ಈ ಜನ್ಮದಲ್ಲಿ ಮತ್ತೆ ಮದ್ವೆಯಾಗಲ್ಲ: ನವಾಜುದ್ದೀನ್ ಜೊತೆ ಪ್ರೀತಿಯಲ್ಲಿ ಬಿದ್ದ ವಿಚಾರ ಬಾಯ್ಬಿಟ್ಟ ಪತ್ನಿ ಆಲಿಯಾ
ವಿವಾದಗಳ ಬಳಿಕ ಅಲಿಯಾ ಸಿದ್ಧಕಿ ಪತಿ ನವಾಜುದ್ದೀನ್ ಸಿದ್ದಿಕಿ ಜೊತೆ ಪ್ರೀತಿಯಲ್ಲಿ ಬಿದ್ದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಈ ಜನ್ಮದಲ್ಲಿ ಮತ್ತೆ ಮದ್ವೆ ಆಗಲ್ಲ ಎಂದು ಹೇಳಿದ್ದಾರೆ.
ಬಿಗ್ ಬಾಸ್ OTT ಸೀಸನ್ 2 ಪ್ರಾರಂಭವಾಗಿದೆ. ಜೂನ್ 17 ರಿಂದ ಒಟಿಟಿ ಶೋಗೆ ಅದ್ದೂರಿ ಚಾಲನೆ ಸಿಕ್ಕಿದೆ. ಮೊದಲ ವಾರದಲ್ಲೇಈ ಶೋ ಗಮನ ಸೆಳೆಯುತ್ತಿದೆ. ಸ್ಪರ್ಧಿಗಳು ಅಗ್ರೆಸಿವ್ ಆಗಿ ಆಡುತ್ತಿದ್ದಾರೆ. ಇದೇ ವೇಳೆ ತಮ್ಮತಮ್ಮ ವೈಯಕ್ತಿಕ ವಿಚಾರಗಳನ್ನು ಬಹಿರಂಗ ಪಡಿಸುತ್ತಿದ್ದಾರೆ. ಈ ಬಾರಿಯ ಬಿಗ್ ಬಾಸ್ ಒಟಿಟಿಯಲ್ಲಿ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಪತ್ನಿ ಆಲಿಯಾ ಸಿದ್ದಿಕಿ ಹೈಲೆಟ್ ಆಗುತ್ತಿದ್ದಾರೆ. ಶೋನಲ್ಲಿ ತನ್ನ ವೈಯಕ್ತಿಕ ವಿಚಾರಗಳನ್ನು ಬಹಿರಂಗ ಪಡಿಸುತ್ತಿದ್ದಾರೆ. ಪತಿಯಿಂದ ದೂರ ಆಗಿರುವ ಅಲಿಯಾ ಸಂಸಾರ ವಿಚಾರವನ್ನು ಬೀದಿರಂಪಾಟ ಮಾಡಿಕೊಂಡಿದ್ದರು. ಒಟಿಟಿಯಲ್ಲಿ ತನ್ನ ವೈಯಕ್ತಿಕ ವಿಚಾರಗಳನ್ನು ಮಾತನಾಡಲ್ಲ ಎಂದು ಬಹಿರಂಗ ಪಡಿಸಿದ್ದರು. ಆದರೀಗ ಪತಿಯ ಬಗ್ಗೆ ಮಾತನಾಡಿದ್ದಾರೆ.
ತಾನು ನವಾಜುದ್ದೀನ್ ಸಿದ್ದಿಕಿ ಜೊತೆ ಪ್ರೀತಿಯಲ್ಲಿ ಹೇಗೆ ಬಿದ್ದೆ ಎಂದು ಹೇಳಿದ್ದಾರೆ. ಸೈರಸ್ ಬ್ರೋಚಾ ಅವರೊಂದಿಗೆ ಮಾತನಾಡುವಾಗ ಆಲಿಯಾ ಸಿದ್ದಿಕಿ ಪತಿ ನವಾಜುದ್ದೀನ್ ಬಗ್ಗೆ ಮಾತನಾಡಿ, 'ಅವರ ಸಹೋದರ ಆಗ ಅವರ (ನವಾಜುದ್ದೀನ್ ) ಜೊತೆ ಸಹಾಯಕನಾಗಿದ್ದರು. ಅವರು ಏಕ್ತಾ ನಗರದಲ್ಲಿ ವಾಸಿಸುತ್ತಿದ್ದನು. ನಾನು ಪಿಜಿಯಲ್ಲಿ ವಾಸಿಸುತ್ತಿದ್ದೆ ಬಳಿಕ ನನ್ನನ್ನು ಒದ್ದು ಹೊರಹಾಕಿದರು. ಆಗ ಅವರ ಸಹೋದರ ನನಗೆ ಅಲ್ಲಿ ಕೆಲವು ದಿನ ಇರಲು ಹೇಳಿದರು' ಎಂದು ಹೇಳಿದರು.
