ಬಾಲಿವುಡ್​ ನಟಿ ಸ್ವರಾ ಭಾಸ್ಕರ್​ ಒಂದೇ ಒಂದು ಸಹಾಯ ಕೇಳಿದ್ದು, ಅದೀಗ ಭಾರಿ ಟ್ರೋಲ್​ ಆಗುತ್ತಿದೆ. ಅಷ್ಟಕ್ಕೂ ಅವರು ಕೇಳಿದ್ದೇನು?  

ಬಾಲಿವುಡ್​ ನಟಿ ಸ್ವರಾ ಭಾಸ್ಕರ್​ (Swara Bhaskar) ಇತ್ತೀಚಿಗೆ ಭಾರಿ ಸುದ್ದಿಯಲ್ಲಿರುವ ನಟಿ. ಕೆಲ ತಿಂಗಳ ಹಿಂದೆ ದಿಢೀರನೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡು ತಾವು ಮದುವೆಯಾಗಿದ್ದುದ್ದನ್ನು ಘೋಷಣೆ ಮಾಡಿದ್ದರು. ಈ ಮೂಲಕ ಎಲ್ಲರಿಗೂ ಏಕಾಏಕಿ ಶಾಕ್​ ಕೊಟ್ಟಿದ್ದರು. ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ (Fahad Zirar Ahmad) ಅವರೊಂದಿಗೆ ಇವರು ಮದುವೆಯಾಗಿದ್ದಾರೆ. ಪ್ರತಿಭಟನೆಯೊಂದರಲ್ಲಿ ತಾವು ಭೇಟಿಯಾಗಿರುವ ವಿಷಯ ಹಂಚಿಕೊಂಡಿದ್ದರು. ಜನವರಿ 6, 2023 ರಂದು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ವಿವಾಹವನ್ನು (Special Marriage Act) ನ್ಯಾಯಾಲಯದಲ್ಲಿ ನೋಂದಾಯಿಸಿಕೊಂಡಿರುವುದಾಗಿ (Registered) ತಿಳಿಸಿದ್ದರು. ಸ್ವರಾ ತಮ್ಮ ಪೋಷಕರೊಂದಿಗೆ ಹಾಜರಾಗಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಾಯಿಸಿದ್ದ ಫೋಟೋ ಶೇರ್​ ಮಾಡಿದ್ದರು. ಕೆಲವೊಮ್ಮೆ ಹತ್ತಿರವೇ ಇರುವವರನ್ನು ದೂರೆಲ್ಲೋ ಹುಡುಕುತ್ತೇವೆ. ಆದರೆ ಫಹಾದ್​ ಅವರು ಹತ್ತಿರದಲ್ಲಿಯೇ ಇದ್ದಾಗ ಅವರೇ ನನ್ನ ಪ್ರೀತಿ ಎನ್ನುವುದು ತಿಳಿಯಲು ಹೆಚ್ಚುಹೊತ್ತು ಬೇಕಾಗಲಿಲ್ಲ ಎಂದು ಸ್ವರಾ ಹೇಳಿದ್ದರು. ಇದೀಗ ದಂಪತಿ ಸುಖಿ ಜೀವನ ನಡೆಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುವ ನಟಿ, ಅಪಾರ ಸಂಖ್ಯೆಯ ಫ್ಯಾನ್ಸ್​ ಹೊಂದಿದ್ದಾರೆ. ಅವರಿಂದ ಚಿಕ್ಕದೊಂದು ಸಹಾಯವನ್ನು ಟ್ವಿಟರ್​ನಲ್ಲಿ ನಟಿ ಕೇಳಿದ್ದಾರೆ. ಆದರೆ ಈ ಸಹಾಯ ಕೇಳಿದ್ದಕ್ಕೆ ಪ್ರತಿಯಾಗಿ ಅವರಿಗೆ ಸಿಗುತ್ತಿರುವ ಕಮೆಂಟ್​ಗಳ ಸುರಿಮಳೆ ಮಾತ್ರ ಒಂದಕ್ಕಿಂತ ಒಂದು ಭಯಾನಕವಾಗಿವೆ. ಅಷ್ಟಕ್ಕೂ ಸ್ವರಾ ಭಾಸ್ಕರ್​ ಕೇಳಿರೋ ಸಹಾಯ ಏನೆಂದರೆ ಆಕೆಗೆ ಚಿಕ್ಕದೊಂದು ಪಾರ್ಸೆಲ್​ ಅನ್ನು ಇನ್ನೊಂದು ಕಡೆ ತಲುಪಿಸಬೇಕಿದ್ದು, ಯಾರಾದರೂ ತಮಗೆ ಸಹಾಯ ಮಾಡುತ್ತೀರಾ ಎಂದು ಕೇಳಿದ್ದಾರೆ. ಅವರು, ಅಂತರ್ಜಾಲದ ಒಳ್ಳೆಯ ಜನರೇ... ನಾನು ಭಾರಿ ಬಿಕ್ಕಟ್ಟಿನಲ್ಲಿ ಇದ್ದೇನೆ. ಅದಕ್ಕಾಗಿ ಚಿಕ್ಕದೊಂದು ನೆರವು ಕೋರುತ್ತಿದ್ದೇನೆ. ಅಟ್ಲಾಂಟಾಕ್ಕೆ ಒಂದು ಚಿಕ್ಕ ಪ್ಯಾಕೇಜ್​ ಕಳಿಸಬೇಕಿದೆ. ನನಗೆ ಹೋಗಲು ಆಗುತ್ತಿಲ್ಲ. ಯಾರಾದರೂ ಇಂದು ಅಥವಾ ನಾಳೆ ದೆಹಲಿಯಿಂದ ಅಟ್ಲಾಂಟಾಗೆ ಪ್ರಯಾಣ ಮಾಡುವವರು ಇದ್ದಾರೆಯೆ? ನಾನು ಪಾರ್ಸೆಲ್​ ಕೊಡುತ್ತೇನೆ. ಅದನ್ನು ಸಂಗ್ರಹಿಸಲು ಅಟ್ಲಾಂಟಾ ವಿಮಾನ ನಿಲ್ದಾಣಕ್ಕೆ ಜನರು ಬರುತ್ತಾರೆ. ಇದು ಸುಳ್ಳಲ್ಲ, ನನಗೆ ನಿಜವಾದ ಬಿಕ್ಕಟ್ಟು ಇದೆ ಎಂದಿದ್ದಾರೆ.

ಫಸ್ಟ್​ ನೈಟ್​ ಬೆಡ್​ರೂಂ ಫೋಟೋ ಶೇರ್​ ಮಾಡಿದ ನಟಿ SWARA BHASKAR

ಆದರೆ ತಾವು ಸಹಾಯ ಮಾಡಲು ಮುಂದೆ ಬರುವುದಾಗಿ ಯಾರೊಬ್ಬರೂ ಸ್ವರಾ ಭಾಸ್ಕರ್​ಗೆ ಹೇಳಲಿಲ್ಲ. ಬದಲಿಗೆ ಭಯಾನಕ ಎನ್ನುವಂಥ ಕಮೆಂಟ್​ ಮಾಡಿದ್ದಾರೆ. ಅದರಲ್ಲಿ ಹಲವಾರು ಮಂದಿ, ದಯವಿಟ್ಟು ಸಹಾಯ ಮಾಡುವ ಮುನ್ನ ಪ್ಯಾಕೇಜ್​ನಲ್ಲಿ ಏನಿದೆ ಎಂಬುದನ್ನು ನೋಡಿ, ಅದು ಡ್ರಗ್ಸ್​ ಇಲ್ಲವೇ ಇನ್ನಾದರೂ ಆಗಿರಬಹುದು. ಸಮಸ್ಯೆಗೆ ಸಿಲುಕಿಕೊಂಡು ನಂತರ ಪಶ್ಚಾತ್ತಾಪ ಪಡಬೇಡಿ ಎಂದಿದ್ದಾರೆ. ಇನ್ನು ಕೆಲವರಂತೂ ಆ ಪ್ಯಾಕೇಜ್​ನಲ್ಲಿ ಫ್ರಿಜ್​ನಿಂದ ಬಂದದ್ದು ಏನೂ ಇಲ್ಲ ತಾನೆ ಎಂದು ಪ್ರಶ್ನಿಸಿದರೆ, ಅದೇನಾದರೂ ಸೂಟ್​ಕೇಸ್​ ಅಲ್ಲ ತಾನೆ, ಯಾವುದನ್ನೂ ನಂಬುವುದು ಕಷ್ಟ ಎಂದಿದ್ದಾರೆ. ನಟಿ ಸ್ವರಾ ತಮಗೆ ಬಿಕ್ಕಟ್ಟು ಎಂದಿರುವುದನ್ನು ಪ್ರಶ್ನಿಸಿದ ಕೆಲವರು ಇಷ್ಟೆಲ್ಲಾ ಹಣ ಮಾಡಿರುವ ನಿಮಗೆ 8-10 ಸಾವಿರ ಕೊಟ್ಟು ನೀವೇ ಪ್ಯಾಕೇಜ್​ ಕೊಟ್ಟು ಬರುವುದು ಅಷ್ಟು ಕಷ್ಟವೆ? ಬಿಜಿನೆಸ್​ ಕ್ಲಾಸ್​ಗೆ ಟಿಕೆಟ್​ ಬುಕ್​ ಮಾಡಿ ಹೋಗದ ಸ್ಥಿತಿ ನಿಮ್ಮದೆ? ಈ ರೀತಿ ಸಹಾಯ ಕೇಳಲು ಹೇಗೆ ಮನಸ್ಸು ಬರುತ್ತದೆ ಎಂದು ಪ್ರಶ್ನಿಸಿದರೆ, ಅದಕ್ಕೆ ಪ್ರತಿಕ್ರಿಯೆ ನೀಡಿರುವ ಕೆಲವರು, ಅದೇ ನನಗೂ ಡೌಟು. ಅದಕ್ಕಾಗಿಯೂ ಈ ಪ್ಯಾಕೇಜ್​ನಲ್ಲಿ ಇರುವುದು ಏನು ಎನ್ನುವುದೇ ಸಂದೇಹ ಎಂದಿದ್ದಾರೆ.

