ಮಲಯಾಳಂ ನಟಿ ನಜ್ರಿಯಾ ನಜೀಂ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದು ಮೊದಲ ತೆಲುಗು ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ನಜ್ರಿಯಾ ಛಾಯಾಗ್ರಾಹಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

ಮಲಯಾಳಂ ಖ್ಯಾತ ನಟಿ ನಜ್ರಿಯಾ ನಜೀಮ್(Nazriya Nazim) ಮತ್ತೆ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ನಟ ಫಹಾದ್ ಫಾಸಿಲ್(Fahadh Faasi) ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ನಜ್ರಿಯಾ ಬಣ್ಣ ಲೋಕದಿಂದ ಅಂತರ ಕಾಯ್ದುಕೊಂಡಿದ್ದರು. ಆದರೀಗ ಮತ್ತೆ ಸಿನಿಮಾ ಲೋಕದಲ್ಲಿ ಸಕ್ರೀಯರಾಗಿದ್ದಾರೆ. ಸುಮಾರು ನಾಲ್ಕೈದು ವರ್ಷಗಳಿಂದ ಬಣ್ಣ ಲೋಕದಿಂದ ಮರೆಯಾಗಿದ್ದ ಮಲಯಾಳಂ ಸುಂದರಿ ನಜ್ರಿಯಾ ಕೋಡೆ(Koode) ಸಿನಿಮಾ ಮೂಲಕ ವಾಪಸ್ ಆಗಿದ್ದರು. ಈ ಸಿನಿಮಾ ನಜ್ರಿಯಾ ಕಮ್ ಬ್ಯಾಕ್ ಸಿನಿಮಾ ಆಗಿದ್ದರಿಂದ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ನಿರೀಕ್ಷಿತ ಮಟ್ಟಕ್ಕೆ ಸಿನಿಮಾ ಯಶಸ್ಸು ಕಾಣಲಿಲ್ಲ. ಟ್ರಾನ್ಸ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಕೂಡ ಹೇಳುವಷ್ಟು ಮಟ್ಟಕ್ಕೆ ಯಶಸ್ಸು ಕಾಣಲಿಲ್ಲ.

ಬಳಿಕ ತೆಲುಗು ಸಿನಿಮಾಗರಂಗಕ್ಕೆ ನಜ್ರಿಯಾ ಎಂಟ್ರಿ ಕೊಟ್ಟಿದ್ದಾರೆ. ತೆಲುಗಿನಲ್ಲಿ ಸದ್ಯ ನಜ್ರಿಯಾ ಅಂಟೆ ಸುಂದರನಿಕಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ತೆಲುಗು ಸ್ಟಾರ್ ನಾನಿ ನಾಯಕನಾಗಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ನಾನಿ ಜೊತೆ ತೆರೆಹಂಚಿಕೊಳ್ಳುತ್ತಿರುವ ನಜ್ರಿಯಾ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ನಜ್ರಿಯಾ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಹೇಗಿರಲಿದೆ ಲುಕ್ ಎನ್ನುವ ಅಭಿಮಾನಿಗಳಲ್ಲಿತ್ತು ಇದೀಗ ಅಭಿಮಾನಿಗಳ ಕುತೂಹಲಕ್ಕೆ ತೆರೆಬಿದ್ದಿದೆ. ನಜ್ರಿಯಾ ನಟನೆಯ ಮೊದಲ ತೆಲುಗು ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

ಎಕ್ಸ್‌ಪ್ರೆಷನ್ ಕೊಡೋದ್ರಲ್ಲಿ ಎಕ್ಸ್‌ಪರ್ಟ್ ಮೇಘನಾ ರಾಜ್ ಫ್ರೆಂಡ್..!

ಚಿತ್ರದಲ್ಲಿ ನಜ್ರಿಯಾ ಲೀಲಾ ಥಾಮಸ್ ಎಂಬ ಛಾಯಾಗ್ರಾಹಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾನಿ ಮತ್ತು ನಜ್ರಿಯಾ ಅವರನ್ನು ಒಟ್ಟಿಗೆ ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ. ಅಂದಹಾಗೆ ಇದು ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ ಎಂದ ಹೇಳಲಾಗುತ್ತಿದೆ. ಚಿತ್ರಕ್ಕೆ ವಿವೇಕ್ ಅತ್ರೆಯ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿವೇಕ್ ಸಾಗರ್ ಸಂಗೀತ ನೀಡುತ್ತಿದ್ದಾರೆ. ಮೈತ್ರಿ ಮೂವೀಸ್ ನಲ್ಲಿ ಸಿನಿಮಾ ಮೂಡಿಬರುತ್ತಿದೆ. ಇದೇ ಬ್ಯಾನರ್ ನಲ್ಲಿ ನಜ್ರಿಯಾ ಪತಿ, ಫಹಾದ್ ಫಾಸಿಲ್ ನಟಿಸುತ್ತಿದ್ದಾರೆ. ಪುಷ್ಪಾ ಸಿನಿಮಾ ಮೂಲಕ ಫಹಾದ್ ತೆಲುಗಿನಲ್ಲಿ ನಟಿಸುತ್ತಿದ್ದಾರೆ. ಇದೀಗ ನಜ್ರಿಯಾ ಹವಾ ಶುರುವಾಗಿದೆ. ಅಭಿಮಾನಿಗಳು ಫಹಾದ್ ಮತ್ತು ನಜ್ರಿಯಾ ಇಬ್ಬರನ್ನು ತೆರೆಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ಹೊಸ ಫೋಟೋಸ್ ಶೇರ್ ಮಾಡ್ಕೊಂಡ ಮೇಘನಾ ರಾಜ್ ಫ್ರೆಂಡ್

ಅಂದಹಾಗೆ ಈ ಸಿನಿಮಾ ನಟ ನಾನಿ ನಟನೆಯ 28ನೇ ಸಿನಿಮಾವಾಗಿದೆ. ನಾನಿ ಕೊನೆಯದಾಗಿ ಶ್ಯಾಮ್ ಸಿಂಘ ರಾಯ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಅಂಟೆ ಸುಂದರನಿಕಿ ಸಿನಿಮಾ ಜೊತೆಗೆ ಇನ್ನೂ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.