ನಟಿ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಗಳಿಸುತ್ತಿದ್ದಾರೆ. ಸಿನಿಮಾ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಅವರು ಟ್ರೋಲ್‌ಗಳಿಗೂ ಗುರಿಯಾಗುತ್ತಿದ್ದಾರೆ. ಇತ್ತೀಚೆಗೆ, ಜೀವನದ ಬಗ್ಗೆ ಸಕಾರಾತ್ಮಕವಾಗಿರಲು ಸಲಹೆ ನೀಡುವ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ರಶ್ಮಿಕಾ ಸಲ್ಮಾನ್ ಖಾನ್ ಜೊತೆ 'ಸಿಕಂದರ್' ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾ ಬಿಡುಗಡೆಗೂ ಮುನ್ನವೇ 165 ಕೋಟಿ ಗಳಿಸಿದೆ.
ನ್ಯಾಷನಲ್ ಕ್ರಶ್ (National Crush), ಬಾಲಿವುಡ್ ನಟಿ ರಶ್ಮಿಕಾ ಮಂದಣ್ಣ (Bollywood actress Rashmika Mandanna) ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಸಿದ್ಧಿ ಪಡೆಯುತ್ತಿದ್ದಾರೆ. ಸಿನಿಮಾ, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಟ್ರೋಲ್ ಆಗೋದ್ರಲ್ಲೂ ಎತ್ತಿದ ಕೈ. ಒಂದ್ಕಡೆ ಹಿಟ್ ಮೇಲೆ ಹಿಟ್ ಸಿನಿಮಾ ನೀಡಿ, ಬಾಲಿವುಡ್ ನಲ್ಲೂ ಆಫರ್ ಗಿಟ್ಟಿಸಿಕೊಳ್ತಿರುವ ಕೊಡಗಿನ ಹುಡುಗಿ, ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಪೋಸ್ಟ್ ಹಾಕಿ ಫ್ಯಾನ್ಸ್ ಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಈ ಮಧ್ಯೆ ಕನ್ನಡ, ಕನ್ನಡ ಭಾಷೆ ವಿಷ್ಯಕ್ಕೆ ಕೆಲವರ ಕೆಂಗಣ್ಣಿಗೆ ಗುರಿಯಾಗ್ತಿರುತ್ತಾರೆ. ಆದ್ರೆ ಏನೇ ಆದ್ರೂ ಯಾವುದಕ್ಕೂ ಕ್ಯಾರೆ ಎನ್ನದ ನಟಿ ರಶ್ಮಿಕಾ ಮಂದಣ್ಣ. ಬಂದಿದ್ದನ್ನು ಕೂಲ್ ಆಗಿ ಎದುರಿಸುವ ನಟಿಗೆ ಸ್ಯಾಂಡಲ್ವುಡ್ ಮೋಹಕ ತಾರೆ ರಮ್ಯಾ (Ramya) ಈಗಾಗಲೇ ಬೆಂಬಲ ನೀಡಿದ್ದಾರೆ. ಈ ಮಧ್ಯೆ ರಶ್ಮಿಕಾ, ಸೋಶಿಯಲ್ ಮೀಡಿಯಾದಲ್ಲಿ ಇನ್ನೊಂದು ಪೋಸ್ಟ್ ಹಾಕಿ, ಜೀವನವನ್ನು ಹೇಗೆ ತೆಗೆದುಕೊಳ್ಬೇಕು ಅಂತ ಪಾಠ ಮಾಡಿದ್ದಾರೆ.
ರಶ್ಮಿಕಾ ಮಂದಣ್ಣ ತಮ್ಮ ಇನ್ಟಾ ಖಾತೆಯಲ್ಲಿ ಸಿಪ್ಪರ್ ಜೊತೆ ಸೂರ್ಯಕಾಂತಿ ಹೂವನ್ನು ಹಿಡಿದು ಫೋಟೋಕ್ಕೆ ಫೋಸ್ ನೀಡಿದ್ದಾರೆ. ಒಂದಾದ್ಮೇಲೆ ಒಂದರಂತೆ ನಾಲ್ಕು ಫೋಟೋವನ್ನು ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದಾರೆ. ಇದ್ರ ಜೊತೆ ಫ್ಯಾನ್ಸ್ಗೆ ರಶ್ಮಿಕ ಜೀವನ ಪಾಠ ಕಲಿಸಿದ್ದಾರೆ. ಗಾಯ್ಸ್, ಸಾಧ್ಯವಾದಷ್ಟು ಸಕಾರಾತ್ಮಕವಾಗಿರಲು ಪ್ರಯತ್ನಿಸಿ, ನಗು - ನಮಗೆ ಒಂದು ಲೈಫ್ ಮಾತ್ರ ಸಿಕ್ಕಿದೆ. ಆದ್ದರಿಂದ ಅದನ್ನು ಪೂರ್ಣವಾಗಿ ಜೀವಿಸಿ. ಸ್ವಲ್ಪ ಹೆಚ್ಚು ದಯೆಯಿಂದಿರಿ. ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಕಷ್ಟದ ದಿನವನ್ನು ಎದುರಿಸುತ್ತಿದ್ದಾರೆ. ಇತರರಿಗೆ ಪ್ರೀತಿ ನೀಡಿ, ನಿಮ್ಮನ್ನು ನೀವು ಪ್ರೀತಿಸಿ. ಸಾಧ್ಯವಾದಷ್ಟು ಹೈಡ್ರೇಟ್ ಮಾಡಿ ಮತ್ತು ನಿಮ್ಮ ದೇಹಕ್ಕೆ ಪ್ರೀತಿ ನೀಡಿ ಎಂದು ಶೀರ್ಷಿಕೆ ಹಾಕಿದ್ದಾರೆ.
