Asianet Suvarna News Asianet Suvarna News

ಮನೆ ಕೆಲಸದವಳ 4 ಲಕ್ಷ ಸಾಲ ತೀರಿಸಿದ ನಯನತಾರ; ಸೊಸೆ ಸಮಾಜ ಸೇವೆಯನ್ನು ಕೊಂಡಾಡಿದ ಅತ್ತೆ

ಲೇಡಿ ಸೂಪರ್ ಸ್ಟಾರ್ ಬಗ್ಗೆ ಮಾತನಾಡಿ ವಿಘ್ನೇಶ್ ತಾಯಿ. ಸೊಸೆ ಅಂದ್ರೆ ಹೀಗಿರಬೇಕಂತೆ.....

Nayanthara mother talks about daughter in law helping nature vcs
Author
First Published Nov 30, 2022, 4:05 PM IST

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಸಿನಿ ಪ್ರಪಂಚದಿಂದ ಬ್ರೇಕ್ ತೆಗೆದುಕೊಂಡು ಕೂಲ್ ಅಗಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಸರೋಗೆಸಿ ಮೂಲಕ ಅವಳಿ ಗಂಡು ಮಕ್ಕಳನ್ನು ಬರ ಮಾಡಿಕೊಂಡಿರುವ ನಯನತಾರ ಬಗ್ಗೆ ವಿಘ್ನೇಶ್ ತಾಯಿ ಮೀನಾ ಕುಮಾರಿ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸೊಸೆ ಅಂದ್ರೆ ಹೀಗಿರಬೇಕು ಎಂದಿದ್ದಾರೆ....

ಖಾಸಗಿ ಯೂಟ್ಯೂಬ್‌ ಸಂದರ್ಶನದಲ್ಲಿ ಮಾತನಾಡಿರುವ ಮೀನಾ ಕುಮಾರಿ ನನ್ನ ಈ ಪ್ರಪಂಚದಲ್ಲಿ ನಾನು ಕಂಡಿರುವ ಅತಿ ಹೆಚ್ಚು ಕಾಳಜಿ ಮತ್ತು ಪ್ರೀತಿ ಕೊಡುವ ವ್ಯಕ್ತಿ ಅಂದ್ರೆ ನಯನತಾರ ಯಾರು ಏನೇ ಕಷ್ಟ ಅಂದರು ಸಹಾಯ ಮಾಡಲು ಮುಂದಿರುತ್ತಾಳೆ ಎಂದಿದ್ದಾರೆ. 

Nayanthara mother talks about daughter in law helping nature vcs

' ನನ್ನ ಮಗ ವಿಘ್ನೇಶ್ ಖ್ಯಾತ ಚಿತ್ರ ನಿರ್ದೇಶಕ ಸೊಸೆ ದೊಡ್ಡ ಸ್ಟಾರ್ ನಟಿ. ಇಬ್ಬರು ತುಂಬಾ ಕಷ್ಟ ಪಟ್ಟು ಶ್ರಮಪಟ್ಟು ಜೀವನ ನಡೆಸುತ್ತಾರೆ. ಮನೆಯಲ್ಲಿ ಒಟ್ಟು 8 ಸಹಾಯಕರು ಇದ್ದಾರೆ 4 ಗಂಡಸರು 4 ಹೆಂಗಸರು ಇದ್ದಾರೆ. ಒಂದು ಸಲ ಮನೆ ಕೆಲಸ ಮಾಡುವ ಮಹಿಳೆ 4 ಲಕ್ಷ ರೂಪಾಯಿ ಸಾಲ ಇದೆ ತೀರಿಸಲು ಆಗುತ್ತಿಲ್ಲ ಎಂದು ದುಖಃ ಹೇಳಿಕೊಂಡಾಗ ರೂಮಿನ ಕಡೆ ಓದಿ ಕೆಲವೇ ನಿಮಿಷಗಳಲ್ಲಿ 4 ಲಕ್ಷ ತಂದು ಕೈ ಕೊಟ್ಟು ತೀರಿಸಿಕೋ ಎಂದು ಹೇಳುತ್ತಾಳೆ' ಎಂದು ಯಾರಿಗೂ ಗೊತ್ತಿರದ ವಿಷಯ ಹಂಚಿಕೊಂಡ ಮೀನಾ ಕುಮಾರಿ.

ಒಂದು ಸಿನಿಮಾಗೆ 3 ಕೋಟಿ ಪಡೆಯುವ ನಟಿ ನಯನತಾರಾ ಆಸ್ತಿ ಎಷ್ಟಿದೆ ಗೊತ್ತಾ?

