Asianet Suvarna News Asianet Suvarna News

ದುಡ್ಡಿಗಾಗಿ ಎಲ್ಲವನ್ನೂ ಮಾಡಿಬಿಟ್ಟೆ, ದೇವ್ರೇ ಈ ಚಿತ್ರ ರಿಲೀಸ್​ ಆಗದೇ ಇರ್ಲಿಯಂತ ಬೇಡಿಕೊಳ್ತಿದ್ದೆ- ನೀನಾ ಗುಪ್ತಾ

ಆರಂಭದ ದಿನಗಳಲ್ಲಿ ಇಂಡಸ್ಟ್ರಿಯಲ್ಲಿ ನೆಲೆಯೂರಲು ಪಟ್ಟ ಶ್ರಮಗಳು ಹಾಗೂ ಮಾಡಿದ ಅಶ್ಲೀಲ ಪಾತ್ರಗಳ ಕುರಿತು ನಟಿ ನೀನಾ ಗುಪ್ತಾ ಹೇಳಿದ್ದೇನು? 
 

Neena Gupta recalls doing unsuitable roles during struggling days prayed those movies never released suc
Author
First Published May 25, 2024, 5:07 PM IST

ಚಿತ್ರರಂಗದಲ್ಲಿ ಬೋಲ್ಡ್ ಮತ್ತು ರೆಬೆಲ್ ನಟಿ ಎಂದು ಕರೆಯಲ್ಪಡುವ ಬಾಲಿವುಡ್​ ತಾರೆ ನೀನಾ ಗುಪ್ತಾ ಅವರು ತಮ್ಮ ವೃತ್ತಿಜೀವನದಲ್ಲಿ ಹಲವಾರು ಅತ್ಯುತ್ತಮ ಪಾತ್ರಗಳನ್ನು ನಿರ್ವಹಿಸುವ ಮೂಲಕ ಹೆಸರು ಗಳಿಸಿದ್ದಾರೆ,  ನಟಿ  ಫುಲೇರಾ ಚಿತ್ರದ ನಾಯಕಿ ಮಂಜು ದೇವಿಯಾಗಿ ಮತ್ತೊಮ್ಮೆ ಪುನರಾಗಮನ ಮಾಡುತ್ತಿದ್ದಾರೆ.  ‘ಪಂಚಾಯತ್ 3’ ಈ ವೆಬ್ ಸೀರಿಸ್​ಗೆ ಮೂರನೇ ಸೀಸನ್ ಬರುತ್ತಿದೆ. ಇದರ ಬಿಡುಗಡೆಗೂ ಮುನ್ನ ನಟಿ ತಮ್ಮ ಹೋರಾಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಮುಂಬೈಗೆ ಹೋದಾಗ, ಹಣ ಸಂಪಾದಿಸಲು ತಾನು ಬಯಸದ ಅನೇಕ ಪಾತ್ರಗಳನ್ನು ಮಾಡಬೇಕಾಯಿತು, ಅಶ್ಲೀಲ ಚಿತ್ರಗಳನ್ನೂ ಒಪ್ಪಿಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ.  

ನಟಿ ನೀನಾ ಗುಪ್ತಾ 1982 ರಲ್ಲಿ 'ಸಾಥ್ ಸಾಥ್' ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ತಕ್ಷಣ ಲಾಟರಿ ಹೊಡೆದೇ ಬಿಟ್ಟಿತು. ಹಾಲಿವುಡ್ ಚಿತ್ರ 'ಗಾಂಧಿ'ಯಲ್ಲಿ ಅವಕಾಶ ಸಿಕ್ಕಿತು. ‘ನಾನು ದೆಹಲಿಯಿಂದ ಬಂದವಳು. ನನಗೆ ಆರಂಭದಲ್ಲಿ ಮುಂಬೈ ಹೊಂದಾಣಿಕೆ ಆಗಲಿಲ್ಲ. ನಾನು ಮರಳಿ ದೆಹಲಿಗೆ ಹೋಗಿ ಪಿಚ್​ಡಿ ಪೂರ್ಣಗೊಳಸಬೇಕು ಎಂದುಕೊಂಡೆ. ಆದರೆ, ಈ ನಗರ ನನ್ನನ್ನು ಬಿಡಲಿಲ್ಲ. ಅನೇಕ ಬಾರಿ ಈ ರೀತಿ ಆಗಿದೆ’ ಎಂದಿದ್ದಾರೆ ಅವರು. ಅನೇಕ ಬಾರಿ ತಾವು  ಮಾಡಲು ಬಯಸದಂತಹ ಪಾತ್ರಗಳನ್ನು ಮಾಡಬೇಕಾಯಿತು ಎಂದು ಅವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡಿದ್ದಾರೆ. 

100 ಕೋಟಿ ಬಜೆಟ್​ನ ಕ್ರೌರ್ಯ ಬಿಂಬಿಸುವ 'ಅನಿಮಲ್'​ ದಾಖಲೆ ನುಂಗಿದ 4 ಕೋಟಿಯ 'ಲಪತಾ ಲೇಡೀಸ್​'!

