100 ಕೋಟಿ ಕೊಟ್ಟರೂ ಈ ನಟನ ಜೊತೆ ನಟಿಸಲ್ಲ ಎನ್ನುತ್ತಲೇ ಭಾರಿ ಆಫರ್ ರಿಜೆಕ್ಟ್ ಮಾಡಿದ ನಯನತಾರಾ!
100 ಕೋಟಿ ಕೊಟ್ಟರೂ ಈ ನಟನ ಜೊತೆ ನಟಿಸಿಲ್ಲ ಎನ್ನುತ್ತಲೇ ಭಾರಿ ಆಫರ್ ರಿಜೆಕ್ಟ್ ಮಾಡಿದ್ದಾರೆ ನಟಿ ನಯನತಾರಾ! ಯಾರೀ ನಟ?
ಸೌತ್ ಸಿನಿಮಾ ಇಂಡಸ್ಟ್ರಿಯ ಲೇಡಿ ಸೂಪರ್ ಸ್ಟಾರ್ ನಯನತಾರಾ ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿಯಲ್ಲೂ ಅಭಿನಯಿಸಿ ಸೈಎನಿಸಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ನಯನತಾರಾ ಕೂಡ ಒಬ್ಬರು. ಶಾರುಖ್ ಖಾನ್ ಚಿತ್ರ ಜವಾನ್ ಸೂಪರ್ ಡೂಪರ್ ಯಶಸ್ಸಿನ ನಂತರ ನಯನತಾರಾಗೆ ಭಾರಿ ಬೇಡಿಕೆ ಬರುತ್ತಿದೆ. ಇತ್ತೀಚೆಗಷ್ಟೇ ನಟಿ ಕಾಸ್ಟಿಂಗ್ ಕೌಚ್ ಕುರಿತು ಮಾತನಾಡಿದ್ದರು. ನನಗೂ ಆರಂಭದ ದಿನಗಳಲ್ಲಿ ಇದರ ಅನುಭವ ಆಗಿದೆ. ನನ್ನನ್ನೂ ಕೆಲವರು ಕಮೀಟ್‌ಮೆಂಟ್ ಬಗ್ಗೆ ಕೇಳಿ ಏನೇನೋ ಮಾತನಾಡಿದ್ದಾರೆ. ಆದರೆ ನಾನು ಇಂಡಸ್ಟ್ರಿಗೆ ಟ್ಯಾಲೆಂಟ್ ನಂಬಿ ಬಂದವಳು. ಇಂಥ ಘಟನೆಗಳನ್ನು ನನ್ನ ಹತ್ತಿರ ಸುಳಿಗೊಡಲಿಲ್ಲ. ಬರೀ ಟ್ಯಾಲೆಂಟ್‌ನಿಂದಲೇ ಈ ಮಟ್ಟಕ್ಕೇರಿದ್ದೀನಿ. ಆದ್ದರಿಂದ ಇಂಥ ಪರಿಸ್ಥಿತಿ ಎದುರಿಸುವ ಕಲೆ ನಟಿಯರಿಗೆ ಗೊತ್ತಿರಬೇಕಷ್ಟೇ ಎಂದಿದ್ದರು.
ಇದೀಗ ಇನ್ನೊಂದು ವಿಷಯ ಬಹಿರಂಗಗೊಂಡಿದೆ. ಜವಾನ್ ಚಿತ್ರದಲ್ಲಿ 10 ಕೋಟಿ ರೂಪಾಯಿ ಪಡೆದಿರುವ ನಯನತಾರಾ, ಇದೀಗ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಆದರೆ ಓರ್ವ ನಟನ ಜೊತೆ ಮಾತ್ರ ನಟಿ, 10 ಅಲ್ಲ 100 ಕೋಟಿ ಕೊಟ್ಟರೂ ಕೆಲಸ ಮಾಡದೇ ಇರುವ ವಿಷಯ ರಿವೀಲ್ ಆಗಿದೆ. ಅಷ್ಟಕ್ಕೂ ಆ ನಟನ ಹೆಸರು ಸರವಣನ್. ತಮಿಳು ನಟ ಇವರು. 2022ರಲ್ಲಿ ದಿ ಲೆಂಜೆಂಡ್ ಸಿನಿಮಾ ರಿಲೀಸ್ ಆಯ್ತು. ಸರವಣನ್ ನಾಯಕನಾಗಿ ನಟಿಸಿದ ಈ ಸಿನಿಮಾ ಹಿಟ್ ಆಗಲಿಲ್ಲ. ನಯನತಾರಾ ಈ ಸಿನಿಮಾ ನಟಿಯಾಗ್ಬೇಕು ಎಂದು ಸರವಣನ್ ನಾನಾ ಸರ್ಕಸ್ ಮಾಡಿದ್ದರು. ಆದರೆ ನಟಿ ಯಾವುದಕ್ಕೂ ಜಗ್ಗಿರಲಿಲ್ಲ. ನನಗೆ 10 ಅಲ್ಲ, 100 ಕೋಟಿ ಕೊಟ್ಟರೂ ಬರುವುದಿಲ್ಲ ಎಂದಿದ್ದರು. ನಯನತಾರಾ ಬದಲಿಗೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸರವಣನ್ಗೆ ನಾಯಕಿಯಾಗಿ ನಟಿಸಿದ್ದರು.
