ಬಾಲಿವುಡ್ ಚಿತ್ರ ಬ್ರಹ್ಮಾಸ್ತ್ರ ಫಸ್ಟ್ ಲುಕ್ ಬಿಡುಗಡೆ ದೆವ್ವದ ಪಾತ್ರದಲ್ಲಿ ಕಾಣಿಸಿಕೊಂಡ ಮೌನಿ ರಾಯ್ ಮೌನಿಗಿಂತ ರಾಖಿ ಸಾವಂತ್‌ಗೆ ಲೇಸು ಎಂದ ನೆಟ್ಟಿಗರು
ಮುಂಬೈ(ಜೂ.15): ದಕ್ಷಿಣ ಭಾರತದ ಚಿತ್ರಗಳ ಮುಂದೆ ಬಾಲಿವುಡ್ ಚಿತ್ರಗಳು ಹೇಳಹೆಸರಿಲ್ಲದಂತಾಗುತ್ತದೆ. ಕೆಜಿಎಫ್ ಸೇರಿದಂತೆ ಸೌತ್ ಸಿನಿಮಾಗಳೇ ಇದೀಗ ಇಡೀ ದೇಶದ ಸಿನಿ ಜಗತ್ತನ್ನು ಆಳುತ್ತಿದೆ. ಇದರ ನಡುವೆ ಬಿಡುಗಡೆಯಾಗುತ್ತಿರುವ ಹಲವು ಬಾಲಿವುಡ್ ಚಿತ್ರಗಳು ಮಕಾಡೆ ಮಲಗುತ್ತಿದೆ. ಇದೀಗ ಕರಣ್ ಜೋಹರ್ ನಿರ್ಮಾಣದ ಬ್ರಹ್ಮಾಸ್ತ್ರ ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದೆ. ಆದರೆ ದೆವ್ವದ ಪಾತ್ರದಲ್ಲಿ ಕಾಣಿಸಿಕೊಂಡ ಮೌನಿ ರಾಯ್ ಪೋಸ್ಟರ್ ಭಾರಿ ಟ್ರೋಲ್ ಆಗಿದೆ. ಈ ಮೌನಿರಾಯ್‌ಗಿಂತ ರಾಖಿ ಸಾವಂತ್ ಚೆನ್ನಾಗಿ ಹೊಂದಿಕೊಳ್ಳುತ್ತಿದ್ದರು ಎಂದು ಟ್ರೋಲ್ ಮಾಡಿದ್ದಾರೆ.
ಆಯನ್ ಮುಖರ್ಜಿ ನಿರ್ದೇಶದ ಬ್ರಹ್ಮಾಸ್ತ್ರ ಚಿತ್ರ ಸ್ಟಾರ್ ನಟ ನಟಿಯರ ದಂಡೇ ಹೊಂದಿದೆ. ಅಮಿತಾಬ್ ಬಚ್ಚನ್, ರಣಬೀರ್ ಕಪೂರ್, ಆಲಿಯಾ ಭಟ್, ಮೌನಿ ರಾಯ್ ಹಾಗೂ ನಾಗಾರ್ಜುನ ಅಕ್ಕಿನೇನಿ ಸೇರಿದಂತೆ ಹಲವು ಸ್ಟಾರ್‌ಗಳನ್ನು ಹೊಂದಿರು ಈ ಚಿತ್ರದಲ್ಲಿ ಮೌನಿ ರಾಯ್ ಪ್ರೇತದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಫಸ್ಟ್ ಲುಕ್ ನೆಟ್ಟಿಗರಿಂದ ಟ್ರೋಲ್ ಆಗಿದೆ. ಚಿತ್ರದ ನಿರ್ಮಾಪಕರದಲ್ಲಿ ಓರ್ವರಾದ ಕರಣ್ ಜೋಹರ್ ಫಸ್ಟ್ ಲುಕ್ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿವಾದದಲ್ಲಿ ಬ್ರಹ್ಮಾಸ್ತ್ರ; ಶೂ ಧರಿಸಿ ದೇವಸ್ಥಾನದ ಘಂಟೆ ಹೊಡೆದ ರಣಬೀರ್, ಡಿಸಾಸ್ಟರ್ ಎಂದ ನೆಟ್ಟಿಗರು
ಮೌನಿ ರಾಯ್ ಈ ಪಾತ್ರಕ್ಕೆ ಹೊಂದಿಕೊಳ್ಳುತ್ತಿಲ್ಲ. ಇದು ಕಾಮಿಡಿ ರೀತಿ ಅನಿಸುತ್ತಿದೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಷೇರುಪೇಟೆ ಕುಸಿಯುತ್ತಿದ್ದ, ಹಣದುಬ್ಬರ, ಬೆಲೆ ಏರಿಕೆ ನಡುವೆ ಈ ರೀತಿ ಕಥಾವಸ್ತುಗಳೇ ಇಲ್ಲದ ಚಿತ್ರ ಮಾಡಿದರೆ ಚಿತ್ರಮಂದಿರಕ್ಕೆ ಯಾರು ಬರುತ್ತಾರೆ. ಇದಕ್ಕೆ ಬಾಲಿವುಡ್ ಚಿತ್ರ ಬೀಳುತ್ತಿದೆ ಎಂದು ಮತ್ತೋರ್ವ ಅಭಿಮಾನಿ ಕಮೆಂಟ್ ಮಾಡಿದ್ದಾರೆ.