  "ಅವಶ್ಯಕತೆಗೆ ತಕ್ಕಂತೆ ಎಲ್ಲವೂ ಬದಲಾಗಿದೆ, ಮೊದಲು ಹಣದ ಅವಶ್ಯಕತೆ ಹೆಚ್ಚಾದಾಗ ನಾನು ತುಂಬಾ ಕೆಟ್ಟ ಕೆಲಸಗಳನ್ನು ಮಾಡಬೇಕಾಗಿತ್ತು. ನಂತರ ಪಶ್ಚಾತ್ತಾಪ ಪಡುತ್ತಿದ್ದೆ. ಆ ಚಿತ್ರ ರಿಲೀಸ್​  ಆಗದೇ ಇರಲಪ್ಪ ಎಂದು ದೇವರಲ್ಲಿ  ಪ್ರಾರ್ಥಿಸುತ್ತಿದ್ದೆ. ಆದರೆ ಈಗ ಕಾಲ ಬದಲಾಗಿದೆ.  ನಾನು ತುಂಬಾ ಇಷ್ಟಪಡುವ ಸ್ಕ್ರಿಪ್ಟ್ ಮಾಡುತ್ತೇನೆ, ನನಗೆ ಇಷ್ಟವಿಲ್ಲದಿದ್ದರೆ ನಾನು ಮಾಡುವುದಿಲ್ಲ ಎನ್ನುವ ಹೇಳುವ ಧೈರ್ಯವಿದೆ ಎಂದಿದ್ದಾರೆ. ನಟಿಯಾಗಲು ಮುಂಬೈಗೆ ಬಂದಾಗ,   ನೈತಿಕ ಸ್ಥೈರ್ಯವು ಹಲವು ಬಾರಿ ಮುರಿದುಹೋಗಿತ್ತು ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ತನ್ನ ಬ್ಯಾಗ್ ಪ್ಯಾಕ್ ಮಾಡಿ ದೆಹಲಿಗೆ ಹೋಗಲು ಬಯಸಿದ್ದೆ. ಆದರೆ  ಇದನ್ನು ಮಾಡಲು ಸಾಧ್ಯವಾಗಲಿಲ್ಲ.   ಕೊನೆಗೆ ಇಷ್ಟವಿಲ್ಲದ ಪಾತ್ರಗಳನ್ನು ಒಪ್ಪಿಕೊಳ್ಳುವ ಸ್ಥಿತಿ ನಿರ್ಮಾಣವಾಯಿತು ಎಂದಿದ್ದಾರೆ. ಇಂದು 64 ನೇ ವಯಸ್ಸಿನಲ್ಲಿ ಅವರು ಇನ್ನೂ ಕೆಲಸ ಮಾಡುತ್ತಿದ್ದಾರೆ.

‘ಎಲ್ಲರೂ ನನ್ನನ್ನು ರೆಬೆಲ್ ಎಂದು ಏಕೆ ಕರೆಯುತ್ತಾರೆ ಗೊತ್ತಿಲ್ಲ. ನಾನು ಮುಗ್ಧ ಪಾತ್ರಗಳನ್ನು ಮಾಡಿದ್ದೇನೆ. ನಾನು ಸ್ಟ್ರಾಂಗ್ ಅಥವಾ ಗ್ಲಾಮರ್ ಪಾತ್ರ ಮಾಡಿಲ್ಲ. ನಾನು ಗಂಡನಿಲ್ಲದ ಮಹಿಳೆ ಎಂದು ಮಾಧ್ಯಮದವರು ಬಿಂಬಿಸಿದರು. ಆ ರೀತಿಯ ಇಮೇಜ್ ಕ್ರಿಯೇಟ್ ಆಯಿತು ಹೀಗಾಗಿ ಆ ರೀತಿಯ ಪಾತ್ರ ಸಿಕ್ಕಿಲ್ಲ. ನಾನು ಸತ್ತ ಬಳಿಕವೂ ಅವರು ಬಿಡಲ್ಲ. ಬೋಲ್ಡ್ ನೀನಾ ಗುಪ್ತಾ ಇನ್ನಿಲ್ಲ ಎಂದೇ ಬರೆಯುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ನಟಿ.  ಅಂದಹಾಗೆ, ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ‘ಪಂಚಾಯತ್ 3’ ಸೀರಿಸ್ ಪ್ರಸಾರ ಕಾಣಲಿದೆ.
ಈ ಏಳು ಗುಣವಿದ್ದರೆ ಸುಹಾನಾ ಖಾನ್​ ಜೊತೆ ಡೇಟಿಂಗ್​ ಮಾಡಲು ಅಪ್ಪ ಶಾರುಖ್​ ಗ್ರೀನ್​ ಸಿಗ್ನಲ್​!

Latest Videos
Follow Us:
Download App:
  • android
  • ios