ಪಠಾಣ್ ಟೀಸರ್ ಯಥಾವತ್ ಕಾಪಿ ಎನ್ನುವ ಆರೋಪ ಕೇಳಿಬರುತ್ತಿದೆ. ಯಾವ ಸಿನಿಮಾಗಳಿಂದ ಕದಿಯಲಾಗಿದೆ ಎಂದು ಸಾಕ್ಷಿ ಸಮೇತ ಬಿಚ್ಚಿಟ್ಟು ಟ್ರೋಲ್ ಮಾಡುತ್ತಿದ್ದಾರೆ ನೆಟ್ಟಿಗರು.

ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ನಟನೆಯ ಬಹುನಿರೀಕ್ಷೆಯ ಪಠಾಣ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗಿರುವ ಟೀಸರ್ ಶಾರುಖ್ ಅಭಿಮಾನಿಗಳ ಹೃದಯ ಗೆದ್ದಿದೆ. ಕಿಂಗ್ ಖಾನ್ ಅವರನ್ನು ತೆರೆಮೇಲೆ ನೋಡಲು ಪ್ಯಾನ್ಸ್ ಅನೇಕ ವರ್ಷಗಳೇ ಕಾಯಬೇಕಾಯಿತು. ಕೊನೆಗೂ ಕಿಂಗ್ ಖಾನ್ ಬೆಳ್ಳಿ ಪರದೆ ಮೇಲೆ ಮಿಂಚಲು ಸಜ್ಜಾಗಿದೆ. ಇದೀಗ SRK ಟ್ರೈಲರ್ ನೋಡಿ ಸಖತ್ ಥ್ರಿಲ್ ಆಗಿದ್ದಾರೆ. ಇದರ ಬೆನ್ನಲ್ಲೇ ಪಠಾಣ್ ಟೀಸರ್ ಯಥಾವತ್ ಕಾಪಿ ಎನ್ನುವ ಆರೋಪ ಕೇಳಿಬರುತ್ತಿದೆ. ಯಾವ ಸಿನಿಮಾಗಳಿಂದ ಕದಿಯಲಾಗಿದೆ ಎಂದು ಸಾಕ್ಷಿ ಸಮೇತ ಬಿಚ್ಚಿಟ್ಟು ಟ್ರೋಲ್ ಮಾಡುತ್ತಿದ್ದಾರೆ ನೆಟ್ಟಿಗರು. ಪಠಾಣ್ ಟೀಸರ್‌ನ ಪ್ರತಿಯೊಂದು ದೃಶ್ಯವು ಕಾಪಿ ಎಂದು ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ.

ಚಿತ್ರದಲ್ಲಿ ಶಾರುಖ್ ಖಾನ್ ಹೈ ವೋಲ್ಟೇಜ್ ಆಕ್ಷನ್ ದೃಶ್ಯಗಳಲ್ಲಿ ಮಿಂಚಿದ್ದಾರೆ. ಆದರೆ ಈ ಆಕ್ಷನ್ ದೃಶ್ಯಗಳು ಬೇರೆ ಬೇರೆ ಸಿನಿಮಾಗಳಿಂದ ಕದಿಯಲಾಗಿದೆ ಎನ್ನುವ ಆರೋಪ ಎದುರಾಗಿದೆ. ನೆಟ್ಟಿಗನೊಬ್ಬ ಈ ಸಿನಿಮಾವನ್ನು ಹೃತಿಕ್ ರೋಷನ್ ಅವರ 'ವಾರ್' ಸಿನಿಮಾದ ದೃಶ್ಯದಿಂದ ಕದಿಯಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಹೋಲಿಕೆ ಇರುವ ಆಕ್ಷನ್ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಮತ್ತೋರ್ವ ನೆಟ್ಟಗ, 2005ರಲ್ಲಿ ಬಂದ ದಸ್ ಚಿತ್ರದ ದೃಶ್ಯಕ್ಕೆ ಹೋಲಿಕೆ ಮಾಡಿದ್ದಾನೆ. ಜಾಯೆದ್ ಖಾನ್ ಬೈಕು ಸವಾರಿ ಮಾಡುವಾಗ ಟ್ಯಾಂಕ್‌ನೊಳಗೆ ಗ್ರೆನೇಡ್ ಅನ್ನು ಬೀಳಿಸುತ್ತಾರೆ. ಆ ದೃಶ್ವನ್ನು ಪಠಾಣ್ ನಲ್ಲಿ ಯಥಾವತ್‌ಗೆ ಕಾಪಿ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. 

Pathan Teaser; ಹೈ ವೋಲ್ಟೇಜ್ ಆಕ್ಷನ್ ಮೂಲಕ ಶಾರುಖ್ ಗ್ರ್ಯಾಂಡ್ ಎಂಟ್ರಿ, ಹೇಗಿದೆ ಟೀಸರ್?