ಮಾಜಿ ಪತ್ನಿ ವಿರುದ್ಧ ₹100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ನಟ ನವಾಜುದ್ದೀನ್ ಸಿದ್ದಿಕಿ!
'ನಾನು ಮೊದಲು ಅವರ ಫೋಟೋಗಳನ್ನು ನೋಡಿದೆ ಮತ್ತು ನಾನು ಅವರ ಕಣ್ಣುಗಳನ್ನು ಇಷ್ಟಪಟ್ಟೆ. ಅವರ ಕಣ್ಣುಗಳು ತುಂಬಾ ಮಾದಕವಾಗಿದೆ. ನಂತರ ನಾವು ಭೇಟಿಯಾದೆವು ಮತ್ತು ಪ್ರೀತಿಸಲು ಪ್ರಾಂಭಿಸಿದೆವು. ನಂತರ ನಾವು ಒಟ್ಟಿಗೆ ವಾಸಿಸಲು ಶುರುಮಾಡಿದೆವು. ಇದು ನಮ್ಮ ಪ್ರಯಾಣವಾಗಿದೆ' ಎಂದು ಹೇಳಿದರು. ನನ್ನ ಸ್ನೇಹಿತರೊಬ್ಬರು ಅವನನ್ನು ಇಷ್ಟಪಡುತ್ತಿದ್ದರು ಮತ್ತು ನಾನು ಅವನಿಗೆ ಅದನ್ನು ಹೇಳಿದೆ. ಆಗ ನಮ್ಮ ನಡುವೆ ಏನೂ ಇರಲಿಲ್ಲ. ಅವರು ನನ್ನ ಕಣ್ಣುಗಳನ್ನು ಇಷ್ಟಪಟ್ಟಿದ್ದಾರೆ ಎಂದು ಹೇಳಿದರು. ನಂತರ ನಾವು ಮಾತನಾಡಲು ಪ್ರಾರಂಭಿಸಿದೆವು. ಆತ ಸಾಫ್ಟ್‌ವೇರ್ ಇಂಜಿನಿಯರ್. ಅವರು ನನಗೆ ಗೌರವ ನೀಡುತ್ತಾರೆ. ತುಂಬಾ ಪ್ರೀತಿ ಮಾಡ್ತಾರೆ. ಅವರು ನನ್ನನ್ನು ರಕ್ಷಿಸುವ ಭಾವನೆ ಮೂಡಿಸುತ್ತಾನೆ ಮತ್ತು ಅವರು ಧೈರ್ಯಶಾಲಿ' ಎಂದು ಹೇಳಿದ್ದಾರೆ.
ನಿಗೂಢ ವ್ಯಕ್ತಿಯೊಂದಿಗೆ ನವಾಜುದ್ದೀನ್ ಸಿದ್ದಿಕಿ ಮಾಜಿ ಪತ್ನಿ ಆಲಿಯಾ
ಸ್ಪರ್ಧಿಯೊಬ್ಬರು ಮತ್ತೆ ಮದುವೆ ಆಗುವ ಪ್ಲಾನ್ ಇದಿಯಾ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಅಲಿಯಾ, ಇಲ್ಲ, ಈ ಜನ್ಮದಲ್ಲಿ ನಾನು ಮತ್ತೆ ಮದುವೆಯಾಗುವುದಿಲ್ಲ' ಎಂದು ಕಡ್ಡಿ ತುಂಡಾಗುವ ಹಾಗೆ ಹೇಳಿದರು.
ನವಾಜುದ್ದೀನ್ ಸಿದ್ದಿಕಿ ಮತ್ತು ಅಲಿಯಾ ಸಿದ್ಧಕಿ ಪ್ರಕರಣ ಕೋರ್ಟ್‌ನಲ್ಲಿದೆ. ಅಲಿಯಾ ಪತಿಯ ವಿರುದ್ಧ ಕಿರುಕುಳ ಆರೋಪ ಸೇರಿದ್ದಂತೆ ಸಾಲು ಸಾಲು ಗಂಭೀರ ಆರೋಪಗಳನ್ನು ಮಾಡಿದ್ದರು. ಇಬ್ಬರ ಜಗಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಬಿಗ್ ಬಾಸ್ ಒಟಿಟಿಯಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದಾರೆ ಅಲಿಯಾ. ಸಿದ್ದಕಿ ಬಗ್ಗೆ ಮತ್ತಷ್ಟು ವಿಚಾರಗಳನ್ನು ಬಹಿರಂಗ ಪಡಿಸುವ ಸಾಧ್ಯತೆ ಇದೆ. ಇನ್ನು ಯಾವೆಲ್ಲ ವಿಚಾರಗಳನ್ನು ಬಹಿರಂಗ ಪಡಿಸುತ್ತಾರೆ ಎಂದು ಕಾದು ನೋಡಬೇಕಿದೆ.