Asianet Suvarna News Asianet Suvarna News

ಬಿಸ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಲಿಪ್ ಕಿಸ್; ವಿಡಿಯೋ ನೋಡಿ ನೆಟ್ಟಿಗರು ಗರಂ

ಹಿಂದಿ ಬಿಗ್ ಬಾಸ್ ಒಟಿಟಿ 2 ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸ್ಪರ್ಧಿಗಳ ಲಿಪ್ ಕಿಸ್ ದೃಶ್ಯ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. 

netizens outrage against Jad Hadid and Akanksha Puri 30-sec lip kiss on Bigg Boss OTT 2 sgk
Author
First Published Jun 30, 2023, 11:58 AM IST

ಹಿಂದಿ ಬಿಗ್ ಬಾಸ್ ಒಟಿಟಿ 2 ಪ್ರಾರಭವಾಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈಗಾಗಲೇ ಅನೇಕ ಕಾರಣಕ್ಕೆ ಬಿಗ್ ಬಾಸ್ ಒಟಿಟಿ ಸುದ್ದಿಯಾಗಿದೆ. ಈ ನಡುವೆ ಸ್ಪರ್ಧಿಗಳ ಕಿಸ್ಸಿಂಗ್ ದೃಶ್ಯ ಈಗ ನೋಡುಗರ ಕೆಂಗಣ್ಣಿಗೆ  ಗುರಿಯಾಗುವಂತೆ ಮಾಡಿದೆ. ಬಿಗ್ ಬಾಸ್ ಮನೆಯಲ್ಲಿ ಕಿತ್ತಾಟ, ಜಗಳ, ಮುನಿಸು ಎಲ್ಲಾ ಕಾಮನ್. ರೊಮ್ಯಾನ್ಸ್ ಕೂಡ ಇರುತ್ತೆ. ಆದರೆ ಕೆಲವೊಮ್ಮೆ ಅತಿಯಾಗಿದ್ದು ಇದೆ.  ಬಿಗ್ ಬಾಸ್ OTT 2 ನಲ್ಲಿ ಇಬ್ಬರೂ ಸ್ಪರ್ಧಿಗಳ ನಡೆ ಈಗ ಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ಆಕಾಂಕ್ಷಾ ಪುರಿ ಮತ್ತು ಜದ್ ಹದಿದ್ ಇಬ್ಬರ ಲಿಪ್‌ಲಾಕ್ ದೃಶ್ಯವೀಗ ವೈರಲ್ ಆಗಿದೆ. ಜದ್ ಹದಿದ್ ಮತ್ತು ಆಕಾಂಕ್ಷಾ ಇಬ್ಬರೂ ಟಾಸ್ಕ್ ಬಳಿಕ ಕಿಸ್ ಮಾಡಲು ಧೈರ್ಯಮಾಡಿ ಇಬ್ಬರೂ ಲಿಕ್‌ಲಾಕ್ ಮಾಡಿದರು. 

ಇಬ್ಬರೂ ಬಿಗ್ ಮನೆಯೊಳಗೆ ಸುಮಾರು ಅರ್ಧ ನಿಮಿಷಕ್ಕೂ ಅಧಿಕ ಸಮಯ ಕಿಸ್ ಮಾಡಿದ್ದಾರೆ. ಎಷ್ಟು ಸಮಯ ಕಿಸ್ ಮಾಡಬೇಕೆಂದು ಸ್ಪರ್ಧಿಗಳು ಚರ್ಚೆ ಮಾಡುವಾಗ ಮತ್ತೋರ್ವ ಸ್ಪರ್ಧಿ ಅವಿನಾಶ್ ಸಚ್‌ದೇವ  ಕನಿಷ್ಠ 30 ಸೆಕೆಂಡ್ ಇರಬೇಕು ಎಂದು ಹೇಳಿದ್ದಾರೆ. ಬಳಿಕ ಅಕಾಂಕ್ಷಾ ಮತ್ತು ಜದ್ ಇಬ್ಬರೂ ಕಿಸ್ ಮಾಡಲು ಸಿದ್ಧರಾಗಿ ಎಲ್ಲರ ಮುಂದೆಯೇ ಲಿಪ್‌ಲಾಕ್ ಮಾಡಿದರು. 30 ಸೆಕೆಂಡ್ ಆಗುತ್ತಿದ್ದಂತೆ ಉಳಿದ ಸ್ಪರ್ಧಿಗಳು ಇಬ್ಬರೂ ಬಿಡಿ ಸಾಕು ಎಂದು ಕೂಗಿದರು. ಇಬ್ಬರ ಕಿಸ್ಸಿಂಗ್ ದೃಶ್ಯವನ್ನು ಉಳಿದ ಸ್ಪರ್ಧಿಗಳು ಎಂಜಾಯ್ ಮಾಡಿದರು. ಆದರೆ ಪೂಜಾ ಭಟ್ ಮಾತ್ರ ಕಸಿವಿಸಿಯಾಗಿದ್ದರು. ಸಾಕು ನಿಲ್ಲಿಸಿ ಎಂದು ಅವರೂ ಕೂಡ ಜೋರಾಗಿ ಕೂಗಿ ಹೇಳಿದರು. ಇನ್ನೂ ಜದ್ ಜೊತೆ ಕ್ಲೋಸ್ ಆಗಿರುವ ಮನಿಶಾ ರಾಣಿ ಕೂಡ ಕಸ್ಸಿಂಗ್ ದೃಶ್ಯಕ್ಕೆ ಬೆಂಬಲ ನೀಡಿದರು. 