ಸಲ್ಮಾನ್ ಖಾನ್ ಅವರ 'ರೇಸ್ 3' ನಲ್ಲಿರುವ ಬೈಕ್ ಸ್ಟಂಟ್ ದೃಶ್ಯವನ್ನು ಸಂಪೂರ್ಣವಾಗಿ ಕಾಪಿ ಮಾಡಲಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ದೃಶ್ಯ ಮಾತ್ರವಲ್ಲದೇ ಸಂಭಾಷಣೆ ಕೂಡ ಕಾಪಿ ಎನ್ನುತ್ತಿದ್ದಾರೆ ನೆಟ್ಟಿಗರು. ರಣಬೀರ್ ಕಪೂರ್ 'ಸಂಜು' ಚಿತ್ರದ ಸಂಭಾಷಣೆ ಮತ್ತು ಶಾರುಖ್ ಅವರ ಪಠಾಣ್ ಸಂಭಾಷಣೆ ನಡುವೆ ಹೋಲಿಕೆ ಇದೆ ಎಂದು ನೆಟ್ಟಿಗರು ಸಾಕ್ಷಿ ಸಮೇತ ಬಿಚ್ಚಿಡುತ್ತಿದ್ದಾರೆ.

Scroll to load tweet…

 ಶಾರುಖ್ ಖಾನ್ ಜೆಟ್‌ಪ್ಯಾಕ್ ನೊಂದಿಗೆ ಹಾರುವ ದೃಶ್ಯವಂತು ಸಖತ್ ವೈರಲ್ ಆಗುತ್ತಿದೆ. ಥೇಟ್ ಇದೇ ರೀತಿಯ ದೃಶ್ಯವನ್ನು ಪ್ರಭಾಸ್ ಸಾಹೋ ಸಿನಿಮಾದಲ್ಲೂ ಕಾಣಬಹುದು. ಪ್ರಭಾಸ್ ಮತ್ತು ಶಾರುಖ್ ಇಬ್ಬರೂ ಜೆಟ್ ಪ್ಯಾಕ್ ನೊಂದಿಗೆ ಹಾರುವ ದೃಶ್ಯ ಶೇರ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಮತ್ತೊಂದು ಹಿಟ್ ಸಿನಿಮಾ ಕ್ಯಾಪ್ಟನ್ ಅಮೆರಿಕಾ ಚಿತ್ರದ ಅಭಿಮಾನಿಗಳು ಸಹ ಪಠಾಣ್ ಸಿನಿಮಾದ ವಿರುದ್ಧ ಬೇಸರ ಹೊರಹಾಕುತ್ತಿದ್ದಾರೆ. ಜಾನ್ ಅಬ್ರಹಾಂ ಎಂಟ್ರಿ ದೃಶ್ಯ ಕಾಪಿ ಎಂದು ಆರೋಪ ಮಾಡುತ್ತಿದ್ದಾರೆ. ಪಠಾಣ್ ಸಿನಿಮಾದ ಪ್ರತಿಯೊಂದು ದೃಶ್ಯವನ್ನು ಅಕ್ಷರಶಃ ನಕಲಿ ಮಾಡಲಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಪಠಾಣ್ ಟೀಸರ್ ರಿಲೀಸ್ ಆಗ ಕೆಲವೇ ಕ್ಷಣಗಳಲ್ಲಿ ಪ್ರಭಾಸ್ ಸಾಹೋ ಸಿನಿಮಾ ಟ್ರೆಂಡಿಂಗ್ ನಲ್ಲಿದೆ.

Scroll to load tweet…

ಯಾವಾಗಲೂ ಶಾರುಖ್‌ ಅವರ ಜೊತೆ ಇರುವ ಮಹಿಳೆ ಯಾರು? ಇಬ್ಬರ ಬರ್ತ್‌ಡೇ ಕೂಡ ಒಂದೇ ದಿನ

ನಾಲ್ಕು ವರ್ಷಗಳ ಬಳಿಕ ಶಾರುಖ್ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಪಠಾಣ್ ಟೀಸರ್ ಕಾಪಿ ಎನ್ನುವ ಆರೋಪ ಎದುರಿಸುತ್ತಿದ್ದರೂ ಟ್ರೆಡಿಂಗ್ ನಲ್ಲಿದೆ. ಶಾರುಖ್ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ. ಅಂದಹಾಗೆ ಬಹುನಿರೀಕ್ಷೆಯ ಈ ಸಿನಿಮಾ ಮುಂದಿನ ವರ್ಷ 2023 ಜನವರಿ 25ರಂದು ರಿಲೀಸ್ ಆಗುತ್ತಿದೆ. ಹಿಂದಿ ಜೊತೆಗೆ ಈ ಸಿನಿಮಾ ತಮಿಳು ಮತ್ತು ತೆಲುಗಿನಲ್ಲೂ ಬಿಡುಗಡೆಯಾಗುತ್ತಿದೆ.