Asianet Suvarna News Asianet Suvarna News

Naga Chaitanya With New Girl: ಸಮಂತಾ ಬಿಟ್ಟ ಮೇಲೆ ಆಗಲೇ ಹುಡುಗಿ ಹುಡುಕಿ ಕೊಂಡ್ರಾ ನಾಗಚೈತನ್ಯ?

ಟಾಲಿವುಡ್‌ನ ಮೋಸ್ಟ್ ರೊಮ್ಯಾಂಟಿಕ್ ಜೋಡಿ ಎಂದೇ ಕರೆಸಿಕೊಂಡಿದ್ದ ಸಮಂತಾ ರುತ್ ಪ್ರಭು ಹಾಗೂ ನಾಗಚೈತನ್ಯ ದೂರಾಗಿ ಕೆಲವು ತಿಂಗಳುಗಳೇ ಕಳೆದಿವೆ. ಅಷ್ಟರಲ್ಲಿ ನಾಗಚೈತನ್ಯ ಹುಡುಗಿಯೊಬ್ಬಳ ಜೊತೆಗೆ ಕಾಣಿಸಿಕೊಂಡಿದ್ದಾರೆ. ಯಾರಾಕೆ?

 

Naga Chaitanya With new girl after divorce with Samantha
Author
Bengaluru, First Published Jan 9, 2022, 4:33 PM IST

ಕೆಲವು ವರ್ಷಗಳ ಕೆಳಗೆ ನಾಗಚೈತನ್ಯ (Naga Chaitanya) ಹಾಗೂ ಸಮಂತಾ (Samantha) ಅವರದು ಮೋಸ್ಟ್ ರೊಮ್ಯಾಂಟಿಕ್ (Romantic) ಕಪಲ್ ಅಂತ ಕರೆಸಿಕೊಂಡ ಜೋಡಿ. ಪ್ರೀತಿಸಿ ಮದುವೆಯಾದ ಈ ಕಪಲ್ ನಡುವಿನ ತುಂಟಾಟ, ಕಾಲೆಳೆಯುವ ಮಾತುಗಳು, ಮುದ್ದಾಟಗಳನ್ನೆಲ್ಲ ಅವರ ಫ್ಯಾನ್ಸ್ ಎನ್‌ಜಾಯ್ ಮಾಡುತ್ತಿದ್ದರು. ಆವಾಗಿನ ಅವರ ಲೈಫನ್ನ ಕಂಡವರ್ಯಾರೂ ಈ ಜೋಡಿ ಬೇರ್ಪಡಬಹುದು ಅಂತ ಊಹಿಸಲೂ ಸಾಧ್ಯವಿರಲಿಲ್ಲ. ಆದರೆ ಕಳೆದ ವರ್ಷ ಈ ಜೋಡಿ ಸಡನ್ನಾಗಿ ಬೇರ್ಪಟ್ಟಿತು. ಇದಕ್ಕೇನು ಕಾರಣ ಅನ್ನೋದನ್ನು ಈ ಇಬ್ಬರೂ ಬಾಯಿಬಿಟ್ಟು ಹೇಳದಿದ್ದರೂ ಆ ಕಾರಣ ಊಹಿಸದಷ್ಟು ದಡ್ಡರೇನಲ್ಲ ಅಭಿಮಾನಿಗಳು.

Had a memorable journey! ✈️ Felt humble to meet both Nagarjuna Sir and Naga Chaitanya Sir ! 🤗 @chay_akkineni@iamnagarjuna#nagsir #akkineninagarjuna #kingnagarjuna#nag #nagarjuna #nagarjunaakkineni #nagachaitanya #akkineni #akkineninagachaitanya #chay #nagachaithanya pic.twitter.com/AynGV1xGT6

