Asianet Suvarna News Asianet Suvarna News

ಶೋಭಿತಾಗೂ ಕೈಕೊಟ್ರಾ ನಾಗಚೈತನ್ಯ? ಹೊಸಬಳ ಜೊತೆ ನಟನ ಮದ್ವೆ! ಯಾರೀ ಚೆಲುವೆ?

ಸಮಂತಾ ಜೊತೆ ಡಿವೋರ್ಸ್​ ಪಡೆದ ಬಳಿಕ ಶೋಭಿತಾ ಜೊತೆ ಡೇಟಿಂಗ್​ ಮಾಡ್ತಿರೋ ನಟ ನಾಗಚೈತನ್ಯ ಈಗ ಬೇರೆಯೊಬ್ಬಳನ್ನು ಮದ್ವೆಯಾಗುತ್ತಿದ್ದಾರೆ ಎನ್ನಲಾಗಿದೆ. 
 

Naga Chaitanya Will Nag Chaitanya get married to a businessmans daughter suc
Author
First Published Sep 15, 2023, 3:41 PM IST

ನಾಗಚೈತನ್ಯ ಮತ್ತು ಸಮಂತಾ (Samantha) ಹಿಂದೊಮ್ಮೆ ಸಿನಿಮಾದ ಸೂಪರ್​ ಕಪಲ್​ ಎನಿಸಿಕೊಂಡಿದ್ದರು.  ಯೇ ಮಾಯಾ ಚೇಸಾವೆ ಸಿನಿಮಾ ಮೂಲಕ ಆತ್ಮೀಯರಾದ ನಾಗ ಚೈತನ್ಯ ಹಾಗೂ ನಟಿ ಸಮಂತಾ, ಸ್ನೇಹವನ್ನು ಪ್ರೇಮವಾಗಿ ಬದಲಾಯಿಸಿ ನಂತರ ಅದ್ಧೂರಿಯಾಗಿ ಮದುವೆಯಾದವರು. ಇಬ್ಬರೂ ಕುಟುಂಬ ಸದಸ್ಯರ ಮನವೊಲಿಸಿ ಸಾಂಪ್ರದಾಯಿಕ ಹಿಂದೂ ಮತ್ತು ಕ್ರೈಸ್ತ ರೀತಿಯಲ್ಲಿ ವಿವಾಹವಾಗಿದ್ದರು.  ಮದುವೆಯ ಬಳಿಕ ಈ ಜೋಡಿ  ಸಂತೋಷದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುತ್ತಲೇ ಇದ್ದರು. ಆದರೆ ಅದೇನಾಯಿತೋ ಗೊತ್ತಿಲ್ಲ, ಸಾಮಾಜಿಕ ಜಾಲತಾಣದ (Social Media) ಮೂಲಕವೇ  ವಿಚ್ಛೇದನ ಘೋಷಿಸಿದ್ದರು.   ಮದುವೆಯಾಗಿ ನಾಲ್ಕೇ ವರ್ಷಕ್ಕೆ ದಾಂಪತ್ಯ ಜೀವನ ಕೊನೆಗೊಳಿಸಿದ್ದರು. ನಂತರ ಸಮಂತಾ ಅವರ ಹೆಸರು ವಿಜಯ್​ ದೇವರಕೊಂಡ ಅವರ ಜೊತೆ ಥಳಕು ಹಾಕಿಕೊಂಡಿದೆ. 

ಅದೇ ಇನ್ನೊಂದೆಡೆ, ಪೊನ್ನಿಯಿನ್ ಸೆಲ್ವನ್ 2 ಸಿನಿಮಾದ ಮೂಲಕ ಸದ್ದು ಮಾಡಿದ್ದ ನಟಿ ಶೋಭಿತಾ ಧೂಲಿಪಾಲ ಅವರ ಹೆಸರು ನಟ ನಾಗ ಚೈತನ್ಯ (Naga Chaitanya) ಜೊತೆಗೆ ಕೇಳಿಬರುತ್ತಿದೆ.  ಸಮಂತಾ ಜೊತೆಗಿನ ಬಾಂಧವ್ಯ ಕಡಿದುಕೊಂಡ ನಂತರ ನಾಗ ಚೈತನ್ಯ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದ್ದು, ಈ ವೇಳೆಯಲ್ಲಿ ಗೆಳೆತನಕ್ಕೆ ಸಿಕ್ಕವರೇ ಶೋಭಿತಾ ಎಂದು ಹೇಳಲಾಗುತ್ತಿದೆ.  ಶೋಭಿತಾ ಜೊತೆ ಪ್ರೀತಿಯಲ್ಲಿ ಬಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಿದೆ. ಇಬ್ಬರೂ ಆಗಾಗ ಪ್ರವಾಸ, ಔಟಿಂಗ್ ಅಂತ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಒಂದೆರಡು ಬಾರಿ ಕ್ಯಾಮರಾ ಕಣ್ಣಿಗೂ ಸೆರೆಯಾಗಿದ್ದರು. ಆದರೆ ಇದುವರೆಗೆ ಇವರು ತಮ್ಮ ಸಂಬಂಧದ ಕುರಿತು ಮಾತನಾಡಲಿಲ್ಲ. ಆದರೆ ಇವರಿಬ್ಬರು ಡೇಟಿಂಗ್​ ಮಾಡುತ್ತಿದ್ದಾರೆ ಎನ್ನುವ ವಿಷಯಕ್ಕೆ ಈಚೆಗಷ್ಟೇ ಪುಷ್ಟಿ ಸಿಕ್ಕಿತ್ತು.  ಶೋಭಿತಾ (Shobhita Dhulipala) ಅವರು ನಟ ಮ್ಯಾಥ್ಯೂ ಮೆಕನೌಘೆ ಅವರ ಪುಸ್ತಕದ ಚಿತ್ರವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.  ಕುತೂಹಲದ ಸಂಗತಿ ಎಂದರೆ ಇದೇ ಪುಸ್ತಕದ ಬಗ್ಗೆ ಕೆಲ ಸಮಯದ ಹಿಂದೆ ನಾಗ ಚೈತನ್ಯ ಮಾತನಾಡಿದ್ದರು.  ಜೀವನಕ್ಕೆ ಒಂದು ಪ್ರೇಮ ಪತ್ರ ಎಂದು ಈ ಪುಸ್ತಕದ ಕುರಿತು ಅವರು ಹೇಳಿದ್ದರು. ಒಂದೇ ಪುಸ್ತಕವನ್ನು ಇಬ್ಬರೂ ಓದಿ, ಅದರ ಬಗ್ಗೆ ಬರೆದಿರುವ ಕಾರಣದಿಂದ ಮತ್ತೆ ಡೇಟಿಂಗ್​ ರೂಮರ್​ ಮುನ್ನೆಲೆಗೆ ಬಂದಿತ್ತು. 