'ಕೆಲಸ ಮಾಡುವ ಮಹಿಳೆಗೆ ಸಹಾಯ ಮಾಡಲು ಮನಸ್ಸು ಇದೆ ಅಂದ್ರ ಎಷ್ಟು ಒಳ್ಳೆ ಮನಸ್ಸಿನ ಹುಡುಗಿ ಆಗಿರಬೇಕು. ಮನೆಯಲ್ಲಿ ಹಲವು ವರ್ಷಗಳಿಂದ ಕೆಲಸಮಾಡುತ್ತಿರುವವರಿಗೆ ನಮ್ಮ ಸಹಾಯ ಬೇಕಿದೆ ಅದನ್ನು ನಯನ ಮಾಡುತ್ತಾಳೆ. ಒಂದು ಸಲ ನಯನತಾರ ತಾಯಿ ಕೆಲಸ ಮಾಡುವವರಿಗೆ ಚಿನ್ನದ ಬಳೆಯನ್ನು ಕೊಟ್ಟು ಬಳಸಿಕೊಳ್ಳಿ ಎಂದು ಹೇಳಿದ್ದರ ಅವರ ತಾಯಿ ಕೂಡ ಅದೇ ಮನಸ್ಸಿನವರು. ಇಲ್ಲಿ ಪರಸ್ಪರ ನಂಬಿಕೆ ಇದೆ. ತುಂಬಾ ನಂಬಿಕೆ ಇಟ್ಟು ಆ ಮನೆಯಲ್ಲಿ ಕೆಲಸ ಮಾಡಿದ್ದರೆ ಮಾಲೀಕರು ಕೂಡ ಚೆನ್ನಾಗಿ ನೋಡಿಕೊಳ್ಳಬೇಕು ಅದೇ ರೀತಿ ಅವರು ನಮ್ಮ ಮನೆಯನ್ನು ಕಾಪಾಡುತ್ತಾರೆ' ಎಂದಿದ್ದಾರೆ ಮೀನಾ ಕುಮಾರಿ.

ಪತಿಯಿಂದ ದುಬಾರಿ ಗಿಫ್ಟ್‌:

ದುಬಾರಿ ಮದುವೆ ಮೂಲಕ ಸದ್ದು ಮಾಡುತ್ತಿರುವ ನಯನತಾರಾ ಜೋಡಿ ಒಬ್ಬರಿಗೊಬ್ಬರು ನೀಡಿರುವ ಗಿಫ್ಟ್ ಕೂಡ ಅಷ್ಟೆ ದುಬಾರಿಯಾಗಿದೆ. ಹೌದು, ಮದುವೆಗೆ ವಿಘ್ನೇಶ್ ಶಿವನ್ ಪತ್ನಿ ನಯನತಾರಾಗೆ ದುಬಾರಿ ಉಡುಗೊರೆ ನೀಡಿದ್ದಾರೆ.  ಪ್ರೀತಿಯ ಪತ್ನಿಗೆ ವಿಘ್ನೇಶ್ ಶಿವನ್ ದುಬಾರಿ ಬೆಲೆಯ ಆಭರಣವನ್ನು ಗಿಪ್ಟ್ ಆಗಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಯನತಾರಾ ಮದುವೆಗೆ ಧರಿಸಿದ್ದ ಅಭರಣವನ್ನು ವಿಘ್ನೇಶ್ ಶಿವನ್ ಗಿಫ್ಟ್ ನೀಡಿದ್ದು ಎನ್ನಲಾಗಿದೆ. ಒಟ್ಟು  3 ರಿಂದ 3.5 ಕೋಟಿ ಬೆಲೆಬಾಲು ಒಡವೆಯನ್ನು ಧರಿಸಿದ್ದರು.  ಇನ್ನು 5 ಕೋಟಿ ರೂಪಾಯಿಯ ರಿಂಗ್ ಅನ್ನು ವಿಘ್ನೇಶ್ ಶಿವನ್ ಉಡುಗೊರೆಯಾಗಿ ನೀಡಿದ್ದಾರೆ.  ನಯನತಾರಾ ಕೂಡ ಪತಿ ವಿಘ್ನೇಶ್ ಶಿವನ್‌ಗೆ ಭರ್ಜರಿ ಗಿಪ್ಟ್ ನೀಡಿದ್ದಾರೆ. 20  ಕೋಟಿ ಬೆಲೆಬಾಳುವ ಬಂಗ್ಲೆಯನ್ನು ಗಿಫ್ಟ್ ನೀಡಿದ್ದಾರೆ ಎಂದು ವರದಿಯಾಗಿದೆ. 

Follow Us:
Download App:
  • android
  • ios