Asianet Suvarna News Asianet Suvarna News

ಗರ್ಲ್‌ಫ್ರೆಂಡ್ ಜೊತೆ ಲಂಡನ್ ಹೋಟೆಲ್‌ನಲ್ಲಿ ತಗಲಾಕೊಂಡಿದ್ದ ನಾಗಚೈತನ್ಯ: ಫೋಟೋ ಡಿಲೀಟ್

ಗರ್ಲ್‌ಫ್ರೆಂಡ್ ಜೊತೆ ಲಂಡನ್ ಹೋಟೆಲ್‌ನಲ್ಲಿ ತಗಲಾಕೊಂಡಿದ್ದ ನಾಗಚೈತನ್ಯ ಫೋಟೋ ಈಗ ಡಿಲೀಟ್ ಆಗಿದೆ. 

Naga Chaitanya and Sobhita Dhulipala viral dinner date photo  deleted from chef instagram account sgk
Author
First Published Mar 29, 2023, 5:54 PM IST | Last Updated Mar 29, 2023, 5:54 PM IST

ಟಾಲಿವುಡ್ ಸ್ಟಾರ್ ನಾಗಚೈತನ್ಯ, ಸಮಂತಾ ಅವರಿಂದ ದೂರ ಆದ ಬಳಿಕ ಡೇಟಿಂಗ್ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಸಮಂತಾ ಅವರಿಂದ ವಿಚ್ಛೇದನ ಪಡೆದ ಬಳಿಕ ನಾಗ ಚೈತನ್ಯ ಮತ್ತೋರ್ವ ನಟಿ ಶೋಭಿತಾ ಜೊತೆ ಪ್ರೀತಿಯಲ್ಲಿ ಬಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಿದೆ. ಇಬ್ಬರೂ ಆಗಾಗ ಪ್ರವಾಸ, ಔಟಿಂಗ್ ಅಂತ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಒಂದೆರಡು ಬಾರಿ ಕ್ಯಾಮರಾ ಕಣ್ಣಿಗೂ ಸೆರೆಯಾಗಿದ್ದರು. ಆದರೀಗ ಇಬ್ಬರೂ ಲಂಡನ್ ಹೋಟೆಲ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. 

ಲಂಡನ್‌ನ ಹೋಟೆಲ್‌ನಲ್ಲಿ ಶೋಭಿತಾ ಜೊತೆ ಡಿನ್ನರ್‌ಗೆ ತೆರಳಿದ್ದ ನಾಗಚೈತನ್ಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಫೋಟೋ ನೋಡಿದ ನೆಟ್ಟಿಗರು ಇಬ್ಬರ ಡೇಟಿಂಗ್ ಸುದ್ದಿ ಕನ್ಫರ್ಮ್ ಎಂದು ಕಾಮೆಂಟ್ ಮಾಡಿದ್ದರು. ನಾಗಚೈತನ್ಯ ಮತ್ತು ಶೋಭಿತಾ ಇಬ್ಬರೂ ಲಂಡನ್‌ನಲ್ಲಿ ಡಿನ್ನರ್ ಎಂಜಾಯ್ ಮಾಡುತ್ತಿದ್ದ ಫೋಟೋ ಅದಾಗಿತ್ತು. ಅಷ್ಟಕ್ಕೂ ಇಬ್ಬರು ಸಿಕ್ಕಿಬಿದ್ದಿದ್ದು ಆ ಹೋಟೆಲ್‌ನ ಬಾಣಸಿಗ ಸುರೇಂದರ್ ಮೋಹನ್ ಶೇರ್ ಮಾಡಿದ ಫೋಟೋದಿಂದ. 

ಬಾಣಸಿಗ ಸುರೇಂದರ್ ಮೋಹನ್ ನಾಗಚೈತನ್ಯ ಜೊತೆ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಈ ಫೋಟೋದಲ್ಲಿ ಶೋಭಿತಾ ಕೂಡ ಸೆರೆಯಾಗಿದ್ದರು. ಫೋಟೋ ವೈರಲ್ ಆಗುತ್ತಿದ್ದಂತೆಬಾಣಸಿಗ ಸುರೇಂದರ್ ಮೋಹನ್ ಈಗ ಡಿಲೀಟ್ ಮಾಡಿದ್ದಾರೆ. ಸುರೇಂದರ್ ಮೋಹನ್  ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚೈ ಜೊತೆಗಿನ ಫೋಟೋ ಮಾಯವಾಗಿದೆ. ಇದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. 