ಮೌನಿ ರಾಯ್ ಪಾತ್ರ ಅಮೆರಿಕದ ಕಾಮಿಕ್ ಬುಕ್ಸ್‌ನಲ್ಲಿರುವ ಬರುವ ಸ್ಕಾರ್ಲೆಟ್ ವಿಚ್ ಪಾತ್ರದ ರೀತಿ ಇದೆ. ಕದಿಯುವುದು ನಿಲ್ಲಿಸಿ ನಿಮ್ಮತನ ತೋರಿಸಿ, ಹೀಗೆ ಮುಂದುವರಿದರೆ ಬಾಲಿವುಡ್ ಚಿತ್ರವನ್ನು ನಿರ್ಮಾಪಕರೇ ನೋಡಬೇಕಾದಿತು ಎಂದು ಕಮೆಂಟ್ ಮಾಡಿದ್ದಾರೆ.
;
ಬ್ರಹ್ಮಾಸ್ತ್ರ ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರವಾಗಿದೆ. ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಬಿಡುಗಡೆಗೂ ಮುನ್ನವೇ ಬಾಲಿವುಡ್ ಚಿತ್ರದ ಕುರಿತು ನಿರ್ಲಕ್ಷ್ಯಗಳು, ಆಕ್ರೋಶ, ಟೀಕೆ ಕೇಳಿ ಬರುತ್ತಿದೆ. ಇದು ಚಿತ್ರತಂಡದ ಆತಂಕಕ್ಕೂ ಕಾರಣವಾಗಿದೆ.
ಯಶಸ್ವಿ ಕೆಜಿಎಫ್ 2
ಯಶ್ ನಟನೆಯ ‘ಕೆಜಿಎಫ್ 2’ ಚಿತ್ರ ಯಶಸ್ವಿ 50 ದಿನಗಳ ಪ್ರದರ್ಶನ ಕಾಣುತ್ತಿದೆ. ಸಿನಿಮಾವನ್ನು ಯಶಸ್ವಿಗೊಳಿಸಿದ್ದಕ್ಕೆ ಈ ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದೆ. ‘ಕೆಜಿಎಫ್ 2’ ಚಿತ್ರ ಇನ್ನೂ ವಿಶ್ವಾದ್ಯಂತ 400 ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ. ಚಿತ್ರ ಈವರೆಗೆ ಸುಮಾರು 1250 ಕೋಟಿ ರು. ದಾಖಲೆಯ ಗಳಿಕೆ ಮಾಡಿರುವ ‘ಕೆಜಿಎಫ್ 2’ ಇಂದಿನಿಂದ ಅಮೇಜಾನ್ ಪ್ರೈಮ್‌ನಲ್ಲಿ ಪ್ರಸಾರವಾಗುತ್ತಿದೆ.
ಈ ಕಾರಣಕ್ಕೆ Disha Patani ನೋಡಿದರೆ ಹುಡುಗುರು ದೂರ ಓಡುತ್ತಿದ್ದರಂತೆ
ಯಶ್ ನಟನೆಯ ‘ಕೆಜಿಎಫ್ 2’ ಚಿತ್ರವನ್ನು ಕೇವಲ 26 ದಿನಗಳಲ್ಲಿ 5.5 ಕೋಟಿಗೂ ಅಧಿಕ ಜನ ಚಿತ್ರಮಂದಿರದಲ್ಲಿ ವೀಕ್ಷಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಇದು ದಾಖಲೆಯ ವೀಕ್ಷಣೆಯಾಗಿದೆ. ಚಿತ್ರ ಈವರೆಗೆ 1160 ಕೋಟಿ ರೂ. ಗಳಿಕೆ ಮಾಡಿತ್ತು. ‘ಗದ್ದರ್’ ಹಾಗೂ ‘ಬಾಹುಬಲಿ’ ಬಳಿಕ ಚಿತ್ರಮಂದಿರದಲ್ಲಿ ಅತ್ಯಧಿಕ ಜನ ವೀಕ್ಷಿಸಿದ ಮೂರನೇ ಚಿತ್ರವಾಗಿ ‘ಕೆಜಿಎಫ್ 2’ ಹೊರಹೊಮ್ಮಿದೆ. ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಚಿತ್ರವನ್ನು 4.40 ಕೋಟಿ ಜನ ವೀಕ್ಷಿಸಿದ್ದರು. ಟಾಪ್ 1 ಸ್ಥಾನದಲ್ಲಿರುವ ‘ಬಾಹುಬಲಿ 2’ ಚಿತ್ರವನ್ನು ರಾಷ್ಟ್ರಮಟ್ಟದಲ್ಲಿ ಸುಮಾರು 10.80 ಕೋಟಿ, ‘ಗದ್ದರ್’ ಚಿತ್ರವನ್ನು 8 ರಿಂದ 9 ಕೋಟಿ ಜನ ವೀಕ್ಷಿಸಿರಬಹುದು ಎಂದು ಅಂದಾಜಿಸಲಾಗಿದೆ. ಬಾಹುಬಲಿಯ ಮೊದಲ ಭಾಗವನ್ನು 4.90 ಕೋಟಿ ಜನ ನೋಡಿದ್ದರು. ಬಾಲಿವುಡ್ ಚಿತ್ರ ‘ದಂಗಲ್’ ಚಿತ್ರ ರಾಷ್ಟ್ರಮಟ್ಟದಲ್ಲಿ ಮೂರು ಕೋಟಿಗೂ ಅಧಿಕ ವೀಕ್ಷಣೆ ಕಂಡಿತ್ತು. ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಚಿತ್ರವನ್ನು ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.