ಶುರು ಶುರುವಿನಲ್ಲಿ ಇವರಿಬ್ಬರೂ ಬೇರ್ಪಡೋದಕ್ಕೆ ಸಮಂತಾನೇ ಕಾರಣ ಅಂತ ಈ ಜನಪ್ರಿಯ ನಟಿಯ ತೇಜೋವಧೆಯನ್ನೂ ಮಾಡಲಾಯ್ತು. ಆದರೆ ಸ್ವಲ್ಪ ದಿನದಲ್ಲೇ ಇದರಲ್ಲಿ ಸಮಂತಾಗಿಂತ ನಾಗಚೈತನ್ಯ ತಪ್ಪೇ ಹೆಚ್ಚಿದೆ ಅಂತ ಅನಿಸಿದ್ದೇ ಎಲ್ಲರೂ ಸೈಲೆಂಟಾದರು. ಇನ್ನೊಂದು ಕಡೆ ಸಮಂತಾ ಫ್ಯಾಮಿಲಿಮ್ಯಾನ್ (Family Man) 2ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರೋದೇ ಇವರಿಬ್ಬರ ನಡುವಿನ ಬೇರ್ಪಡುವಿಕೆಗೆ ಕಾರಣ ಅನ್ನೋದನ್ನು ನಾಗಚೈತನ್ಯ ಇನ್ ಡೈರೆಕ್ಟ್ ಆಗಿ ಹೇಳಿದ್ರು. ಇತ್ತ ಈ ಜೋಡಿ ಬೇರ್ಪಟ್ಟ ನಂತರ ನಾಚೈತನ್ಯ ಅವರ ಲವ್ ಸ್ಟೋರಿ ಸಿನಿಮಾ ಬಂತು. ಒಂದಿಷ್ಟು ಕೋಟಿ ಬಾಚಿಕೊಂಡು ಹಿಟ್ ಆಯ್ತು. ಇತ್ತ ಸಮಂತಾ ಕತೆ ಏನು, ಅವರು ಬರೀ ಮಾಡೆಲಿಂಗ್‌ಗೇ ಸೀಮಿತ ಆಗ್ಬಿಡ್ತಾರಾ ಅಂದುಕೊಳ್ಳುವ ಹೊತ್ತಿಗೆ ಪುಷ್ಪದ 'ಉ ಅಂಟಾವಾ..' ಹಾಡು ಸೂಪರ್ ಡೂಪರ್ ಹಿಟ್‌ ಆಯ್ತು. ಒಂದು ಹಾಡಿನ ಮೂಲಕವೇ ಸಮಂತಾ ಚಿಂದಿ ಉಡಾಯಿಸಿ ಬಿಟ್ಟರು. ತಮ್ಮ ಬಗ್ಗೆ ಕೆಟ್ಟದಾಗಿ ಮಾತಾಡಿದ ಪಡ್ಡೆಗಳಿಗೆ ಕ್ಲಾಸ್ ತಗೊಂಡ್ರು. ವಿಶ್ವದಲ್ಲೇ ನಂ.1 ಟ್ರೆಂಡಿಂಗ್ ಆಯ್ತು ಈ ಹಾಡು. 

Samantha About Pregnancy: ಕ್ಯೂಟ್, ಎಕ್ಸೈಟೆಡ್ ಎಂದ ಸಮಂತಾ

ಇಷ್ಟೆಲ್ಲ ಆಗುವಾಗ ನಾಗಚೈತನ್ಯ ಹಾಗೂ ಸಮಂತಾ ಪಬ್ಲಿಕ್‌ನಲ್ಲಿ ಪರಸ್ಪರ ಬೈದಾಡೋದಾಗಲೀ, ಕಚ್ಚಾಡೋಗಲೀ ಮಾಡಲಿಲ್ಲ. ಡಿವೋರ್ಸ್ (Divorce) ತನ್ನನ್ನು ಸೋಲಿಸಬಹುದು, ನನ್ನ ಧೈರ್ಯ ಉಡುಗಿ ಹೋಗಬಹುದು ಅಂದುಕೊಂಡಿದ್ದೆ. ಆದರೆ ನಾನಷ್ಟು ದುರ್ಬಲಳಲ್ಲ, ಬಹಳ ಸ್ಟ್ರಾಂಗ್ ಇದ್ದೀನಿ ಅಂತ ಇದ್ರಿಂದ ಗೊತ್ತಾಯ್ತು ಅನ್ನೋ ಮೂಲಕ ಈ ಬೇರ್ಪಡುವಿಕೆ ತನ್ನನ್ನು ಕುಗ್ಗಿಸಿಲ್ಲ ಅನ್ನೋ ಸಂದೇಶ ನೀಡಿದ್ರು ಸಮಂತಾ.

ಇದೆಲ್ಲ ಆಗುವಾಗ ನಾಗಚೈತನ್ಯ ಏನ್ ಮಾಡ್ತಿದ್ದಾರೆ ಅನ್ನೋ ಗುಸು ಗುಸು ಪಿಸ ಪಿಸ ಟಾಲಿವುಡ್‌ನಲ್ಲಿ (Tollywood) ಓಡಾಡ್ತಾನೇ ಇತ್ತು. ಈಗ ಅದಕ್ಕೆ ರೆಕ್ಕೆ ಪುಕ್ಕ ಬಂದಿದೆ. ಕಾರಣ ಸುಂದರಿಯೊಬ್ಬಳ ಜೊತೆಗೆ ನಾಗಚೈತನ್ಯ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗ್ತಿದೆ. ಅಷ್ಟಕ್ಕೂ ಆ ಸುಂದರಿ ಯಾರು, ನಾಗಚೈತನ್ಯ ಈಕೆ ಜೊತೆಗೆ ಡೇಟಿಂಗ್ ಮಾಡ್ತಿದ್ದಾರಾ ಅನ್ನೋ ಗುಮಾನಿ ಹಲವರದ್ದು. 