ಶೋಭಿತಾ ಜೊತೆ ಲಂಡನ್ ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ನಟ ನಾಗಚೈತನ್ಯ; ಫೋಟೋ ವೈರಲ್

ಕಳೆದ ವರ್ಷ  ನವೆಂಬರ್ ನಲ್ಲಿಯೂ ನಾಗಚೈತನ್ಯ ಮತ್ತು ಶೋಭಿತಾ ಲಂಡಲ್‌ನಲ್ಲಿರುವ ಫೋಟೋ ವೈರಲ್ ಆಗಿತ್ತು. ಆ ಫೋಟೋಗಳು ಡೇಟಿಂಗ್ ವದಂತಿಗೆ ಪುಷ್ಠಿ ನೀಡಿತ್ತು. ಆದರೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇಬ್ಬರ ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ, ಇದು ಫೇಕ್ ಎನ್ನುವ ಮಾತು ಕೇಳಿ ಬಂದಿತ್ತು. ಆದರೀಗ ಇಬ್ಬರೂ ಲಂಡನ್ ಹೋಟೆಲ್‌ನಲ್ಲಿ ಸಿಕ್ಕಿಬಿದ್ದಿರುವುದು ಅಚ್ಚರಿ ಅಚ್ಚರಿ ಮೂಡಿಸಿತ್ತು.

ಈ  ಹಿಂದೆ ಸಂದರ್ಶನವೊಂದರಲ್ಲಿ ನಾಗ ಚೈತನ್ಯ ಡೇಟಿಂಗ್ ರೂಮರ್‌ಗೆ ಪ್ರತಿಕ್ರಿಯೆ ನೀಡಿದ್ದರು. ನಿರೂಪಕರು ಶೋಭಿತಾ ಬಗ್ಗೆ ಕೇಳಿದ ಪ್ರಶ್ನೆಗೆ ನಾಗಚೈತನ್ಯ ಜೋರಾಗಿ ನಗಲು ಪ್ರಾರಂಭಿಸಿದರು. 'ಇದಕ್ಕೆ ನನ್ನ ನಗುವೆ ಉತ್ತರ' ಎಂದು ಹೇಳಿದ್ದರು. ಶೋಭಿತಾ ಕೂಡ ಪರೋಕ್ಷವಾಗಿ ಡೇಟಿಂಗ್ ವದಂತಿಯನ್ನು ತಳ್ಳಿ ಹಾಕಿದ್ದರು. 

ಸಮಂತಾರಿಂದ ದೂರಾಗಿ 3 ವರ್ಷದ ಬಳಿಕ ಹೊಸ ಮನೆ ಖರೀದಿಸಿದ ನಟ ನಾಗ ಚೈತನ್ಯ

ನಾಗಚೈತನ್ಯ ಸಿನಿಮಾ 

ನಾಗಚೈತನ್ಯ ಸದ್ಯ ಕಸ್ಟಡಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೊನೆಯದಾಗಿ ನಾಗಚೈತನ್ಯ ಬಾಲಿವುಡ್‌ನ ಲಾಲ್ ಸಿಂಗ್ ಚಡ್ಡಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದು ನಾಗಚೈತನ್ಯ ನಟನೆಯ ಮೊದಲ ಹಿಂದಿ ಸಿನಿಮಾವಾಗಿತ್ತು. ಆಮೀರ್ ಖಾನ್ ಜೊತೆ ನಾಗಚೈತನ್ಯ ತೆರೆಹಂಚಿ ಕೊಂಡಿದ್ದರು. ಸದ್ಯ ಕಸ್ಟಡಿ ಮೂಲಕ ಪೊಲೀಸ್ ಆಧಿಕಾರಿಯಾಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ ನಾಗಚೈತನ್ಯ. 
 
 

Latest Videos
Follow Us:
Download App:
  • android
  • ios