ಎನ್ಸಿಬಿ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಕೇಸ್ಗೆ ಸಂಬಂಧಿಸಿ ಚಾರ್ಜ್ ಶೀಟ್ ಸಲ್ಲಿಸಲಿದೆ.  ಇದು ಸುಮಾರು 30 ಸಾವಿರ ಪುಟಗಳಷ್ಟಿದೆ ಎನ್ನಲಾಗಿದೆ.

ಎನ್ಸಿಬಿ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಕೇಸ್ಗೆ ಸಂಬಂಧಿಸಿದಂತೆ ಸುಮಾರು 30 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಿದೆ. ಎನ್ಸಿಬಿ ಮುಖ್ಯಸ್ಥ ಸಮೀರ್ ವಾಖಂಡೆ ಸ್ವತಃ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ.

ಸುಶಾಂತ್‌ ಪ್ರಕರಣಕ್ಕೆ ಟ್ವಿಸ್ಟ್, ದಿಶಾ ಪ್ರಿಯತಮನ ಮನೆಯಲ್ಲಿ ಸಿಕ್ಕ ಸಾಕ್ಷಿ!

ಎನ್ಸಿಬಿ ಚಾರ್ಜ್ ಶೀಟ್ನಲ್ಲಿ ಸುಶಾಂತ್ನ ಮಾಜಿ ಗೆಳತಿ ರಿಯಾ ಚಕ್ರವರ್ತಿಯ ಸೆಹರೂ ಇದೆ ಎನ್ನಲಾಗಿದೆ. ರಿಯಾ ಸುಮಾರು 1 ತಿಂಗಳು ಜೈಲಿನಲ್ಲಿದ್ದರು.

ಎನ್ಸಿಬಿ ತಯಾರಿಸಿದ ಚಾರ್ಜ್ಶೀಟ್ನಲ್ಲಿ ಒಟ್ಟು 33 ಹೆಸರುಗಳಿವೆ. ರಿಯಾ ಚಕ್ರವರ್ತಿ ಮಾತ್ರವಲ್ಲದೆ ಉಳಿದ ಪ್ರಮುಖ ಡ್ರಗ್ಸ್ ಪೆಡ್ಲರ್ಗಳ ಹೆಸರನ್ನು ಇದರಲ್ಲಿ ನಮೂದಿಸಲಾಗಿದೆ. ಇದರಲ್ಲಿ ಹೆಚ್ಚಿನವರನ್ನು ಡ್ರಗ್ಸ್ ವಿಚಾರವಾಗಿ ಎನ್ಸಿಬಿ ಬಂಧಿಸಿ ವಿಚಾರಣೆ ನಡೆಸಿದೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ಮುಂಬೈನ ಬಾಂದ್ರಾದಲ್ಲಿ ಕಳೆದ ವರ್ಷ ಜೂನ್ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದರ ನಂತರ ನೆಪೊಟಿಸಂ ಮತ್ತು ಡ್ರಗ್ಸ್ ವಿಚಾರವಾಗಿ ಸಾಕಷ್ಟು ಚರ್ಚೆಯಾಗಿತ್ತು.