Sridevi Enjoys Icecream: ಶ್ರೀದೇವಿ ಐಸ್‌ಕ್ರೀಂ ಟೈಂ, ಹಳೆಯ ಫೋಟೋ ಹಂಚಿದ ಬೋನಿ

ಅಷ್ಟಕ್ಕೂ ಈ ಹುಡುಗಿ ಹೆಸರು ಲಹರಿ ಶೆರಿ. ತೆಲುಗು ಚಿತ್ರರಂಗದ ಮಂದಿಗೆ ಈಕೆ ಪರಿಚಿತಳು. ಈ ಹಿಂದೆ ಬಿಗ್‌ಬಾಸ್‌ನಲ್ಲಿ (Biggboss) ಕಾಣಿಸಿಕೊಂಡಿದ್ದರು. ಜೊತೆಗೆ ನಟನೆ, ನಿರೂಪಣೆಯಲ್ಲೂ ಈಕೆಯದು ಎತ್ತಿದ ಕೈ. ಈ ಹುಡುಗಿ ನಾಗ ಚೈತನ್ಯ ಜೊತೆಗೆ ಯಾಕೆ ಕಾಣಿಸಿಕೊಂಡಳು ಅನ್ನೋದಕ್ಕೂ ಉತ್ತರ ಇದೆ. ನಾಗ ಚೈತನ್ಯ ಹಾಗೂ ನಾಗಾರ್ಜುನ (Nagarjuna) ಜೊತೆಯಾಗಿ ಬಂಗಾರ್ರಾಜು ಅನ್ನೋ ಸಿನಿಮಾದಲ್ಲಿ ನಟಿಸುತ್ತಿರೋದು ಎಲ್ಲರಿಗೂ ಗೊತ್ತಿರೋದೇ. ಈ ಸಿನಿಮಾದ ಪ್ರಚಾರಕ್ಕಾಗಿ ತಂದೆ ಮಗ ಆಂಧ್ರದಾದ್ಯಂತ ಟ್ರಿಪ್ ಹೊಡೀತಿದ್ದಾರೆ. ಈ ಹುಡುಗಿಗೂ ಸ್ಟಾರ್‌ ನಟರ ಜೊತೆಗೆ ಓಡಾಡುವ ಕನಸು. ನಾಗ ಚೈತನ್ಯ, ನಾಗಾರ್ಜುನ ಅವ್ರನ್ನು ಕಂಡ್ರೆ ಅಭಿಮಾನ. ಆಕೆಯ ಕನಸನ್ನು ತಂದೆ ಮಗ ನಿಜ ಮಾಡಿದ್ದಾರೆ. ತಾವು ಪ್ರಚಾರಕ್ಕೆ ಹೊರಟಾಗ ಈ ಹುಡುಗಿಯನ್ನೂ ಖಾಸಗಿ ವಿಮಾನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಈ ಖುಷಿಯನ್ನು ಲಹರಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

Katrina Kaif Selfie: ಪತಿಯ ತೋಳಲ್ಲಿ ಕತ್ರೀನಾ ಹ್ಯಾಪಿ ಸೆಲ್ಫಿ..!

ಆಗಿರೋದು ಇಷ್ಟೇ. ಆದರೆ ನಾಗ ಚೈತನ್ಯ ಸದ್ಯಕ್ಕೆ ಸಿಂಗಲ್ ಆಗಿರೋ ಕಾರಣಕ್ಕೋ ಏನೋ, ಯಾವ ಹುಡುಗಿ ಜೊತೆಗೆ ಫೋಟೋ ತೆಗಿಸಿಕೊಂಡರೂ ಡೇಟಿಂಗ್ (Dating) ಮತ್ತೊಂದು ಅಂತೆಲ್ಲ ಗಾಸಿಪ್ (Gossip) ಹಬ್ಬಿಯೇ ಹಬ್ಬುತ್ತೆ. ನಾಗ ಚೈತನ್ಯ ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಂಡ ಹಾಗೆ ಕಾಣ್ತಿಲ್ಲ.

Follow Us:
Download App:
  • android
  • ios