ಈ ಜನ್ಮದಲ್ಲಿ ಮತ್ತೆ ಮದ್ವೆಯಾಗಲ್ಲ: ನವಾಜುದ್ದೀನ್ ಜೊತೆ ಪ್ರೀತಿಯಲ್ಲಿ ಬಿದ್ದ ವಿಚಾರ ಬಾಯ್ಬಿಟ್ಟ ಪತ್ನಿ ಆಲಿಯಾ

ಈ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಅನೇಕರು ಆಕಾಂಕ್ಷಾ ಮತ್ತು  ಜದ್ ಕಾಲೆಳೆಯುತ್ತಿದ್ದಾರೆ. ಇವರಿಬ್ಬರೂ ಮಾಡಬಹುದಾದ ಏಕೈಕ ಕೆಲಸ ಎಂದರೆ ಇದೇ ಎಂದು ಭಾವಿಸುತ್ತೆ ಎಂದು ಹೇಳಿದ್ದಾರೆ. ಬಿಗ್ ಬಾಸ್ ಈ ದೃಶ್ಯಕ್ಕೆ ನೆನ್ಸಾರ್ ಮಾಡದೆ ಪ್ರಸಾರ ಮಾಡಿದೆ ಎಂದು ಹೇಳುತ್ತಿದ್ದಾರೆ. ಇನ್ನೂ ಅನೇಕರು ಇದೇನು ಸಭ್ಯತೆ, ಅನೇಕ ಜನ ಬಿಗ್ ಬಾಸ್ ನೋಡುತ್ತಿರುತ್ತಾರೆ. ಇಂಥ ದೃಶ್ಯಗಳನ್ನು ಪ್ರಸಾರ ಮಾಡಿ ಏನನ್ನು ಹೇಳುತ್ತಿದ್ದೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

BIGGBOSS 2: ಆಕಾಂಕ್ಷಾಪುರಿಯನ್ನು ಎಲ್ಲೆಂದರಲ್ಲಿ ಮುಟ್ಟಿದ ಸ್ಪರ್ಧಿ- ಛೀ ಅಂತಿದ್ದಾರೆ ನೆಟ್ಟಿಗರು

ಜದ್ ಬಗ್ಗೆ ಹೇಳುವುದಾದರೆ ದುಬೈನಲ್ಲಿ ವಾಸುತ್ತಿದ್ದಾರೆ. ಮದುವೆಯಾಗಿ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ. ಒಬ್ಬಳು ಮಗಳು ಕೂಡ ಇದ್ದಾಳೆ. ಇನ್ನೂ ಅಕಾಂಕ್ಷಾ ಪುರಿ ಬಿಗ್ ಬಾಸ್ 13ರಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ರಿಯಾಲಿಟಿ ಶೋ ಮಿಕಾ ದಿ ವೋಹ್ತಿದಲ್ಲಿ ಭಾಗಿಯಾಗಿ ಗೆದ್ದಿದ್ದರು. ಇದೀಗ ಬಿಗ್ ಬಾಸ್ ಒಟಿಟಿ 2ನಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಕಿಸ್ಸಿಂಗ್ ವಿಚಾರಕ್ಕೆ ದೊಡ್ಡ ಸುದ್ದಿಯಾಗಿದ್ದಾರೆ. 

Follow Us:
Download App:
  • android
  • ios