ಕಾಂಡಮ್ ಜಾಹೀರಾತಿಗೆ ಫಿಲ್ಮ್ ಫೀಲ್ಡ್‌ನಿಂದ ಇವರಿಬ್ಬರೇ ಬೆಸ್ಟ್ ಎಂದ ಮ್ಯಾನ್‌ಫೋರ್ಸ್ ಮಾಲೀಕ!
ರಶ್ಮಿಕಾ ಈ ಪೋಸ್ಟ್ ಹಾಕಿದ ಕೆಲವೇ ಗಂಟೆಯಲ್ಲಿ ಲಕ್ಷಗಟ್ಟಲೆ ಲೈಕ್ಸ್ ಬಂದಿದೆ. ಫ್ಯಾನ್ಸ್ ರಶ್ಮಿಕಾ ಪೋಸ್ಟನ್ನು ಮೆಚ್ಚಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ರಶ್ಮಿಕಾ ಮೇಕಪ್ ಇಲ್ಲದೆ ಸೀರೆಯುಟ್ಟ ಫೋಟೋಗಳನ್ನು ಪೋಸ್ಟ್ ಮಾಡಿ, ಕಾಲೇಜು ದಿನಗಳನ್ನು ನೆನಪಿಸಿಕೊಂಡಿದ್ದರು. ಕೊನೆ ಕ್ಷಣದಲ್ಲಿ ಮೇಕಪ್, ಹೇರ್ ಸ್ಟೈಲ್ ಎಲ್ಲವನ್ನೂ ನಾವೇ ಮಾಡಿಕೊಳ್ಳುವ ಪರಿಸ್ಥಿತಿ ಬಂದಾಗ, ಸ್ನೇಹಿತರಿಂದ ಫೋಟೋ ಕ್ಲಿಕ್ಕಿಸುವಂತೆ ಕೇಳಿದಾಗ ಫಲಿತಾಂಶ ಹೀಗೆ ಬರುತ್ತೆ. ಕಾಲೇಜು ದಿನಗಳನ್ನು ಇದು ನೆನಪಿಸುತ್ತದೆ ಎಂದು ಶೀರ್ಷಿಕೆ ಹಾಕಿದ್ದರು.
ಬಿಗ್ ಬಾಸ್‌ನಲ್ಲಿ ಪ್ರೀತಿಸಿದ್ದ ಈ ಜೋಡಿ ಈಗ ಡಿವೋರ್ಸ್ ತಗೋಳ್ತಿದ್ಯಾ? ಮೌನ ಮುರಿದ
ರಶ್ಮಿಕಾ, ಸಿಕಂದರ್ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ. ಸಲ್ಮಾನ್ ಖಾನ್ ಜೊತೆ ಮೊದಲ ಬಾರಿ ನಟಿಸುತ್ತಿರುವ ರಶ್ಮಿಕಾ, ಸಿಕಂದರ್ ಲುಕ್ ನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಹಾಡು ಸೂಪರ್ ಹಿಟ್ ಆಗಿದ್ದು, ಈದ್ ದಿನ ಸಿನಿಮಾ ತೆರೆಗೆ ಬರ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಸಿಕಂದರ್ 165 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನು ರಶ್ಮಿಕಾ ಮಂದಣ್ಣ ಅಭಿನಯಿಸಿದ ಪುಷ್ಪಾ 2 ಹಾಗೂ ಛಾವಾ ಕೋಟ್ಯಾಂತರ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾ ಮೂಲಕ ಮನೆ ಮಾತಾಗಿರುವ ರಶ್ಮಿಕಾ ಕೈನಲ್ಲಿ ಮತ್ತೊಂದಿಷ್ಟು ಸಿನಿಮಾ ಇದೆ. ಸಿನಿಮಾ ಮಾತ್ರವಲ್ಲ ಕೆಲ ದಿನಗಳಿಂದ ರಶ್ಮಿಕಾ ಮಂದಣ್ಣ ಕನ್ನಡದ ವಿಷ್ಯಕ್ಕೆ ಚರ್ಚೆಯಲ್ಲಿದ್ದಾರೆ. ಶಾಸಕ ರವಿ ಗಣಗ, ರಶ್ಮಿಕಾ ವಿರುದ್ಧ ಗುಡುಗಿದ್ದರು. ಈಗ ರಶ್ಮಿಕಾ ಬದಲು ನಟಿ ರಮ್ಯಾ ಈ ಬಗ್ಗೆ ಮಾತನಾಡಿ, ರಶ್ಮಿಕಾ ಪರ ಬ್ಯಾಟ್ ಬೀಸಿದ್ದಾರೆ. ರಶ್ಮಿಕಾ ಬಗ್ಗೆ ಅನೇಕರು ಟ್ರೋಲ್ ಮಾಡ್ತಿದ್ದಾರೆ. ಇದೆಷ್ಟು ಸರಿ ಎಂದು ರಮ್ಯಾ ಪ್ರಶ್ನೆ ಮಾಡಿದ್ದಾರೆ.
