(Hollywood) ಟಿವಿ ನಟಿ ನಿಕೋಲ್ ರಿಚಿ(Nicole Richie) ಇತ್ತೀಚೆಗೆ ತನ್ನ 40 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ, ನಟಿ ಹುಟ್ಟುಹಬ್ಬದ ಕೇಕ್ ಕತ್ತರಿಸುವಾಗ, ಒಂದು ಎಡವಟ್ಟು ಸಂಭವಿಸಿ, ನಟಿಯ ಕೂದಲಿಗೆ ಬೆಂಕಿ ಹತ್ತಿಕೊಂಡಿತು. ನಟಿ, ನಿಕೋಲ್ ರಿಚಿ ಹುಟ್ಟುಹಬ್ಬದಂದು(Birthday) ಕೇಕ್ ಮೇಲಿದ್ದ ಕ್ಯಾಂಡಲ್ ನಂದಿಸುತ್ತಿದ್ದಳು. ಈ ಸಮಯದಲ್ಲಿ, ಅಅವರ ಕೂದಲಿಗೆ ಬೆಂಕಿ ಹತ್ತಿಕೊಂಡಿತು. ಇದನ್ನು ನೋಡಿದ ನಟಿ ಜೋರಾಗಿ ಚೀರುತ್ತಾ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಕೂಡಲೇ ಅಲ್ಲಿದ್ದ ಜನರು ಆಕೆ ಬಳಿ ಧಾವಿಸಿ ಬೆಂಕಿ ನಂದಿಸಲು ಸಹಾಯ ಮಾಡಿದ್ದಾರೆ. ಇದರಿಂದ ದೊಡ್ಡ ಅಪಘಾತ ತಪ್ಪಿದ್ದು, ನಟಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ನಿಕೋಲ್ ರಿಚಿ(Nicole Richie) ಸ್ವತಃ ಈ ಘಟನೆಯ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ 40 ನೇ ವರ್ಷ ಬೆಂಕಿ ಹಚ್ಚಿದೆ ಎಂಬ ಶೀರ್ಷಿಕೆಯನ್ನೂ ನೀಡಿದ್ದಾರೆ. ನಿಕೋಲ್ ರಿಚಿಯ ಸ್ನೇಹಿತರು ಕೂಡ ಆಕೆಯ ಈ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅವರ ಈ ಪೋಸ್ಟ್‌ನಲ್ಲಿ ಕೆಲವರು ನಗುವ ಇಮೋಜಿಯನ್ನು ಮಾಡಿದ್ದರೆ, ಕೆಲವರು ಬೆಂಕಿಯ ಇಮೋಜಿಯನ್ನು ಕಮೆಂಟ್‌ ಮಾಡಿದ್ದಾರೆ. ನಿಕೋಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

View post on Instagram

ನಿಕೋಲ್ ಅವರ ಅಭಿಮಾನಿಗಳು ಮಾತ್ರವಲ್ಲದೇ, ಆಕೆಯ ಪತಿ ಜೋಯಲ್ ಮ್ಯಾಡೆನ್ ಕೂಡಾ 'ಹಾಟ್‌' ಎಂದುಕಾಮೆಂಟ್ ಮಾಡಿದ್ದಾರೆ. ಆಂಟೋನಿ ಪೊರೊಸ್ಕಿ ಕೂಡಾ ಕಮೆಂಟ್‌ ಮಾಡಿದ್ದು, ಈ ವೇಳೆ ನಗಲು ಸರಿಯಾಗುತ್ತಿಲ್ಲ. ಹುಟ್ಟುಹಬ್ಬದ ಶುಭಾಶಯಗಳು ಎಂದಿದ್ದಾರೆ. 

View post on Instagram

ನಿಕೋಲ್ ರಿಚಿ ರಿಯಾಲಿಟಿ ಸೀರೀಸ್‌ 'ದಿ ಸಿಂಪಲ್ ಲೈಫ್'ನಿಂದ ಜನಪ್ರಿಯರಾಗಿದ್ದಾರೆ. ಇದರಲ್ಲಿ, ಅವರು ಹಾಲಿವುಡ್ ನಟಿ ಪ್ಯಾರಿಸ್ ಹಿಲ್ಟನ್ ಜೊತೆ ಕಾಣಿಸಿಕೊಂಡಿದ್ದರು. ನಿಕೋಲ್ ರಿಚಿ 2006 ರಲ್ಲಿ ಜೋಯಲ್ ಮ್ಯಾಡೆನ್ ಜೊತೆ ಡೇಟಿಂಗ್ ಆರಂಭಿಸಿ. 4 ವರ್ಷಗಳ ನಂತರ 2010 ರಲ್ಲಿ ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ನಿಕೋಲ್ ಈ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ:

ನಿಕೋಲ್ ರಿಚಿ(Nicole Richie) ಈವ್, ರಾಕ್ ಮಿ ಬೇಬಿ, ಅಮೇರಿಕನ್ ಡ್ರೀಮ್ಸ್, 8 ಸಿಂಪಲ್ ರೂಲ್ಸ್, ಕಿಡ್ಸ್‌ ಇನ್ ಅಮೆರಿಕ, ಚಕ್, ಗ್ರೇಟ್ ನ್ಯೂಸ್, ಕ್ಯಾಂಪಿಂಗ್, ಗ್ರೇಸ್ ಆಂಡ್‌ ಫ್ರಾಂಕಿ, ಬ್ಲೆಸ್ ದಿಸ್ ಮೆಸ್, ಪ್ರಾಜೆಕ್ಟ್ ರನ್ವೇ, ಫ್ಯಾಶನ್ ಸ್ಟಾರ್, ಎಂಪೈರ್, ಲಿಪ್ಸಿಂಕ್ ಬ್ಯಾಟಲ್, ಡ್ರಾಪ್ ದಿ ಮೈಕ್ ಮತ್ತು ಮೇಕಿಂಗ್ ದಿ ಕಟ್ ನಂತಹ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇದಲ್ಲದೇ, ಅವರು ಕೆಲವು ಮ್ಯೂಸಿಕ್ ವಿಡಿಯೋಗಳಲ್ಲೂ ಕೆಲಸ ಮಾಡಿದ್ದಾರೆ.