ಸಂಭಾವನೆ ವಿಚಾರದಲ್ಲಿ ಬಾಲಿವುಡ್ ತಾರೆಯರಾದ ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ನೈನ್ಸ್ ಗಿಂತ ಮುಂದಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಸಂಭಾವನೆ 15 ರಿಂದ 30 ಕೋಟಿ ರೂ. ಪಡೆಯುತ್ತಾರೆ. ಆದರೆ ಸರವಣನ್ ಅವರ ವಿಷಯದಲ್ಲಿ ನಟಿ ಹೀಗೆ ಏಕೆ ಹೇಳಿದರು ಎನ್ನುವ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಆದರೆ ನಟಿ ಇದುವರೆಗೆ ಈ ವಿಷಯದ ಬಗ್ಗೆ ಮಾತನಾಡಲಿಲ್ಲ. ಆದರೆ ತಮಿಳು ಮಾಧ್ಯಮವೊಂದರಲ್ಲಿ ಸಿನಿಮಾ ಪತ್ರಕರ್ತ ಚೆಯ್ಯರು ಬಾಲು ಈ ವಿಷಯ ರಿವೀಲ್ ಮಾಡಿದ್ದಾರೆ. “ನಯನತಾರಾ ಅವರ ಮನೆಯ ಮುಂದೆ ಸದಾ ರೋಲ್ಸ್ ರಾಯ್ಸ್ ಕಾರೊಂದು ನಿಲ್ಲುತ್ತಿತ್ತು. ಅದನ್ನು ನೋಡಿ ಅಚ್ಚರಿಪಟ್ಟಿದ್ದೆ. ನಂತರ ಅದೇ ಕಾರು ಮದುವೆಯೊಂದರಲ್ಲಿ ಕಾಣಿಸಿಕೊಂಡಾಗ ವಿಷಯ ತಿಳಿದುಕೊಂಡೆ. ಅದು ಲೆಜೆಂಡ್ ಸರವಣನ ಕಾರಾಗಿತ್ತು. ಅವರು ತಮ್ಮ ಚಿತ್ರದಲ್ಲಿ ನಟಿಸಲು ನಯನತಾರಾ ಅವರನ್ನು ಸಾಕಷ್ಟು ಕೇಳಿಕೊಂಡಿದ್ದರು. ಹಲವು ಬಾರಿ ಅವರ ಮನೆಗೂ ಭೇಟಿ ಕೊಟ್ಟಿದ್ದ ವಿಷಯ ತಿಳಿಯಿತು. ಅಷ್ಟೇ ಅಲ್ಲದೇ, ಅವರು ತಮ್ಮ ಸಿನಿಮಾದಲ್ಲಿ ನಯನತಾರಾ ನಟಿಸಲು ದುಪ್ಪಟ್ಟು ಸಂಭಾವನೆ ನೀಡುವುದಾಗಿ ಹೇಳಿದ್ದ ವಿಷಯ ತಿಳಿಯಿತು. ಆದರೆ ಅದ್ಯಾಕೋ ಗೊತ್ತಿಲ್ಲ, 100 ಕೋಟಿ ಕೊಟ್ಟರೂ ನಾನು ನಟಿಸುವುದಿಲ್ಲ ಎಂದು ನಯನತಾರಾ ಖಡಕ್ ಆಗಿ ಹೇಳಿದ್ದರಂತೆ ಎಂದು ವಿಷಯ ಬಹಿರಂಗಗೊಳಿಸಿದ್ದಾರೆ.
ಅಷ್ಟಕ್ಕೂ ನಯನತಾರಾ, ಸಿನಿಮಾದ ಹೊರತಾಗಿ ಕೆಲವೊಂದು ಬ್ಯುಸಿನೆಸ್ ಮೂಲಕವೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ತಮ್ಮ ವೃತ್ತಿಜೀವನದ ಬಿಡುವಿಲ್ಲದ ಸಮಯದ ನಡುವೆಯೂ ವ್ಯಾಪಾರದ ಮೇಲೆ ಗಮನ ಕೊಡುವ ನಯನತಾರಾಗೆ, ಅವರ ಪತಿ ವಿಘ್ನೇಶ್ ಶಿವನ್ ಕೂಡ ಬೆಂಬಲ ನೀಡುತ್ತಾರೆ. ಇನ್ನು ಸಿನಿಮಾ ಮತ್ತು ವ್ಯಾಪಾರದಿಂದ ನಯನತಾರಾ ಕೋಟಿಗಟ್ಟಲೆ ಆದಾಯ ಹೊಂದಿದ್ದಾರೆ.
Priyanka Chopra: ಅಂಡರ್ವೇರ್ ಕಳಚಿ ಎಂದಿದ್ದ ಆ ನಿರ್ದೇಶಕ: ಕರಾಳ ದಿನದ ಕುರಿತು ಮೌನ ಮುರಿದ ನಟಿ