ಪುಸ್ತಕವೊಂದರಿಂದ ರಟ್ಟಾಯ್ತು ಶೋಭಿತಾ ಧೂಲಿಪಾಲ-ನಾಗಚೈತನ್ಯ ಸಂಬಂಧದ ಗುಟ್ಟು!

ಆದರೆ ಇದೀಗ ನಾಗಚೈತನ್ಯ ಕುರಿತು ಹೊಸದೇ ಒಂದು ವಿಷಯ ಚರ್ಚೆಗೆ ಗ್ರಾಸವಾಗಿದೆ. ಅದೇನೆಂದರೆ, ನಾಗಚೈತನ್ಯ ಅವರು ಶೋಭಿತಾ ಜೊತೆಗಲ್ಲ, ಬದಲಿಗೆ, ನಾಗಚೈತನ್ಯ ಅವರ ತಂದೆ ನಾಗಾರ್ಜುನ ಅವರು ಮಗನ ಮದುವೆಯನ್ನು ಉದ್ಯಮಿಯೊಬ್ಬರ ಮಗಳ ಜೊತೆ ಮಾಡಲಿದ್ದಾರೆ ಎನ್ನುವ ಸುದ್ದಿಯಿದೆ.  ಈ ಬಗ್ಗೆ ವಿವರಗಳು ಹೊರಕ್ಕೆ ಬರದಿದ್ದರೂ,  ನಾಗಾರ್ಜುನ ಈಗಾಗಲೇ ಹುಡುಗಿಯನ್ನು ನೋಡಿದ್ದಾರೆ ಎನ್ನಲಾಗಿದೆ.  ಹಾಗೆ ನೋಡಿದರೆ ಹುಡುಗಿಯ ಕುಟುಂಬಕ್ಕೂ ಚಿತ್ರರಂಗಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಸುದ್ದಿ ಮಾತ್ರ ಹರಿದಾಡುತ್ತಿದೆ. ಎರಡೂ ಕುಟುಂಬದಿಂದ ಇದುವರೆಗೆ ಪ್ರತಿಕ್ರಿಯೆ ಬರಲಿಲ್ಲ. ಇದು ನಿಜವೇ ಎನ್ನುವುದು ಮುಂದಿನ ಪ್ರಶ್ನೆ. 

ಇನ್ನು ಶೋಭಿತಾ ಅವರ ಕುರಿತು ಹೇಳುವುದಾದರೆ, ಮಿಸ್ ಇಂಡಿಯಾ ಅರ್ಥ್ (Miss India Earth) ಕಿರೀಟವನ್ನು ಅಲಂಕರಿಸಿದ್ದಾ ಶೋಭಿತಾ,  ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಹಲವು  ವೆಬ್ ಸರಣಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ನಟನೆಯ ಬಗ್ಗೆ  ಪ್ರಶಂಸೆಯ ವಿಮರ್ಶೆಗಳನ್ನು ಪಡೆಯುತ್ತಿದ್ದಾರೆ. ಮೇಡ್ ಇನ್ ಹೆವನ್ ಎಂಬ ವೆಬ್ ಸೀರೀಸ್‌ನಲ್ಲಿ  ಶೋಭಿತಾ ನಟಿಸಿದ್ದರು. ಇದು ಕೂಡ ಸಾಕಷ್ಟು ಒಳ್ಳೆಯ ವಿಮರ್ಶೆ ಪಡೆದುಕೊಂಡಿತ್ತು. ಇದಾದ ಬಳಿಕ ಈಚೆಗೆ ನಟಿ,  ದಿ ನೈಟ್ ಮ್ಯಾನೇಜರ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಆದಿತ್ಯ ರಾಯ್ ಕಪೂರ್ ಮತ್ತು ಅನಿಲ್ ಕಪೂರ್ ಕೂಡ ನಟಿಸಿದ್ದಾರೆ.

ಸಮಂತಾಳ 'ಖುಷಿ' ಚಿತ್ರಕ್ಕೆ ಪ್ರಚಾರ ಕೊಡಲು ಥೂ ಈ ಗಿಮಿಕ್ಕಾ ಎಂದು ನಾಗಚೈತನ್ಯ ಗರಂ!
 

Follow Us:
Download App:
  • android
  • ios