Asianet Suvarna News Asianet Suvarna News

ಬಿಡುಗಡೆಯಾದ ಮೂರೇ ದಿನಕ್ಕೆ 23 ಕೋಟಿ ಗಳಿಸಿದ ಸಾಯಿ-ಚೈತನ್ಯ 'ಲವ್ ಸ್ಟೋರಿ'!

'ಲವ್ ಸ್ಟೋರಿ' ಚಿತ್ರಕ್ಕೆ ಫಿದಾ ಆದ ನೆಟ್ಟಿಗರು. ಬಾಕ್ಸ್ ಆಫೀಸ್‌ ಗಳಿಕೆ ನೋಡಿ ಬಿಡುಗಡೆಗೆ ಪ್ಲಾನ್ ಮಾಡಿದ ನಿರ್ಮಾಪಕರು..

Naga Chaitanya Sai Pallavi box office collection vcs
Author
Bangalore, First Published Sep 28, 2021, 3:10 PM IST
  • Facebook
  • Twitter
  • Whatsapp

ನಾಗ ಚೈತನ್ಯ (Naga Chaitanya) ಹಾಗೂ ಸಾಯಿ ಪಲ್ಲವಿ (Sai Pallavi) ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಸಿಂಪಲ್ ಸಿನಿಮಾ 'ಲವ್‌ ಸ್ಟೋರಿ' (Love story) ಚಿತ್ರ ಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸೆಪ್ಟೆಂಬರ್ (September) 24ರಂದು ಬಿಡುಗಡೆಯಾದ ಈ ಸಿನಿಮಾ ಕೇವಲ ಮೂರು ದಿನಗಳಲ್ಲಿಯೇ ಬಾಕ್ಸ್‌ ಆಫೀಸ್‌ನಲ್ಲಿ (Box office collection) ಸದ್ದು ಮಾಡುವಷ್ಟು ಗಳಿಕೆ ಮಾಡಿದೆ. ಕೊರೋನಾ ಲಾಕ್‌ಡೌನ್‌ ನಂತರ ಕಲೆಕ್ಷನ್‌ ಗಗನ ಮುಟ್ಟಿಸುತ್ತಿರುವ ಸಿನಿಮಾ ಲವ್‌ ಸ್ಟೋರಿ. ಈ ಚಿತ್ರ ಪಡೆಯುತ್ತಿರುವ ಪ್ರಶಂಸೆ ಹಾಗೂ ಜನರನ್ನು ನೋಡಿ ಮುಂಬರುವ ದಿನಗಳಲ್ಲಿ ಯಾವ ಸಿನಿಮಾ ರಿಲೀಸ್ ಆಗಬೇಕು ಎಂದು ನಿರ್ಮಾಪಕರು ಆಗಲೇ ಪ್ಲಾನ್ ಶುರು ಮಾಡಿದ್ದಾರೆ.

ವಿದೇಶದಲ್ಲಿ ಆಗಲೇ 1 ಮಿಲಿಯನ್ ಡಾಲರ್ (1 Million Dollar) ದಾಖಲೆ ಮಾಡಿರುವ ಲವ್‌ ಸ್ಟೋರಿ ಸಿನಿಮಾ ಆಂಧ್ರ ಪ್ರದೇಶ (Andhrapradesh) ಮತ್ತು ತೆಲಂಗಾಣದಲ್ಲಿ 18 ಕೋಟಿ ರೂ. ಗಳಿಸಿದೆ. ಮೂರು ದಿನಗಳೂ ಚಿತ್ರ ಮಂದಿರಗಳು ಹೌಸ್‌ ಫುಲ್ ಆಗಿವೆ.  ಇನ್ನು ನೆಲ್ಲೂರು (Nellor), ಕೃಷ್ಣ (Krishna), ಗುಂಟೂರು (Gunturu) ಲೆಕ್ಕೆ ಸೇರಿಸಿಕೊಂಡರೆ 38 ಕೋಟಿ ರೂ. ಕಲೆಕ್ಷನ್ ಆಗಿದೆ ಎನ್ನಲಾಗಿದೆ.  24ರಂದು 16. 73 ಕೋಟಿ, 25ರಂದು 10.46 ಕೋಟಿ, 26ರಂದು 11.27 ಕೋಟಿ .  27 ಹಾಗೂ 28ರ ಕಲೆಕ್ಷನ್ ಮಾಹಿತಿ ಲಭ್ಯವಾದರೆ ನಿರ್ಮಾಪಕರು ಹಾಕಿದ ಬಂಡವಾಳ ಹಿಂಪಡೆದುಕೊಂಡಿರುತ್ತಾರೆ ಎನ್ನಬಹುದು. 

