ಪ್ರತಿ ವರ್ಷ ಕುಟುಂಬದ ಜೊತೆ ಗಣೇಶ ಚತುರ್ಥಿ ಆಚರಿಸುವ ಬಾಲಿವುಡ್ ನಟ ಶಾರೂಖ್ ಖಾನ್‌ನನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಕೆಲವರು ಹಿಂದೂ ಹಬ್ಬ ಆಚರಿಸಿರುವುದಕ್ಕೆ ಬೇಕಾಬಿಟ್ಟಿ ಕಮೆಂಟ್ ಮಾಡಿದ್ದಾರೆ.

ಮುಸ್ಲಿಂ ಆಗಿದ್ದುಕೊಂಡು ಹಿಂದೂ ಹಬ್ಬ ಆಚರಿಸಿದ್ದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಲವರು ಶಾರೂಖ್‌ ಪೋಸ್ಟ್‌ಗೆ ಸಿಟ್ಟಿಗೆದ್ದು ಕಮೆಂಟ್ ಮಾಡಿದ್ದಾರೆ.

ಮೋಟಿವೇಷನ್‌ಗಾಗಿ ಶಾರುಖಾನ್ ಹಾಡು ಕೇಳಿದ ಅಭಿಷೇಕ್ ಬಚ್ಚನ್..!

ಇನ್ನು ಕೆಲವರು ಶರೂಖ್ ಎಲ್ಲ ಹಬ್ಬ ಆಚರಿಸುತ್ತಾರೆ. ಅವರು ನಿಜವಾದ ಭಾರತೀಯ ಎಂದು ಹೊಗಳಿದ್ದಾರೆ. ಗಣಪತಿ ವಿಸರ್ಜನೆಯ ಬ್ಲಾಕ್‌ & ವೈಟ್ ಫೋಟೋ ಶೇರ್ ಮಾಡಿದ ಶಾರೂಖ್ ಖಾನ್ ಪ್ರಾರ್ಥನೆ ಮತ್ತು ವಿಸರ್ಜನೆ ಆಯಿತು. ಗಣೇಶ ನಿಮ್ಮೆಲ್ಲರಿಗೆ ಒಳ್ಳೆಯದು ಮಾಡಲಿ. ಗಣಪತಿ ಬಪ್ಪ ಮೋರೆಯಾ ಎಂದು ಕ್ಯಾಪ್ಶನ್ ಕೊಟ್ಟಿದ್ದರು.

ನಟ ಶಾರೂಖ್ ಖಾನ್ ಹಿಂದೂ ಯುವತಿ ಗೌರಿ ಅವರನ್ನು ವಿವಾಹವಾಗಿದ್ದು, ಆರ್ಯನ್, ಸುಹಾನ ಹಾಗೂ ಅಬ್ರಾಂ ಮೂವರು ಮಕ್ಕಳಿದ್ದಾರೆ. ಗಣೇಶ ಚತುರ್ಥಿ ಅಲ್ಲದೆ, ದೀಪಾವಳಿ, ಈದ್, ಹೋಲಿ ಹಬ್ಬವನ್ನೂ ಆಚರಿಸುತ್ತಾರೆ.

ಗೌರಿ ಫ್ಯಾಮಿಲಿಗಾಗಿ 5 ವರ್ಷ ಹಿಂದೂವಾಗಿದ್ರು ಶಾರೂಖ್ ಖಾನ್, ಮೂರು ಸಲ ಮದುವೆ

ಸಲ್ಮಾನ್ ಖಾನ್, ಹೃತಿಕ್ ರೋಷನ್, ಶಿಲ್ಪಾ ಶೆಟ್ಟಿ, ಅನನ್ಯಾ ಪಾಂಡೆ, ಶ್ರದ್ಧಾ ಕಪೂರ್ ಸೇರಿ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಸರಳವಾಗಿ ಗಣೇಶ ಚತುರ್ಥಿ ಆಚರಿಸಿದ್ದಾರೆ. ಶರೂಖ್ ಖಾನ್ ಕೊನೆಯದಾಗಿ 2018ರ ಝೀರೋ ಸಿನಿಮಾದಲ್ಲಿ ನಟಿಸಿದ್ದಾರೆ. ಝೀರೋ ರಿಲೀಸ್ ಸಮಯದಲ್ಲಿ ತಾವು ಸ್ವಲ್ಪ ಸಮಯ ಬಿಟ್ಟು ಮುಂದಿನ ಸಿನಿಮಾ ಮಾಡುವುದಾಗಿ ಹೇಳಿದ್ದರು. ಈ ನಡುವೆ ಎರಡು ವೆಬ್ ಸಿರೀಸ್ ನಿರ್ಮಿಸಿದ್ದಾರೆ.