Scroll to load tweet…

ಅಂದ ಹಾಗೆ ಮದುವೆಯಾದಾಗಿನಿಂದಲೂ ಸ್ವರಾ ಭಾಸ್ಕರ್​ ಟ್ರೋಲ್​ಗೆ ಒಳಗಾಗುತ್ತಲೇ ಇದ್ದಾರೆ.ಮುಸ್ಲಿಂ ಯುವಕನ ಜೊತೆ ಮದುವೆಯಾಗಿರುವುದಕ್ಕೆ ಸ್ವರಾ ವಿರುದ್ಧ ಅಪಸ್ವರಗಳು ಅಲ್ಲಲ್ಲಿ ಕೇಳಿಬರುತ್ತಲೇ ಇದ್ದು, ಇದಕ್ಕೆ ಸ್ವರಾ ದಿಟ್ಟ ಉತ್ತರವನ್ನೂ ನೀಡುತ್ತಿದ್ದಾರೆ. ದುವೆಯಾದ ಮೇಲೂ ಇವರ ಮದುವೆಯ ಬಗ್ಗೆ ಅಪಸ್ವರ ಕೇಳಿಬಂದಿತ್ತು. ಖುದ್ದು ಇಸ್ಲಾಮಿಕ್ ಧರ್ಮಗುರು (Islamic cleric) ಈ ಮದುವೆಯನ್ನು ವಿರೋಧಿಸಿದ್ದರು. ಚಿಕಾಗೋ ಮೂಲದ ನಿಯತಕಾಲಿಕದ ಸಂಪಾದಕ ಮತ್ತು ವಿದ್ವಾಂಸರಾಗಿರುವ ಡಾ, ಯಾಸಿರ್ ನದೀಮ್ ಅಲ್ ವಾಜಿದಿ (Dr.Yasir Nadeem Al Wajidi) ಅವರು ಈ ಮದುವೆ ಅಮಾನ್ಯವಾಗಿದೆ. ಇಬ್ಬರೂ ಬೇರೆ ಧರ್ಮೀಯರಾಗಿದ್ದು, ವಿಭಿನ್ನ ನಂಬಿಕೆಗಳಿಂದ ಬಂದ ಕಾರಣ ಮದುವೆ ಅಸಿಂಧು ಎಂದು ಘೋಷಿಸಿದ್ದರು. ಮದುವೆಯಾದ ಮೇಲೆ ಭರ್ಜರಿ ಫಸ್ಟ್​ನೈಟ್​ ಬೆಡ್​ರೂಮ್​ ಫೋಟೋ ಶೇರ್​ ಮಾಡಿಯೂ ಟ್ರೋಲ್​ಗೆ ಒಳಗಾಗಿದ್ದರು. ಅವರ ಹಾಸಿಗೆಯನ್ನು ಗುಲಾಬಿಗಳು ಮತ್ತು ವಿವಿಧ ರೀತಿಯ ಹೂವುಗಳಿಂದ ಅಲಂಕರಿಸಲಾಗಿದೆ. ಇದಕ್ಕೆ ಸ್ವರಾ ಅವರು ತಮ್ಮ ತಾಯಿಗೆ ಧನ್ಯವಾದ ತಿಳಿಸಿದ್ದರು. ಸಿನಿಮಾ ಸ್ಟೈಲ್​ನಲ್ಲಿಯೇ ಬೆಡ್​ರೂಂ (Bedroom) ಶೃಂಗಾರ ಮಾಡಲಾಗಿತ್ತು.

ದೆಹಲಿಯಲ್ಲಿ ಸ್ವರಾ-ಫಹಾದ್​ 'ಪುನರ್​ಮಿಲನ': ಕುಟುಂಬಸ್ಥರಿಂದ ಅದ್ಧೂರಿ ಕಾರ್ಯಕ್ರಮ