Naga Chaitanya Sai Pallavi box office collection vcs

ಆಂಧ್ರ ಮತ್ತು ತೆಲಂಗಾಣದಲ್ಲಿ 700 ಸ್ಕ್ರೀನ್‌ ಹಾಗೂ ವರ್ಲ್ಡ್‌ ವೈಡ್‌ನಲ್ಲಿ 1000ಕ್ಕೂ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಇನ್ನು ಪ್ರಿ-ರಿಲೀಸ್ ಕಾರ್ಯಕ್ರಮ ಹಾಗೂ ಬ್ಯುಸಿನೆಸ್‌ನಲ್ಲಿ ಚಿತ್ರತಂಡ 26 ಕೋಟಿ ಬಾಚಿಕೊಂಡಿದೆ. ಈ ಚಿತ್ರದ ಕಲೆಕ್ಷನ್ 54 ಕೋಟಿ ರೂ.  ಮುಟ್ಟಿದೆ ಅಂದ್ಮೇಲೆ ಸಿನಿಮಾ ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವಿಲ್ಲ. ಏಕೆಂದರೆ ಸ್ಯಾಟಿಲೈಟ್ (Satellite Rights) ಹಾಗೂ ಡಿಜಿಟಲ್ (Digital rights) ಮಾರಾಟದ ಮೊತ್ತ ಇನ್ನು ತಿಳಿದು ಬಂದಿಲ್ಲ. 

ಸಾಯಿ ಪಲ್ಲವಿ ಜೊತೆ ನಾಗಚೈತನ್ಯ ಗ್ರ್ಯಾಂಡ್ ಡಿನ್ನರ್: ಸಮಂತಾ ಮಿಸ್

ತೆಲಂಗಾಣ ಜನರ ಭಾಷೆ ಮಾತನಾಡಲು ಪ್ರಯತ್ನ ಪಟ್ಟಿರುವುದಕ್ಕೆ ನಾಗಚೈತನ್ಯ ಜನರ ಗಮನ ಸೆಳೆದಿದ್ದಾರೆ. ಸಾಮಾನ್ಯವಾಗಿ ನಾಗ ಚೈತನ್ಯ ಡ್ಯಾನ್ಸ್‌ಗೆ ಪ್ರಾಮುಖ್ಯತೆ ನೀಡುವುದಿಲ್ಲ. ಆದರೆ ಈ ಸಿನಿಮಾ ಮಾಡಿರುವುದೇ ಡ್ಯಾನ್ಸ್ ಬಗ್ಗೆ ಅಂದ್ಮೇಲೆ ಚೈತನ್ಯ ಶ್ರಮ ಒಪ್ಪಿಕೊಳ್ಳಲೇಬೇಕಿದೆ. ಕಥೆಯಲ್ಲಿ ಸಣ್ಣ ಪುಟ್ಟ ಡ್ರಾಗ್ (Drag) ಆಗಿದೆ. ಆದರೆ ಆ್ಯಕ್ಟಿಂಗ್ ಕೊಂಚ ಸುಧಾರಿಸಿದೆ.  ಚಿತ್ರಕಥೆ ಇಡೀ ಸ್ಪಾಟ್‌ಲೈಟ್‌ ಸಾಯಿ ಪಲ್ಲವಿ ಮೇಲಿದೆ. ಯಾವುದೇ ಪಾತ್ರ ಕೊಟ್ಟರೂ ಸೈ ಎನ್ನುವ ಪಲ್ಲವಿ, ತನ್ನ ನೆಚ್ಚಿನ ಡ್ಯಾನ್ಸ್ (Dance) ಅಂದ್ರೆ  ಸುಮ್ಮನೆಯೇ? ಚಿಂದಿ ಆಗಿ ಡ್ಯಾನ್ಸ್ ಮಾಡಿದ್ದಾರೆ. ಚಿತ್ರದ ಸಂಗೀತ ಹಾಗೂ ಬ್ಯಾಗ್ರೌಂಡ್ ಸ್ಕೂರ್ (Background Score) ಅದ್ಭುತವಾಗಿದೆ. ಸಣ್ಣ ಪುಟ್ಟ ಎಡಿಟಿಂಗ್ ತಪ್ಪುಗಳು ವೀಕ್ಷಕರಿಗೆ ತಿಳಿದುಬಿಡುತ್ತದೆ. 156 ಸಿನಿಮಿಷಗಳ ಸಿನಿಮಾ ಇದಾಗಿದ್ದು, ಫಸ್ಟ್ ಹಾಫ್‌ ಸ್ವಲ್ಪ ಹಾಗೂ ಸೆಕೆಂಡ್ ಹಾಫ್‌ ಕೆಲವೊಂದು ಸೀನ್ಸ್ ತುಂಬಾ ಎಳೆದಿದ್ದಾರೆ ಎಂದು ಸಿನಿ ರಸಿಕರು ವಿಮರ್ಶೆ ನೀಡಿದ್ದಾರೆ.

Follow Us:
Download App:
  • android
  • ios