ನಗ್ನವಾಗಿ ಫೋಟೋಗೆ ಪೋಸ್ ನೀಡಿದ ಬಳಿಕ ಸಂಕಷ್ಟಕ್ಕೀಡಾದ ಬಾಲಿವುಡ್ ನಟ ರಣವೀರ್ ಸಿಂಗ್, ಈಗ ತಾನು ಆ ರೀತಿ ಪೋಸ್ ಕೊಟ್ಟಿಲ್ಲ. ನನ್ನ ಫೋಟೋವನ್ನು ತಿರುಚಲಾಗಿದೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಮುಂಬೈ: ನಗ್ನವಾಗಿ ಫೋಟೋಗೆ ಪೋಸ್ ನೀಡಿದ ಬಳಿಕ ಸಂಕಷ್ಟಕ್ಕೀಡಾದ ಬಾಲಿವುಡ್ ನಟ ರಣವೀರ್ ಸಿಂಗ್, ಈಗ ತಾನು ಆ ರೀತಿ ಪೋಸ್ ಕೊಟ್ಟಿಲ್ಲ. ನನ್ನ ಫೋಟೋವನ್ನು ತಿರುಚಲಾಗಿದೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಬಾಲಿವುಡ್ ನಟಿ ದೀಪಿಕಾ ಗಂಡನೂ ಆಗಿರುವ ಈ 'ಬಾಜಿರಾವ್' ವಿರುದ್ಧ ಜುಲೈನಲ್ಲಿ ಕೇಸ್ ದಾಖಲಾಗಿತ್ತು. ಅಶ್ಲೀಲವಾಗಿ ಫೋಟೋಗೆ ಪೋಸ್ ನೀಡಲಾಗಿದೆ ಎಂದು ಕೇಸ್ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರ ವಿಚಾರಣೆ ವೇಳೆ ತಾನು ಈ ರೀತಿ ಪೋಸ್f ನೀಡಿಲ್ಲ ನನ್ನ ಫೋಟೋವನ್ನು ತಿರುಚಲಾಗಿದೆ ಎಂದು ನಟ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
70ರ ದಶಕದ ಪಾಪ್ ತಾರೆ ಬರ್ಟ್ ರೆನಾಲ್ಡ್ಸ್ (Burt Reynold) ಅವರ ಗೌರವಾರ್ಥ, ರಣವೀರ್ ಸಿಂಗ್ (Ranveer Singh), ನ್ಯೂಯಾರ್ಕ್ ಮೂಲದ ಪೇಪರ್ ಮ್ಯಾಗಜೀನ್‌ಗೆ (Paper magazine) ಬೆತ್ತಲೆ ಪೋಸ್ ನೀಡಿದ್ದರು. ಈ ಬೆತ್ತಲೆ ಫೋಟೋ ಇಂಟರ್‌ನೆಟ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ ವೈರಲ್ ಆಗಿದ್ದಲ್ಲದೇ ಅನೇಕರು ಈ ಫೋಟೋಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದರ ಜೊತೆಗೆ ನಟನ ವಿರುದ್ಧ ಕೇಸ್ ಕೂಡ ದಾಖಲಾಗಿತ್ತು.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿ ಹಾಗೂ ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪ ಹಾಗೂ ಅಶ್ಲೀಲತೆಯ ಪ್ರದರ್ಶನದ ಆರೋಪದಡಿ ಮಹಾರಾಷ್ಟ್ರದ ಚೆಂಬೂರ್ ಪೊಲೀಸ್ ಠಾಣೆಯಲ್ಲಿ (Chembur police station) ನಟನ ವಿರುದ್ಧ ಕೇಸ್ ದಾಖಲಾಗಿತ್ತು. ಜುಲೈನಲ್ಲಿ ಈ ಕೇಸ್ ದಾಖಲಾಗಿದ್ದು, ಆಗಸ್ಟ್ 29ರಂದು ನಡೆದ ವಿಚಾರಣೆ ವೇಳೆ ಪೊಲೀಸರಿಗೆ ನಟ ತಾನು ಈ ರೀತಿ ಬೆತ್ತಲಾಗಿ ಪೋಸ್ ಕೊಟ್ಟಿಲ್ಲ. ನನ್ನ ಫೋಟೋವನ್ನು(photo) ತಿರುಚಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸರ್ಕಾರೇತರ ಸೇವಾ ಸಂಸ್ಥೆಯ ಪದಾಧಿಕಾರಿಯೊಬ್ಬರು ರಣ್ವೀರ್ ವಿರುದ್ಧ ದೂರು ದಾಖಲಿಸಿದ್ದರು. ಅಶ್ಲೀಲವಾದ ಫೋಟೋಗಳ ಮೂಲಕ ರಣ್ವೀರ್, ಮಹಿಳೆಯರ ಘನತೆಗೆ (modesty) ಹಾಗೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರಲಾಗಿತ್ತು. ಈ ಪ್ರಕರಣದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನಟನಿಗೆ ಮುಂಬೈ ಪೊಲೀಸರು ನೊಟೀಸ್ ಜಾರಿಗೊಳಿಸಿದ್ದರು. ಅದರಂತೆ ಆಗಸ್ಟ್ 29ರಂದು ನಟ ಪೊಲೀಸರೆದುರು ಹಾಜರಾಗಿ ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆಗೆ ಒಳಗಾದರು ಎಂದು ತಿಳಿದು ಬಂದಿದೆ.
ನಟ ಅಥವಾ ನಟಿ ಬೆತ್ತಲಾಗೋದು ಬಾಲಿವುಡ್‌ಗೆ ಹೊಸ ವಿಷಯವೇನಲ್ಲ. ನಗ್ನತೆಯನ್ನೂ ಸುಂದರವಾಗಿ ತೋರಿಸಿ, ಅಲ್ಲಿಯೂ ಸೃಜನಶೀಲತೆ ಎಷ್ಟಿದೆ ಎಂಬುದನ್ನು ತೋರಿಸುತ್ತಾರೆ. ಕನ್ನಡದ ಚಿತ್ರ ದಂಡುಪಾಳ್ಯದಲ್ಲಿ ಪೂಜಾ ಗಾಂಧಿ ಬೆತ್ತಲಾಗಿದ್ದು ಗೊತ್ತು. ಅಷ್ಟೇ ಅಲ್ಲ ಇತ್ತೀಚಿನ ಚಿತ್ರ 'ಲೈಗರ್'ಗಾಗಿ ವಿಜಯ್ ದೇವರಕೊಂಡ ಕೂಡ ಬೆತ್ತಲಾಗಿದ್ದರು. ಅಷ್ಟೇ ಅಲ್ಲದೇ ಅನೇಕ ನಟ, ನಟಿಯರು ಚಿತ್ರಕ್ಕಾಗಿಯೋ, ಮ್ಯಾಗಜೀನ್ ಪೋಸ್ಟ್‌ಗಾಗಿಯೋ, ಮತ್ಯಾವುದೋ ಒಂದು ಕಾರಣಕ್ಕೆ ನಟಿ ಕಲ್ಕಿ ಕೊಚಿನ್ (Kalkhi kochin) ಸೇರಿ ಅನೇಕರು ನಗ್ನರಾಗಿ ಫೋಸ್ ಕೊಟ್ಟಿದ್ದಾರೆ. ಅಂಥವರಲ್ಲಿ ಕೆಲವರು ಇವರು.
ರಣ್‌ವೀರ್ ನಟರಾಜ್ ಸ್ಟೈಲ್‌ಗೆ ಸ್ವತಃ ಕಪಿಲ್ ದೇವ್ ಬೋಲ್ಡ್..!
ನಟಿ ರಾಧಿಕಾ ಆಪ್ಟೆ (Radhika Apte), 2016ರಲ್ಲಿ 'ನಂದ ಮ್ಯಾಡ್ಲಿ' ಎಂಬ ಚಿತ್ರಕ್ಕಾಗಿ ಬೆತ್ತಲಾಗಿದ್ದರು. ಒಂದು ದೃಶ್ಯದಲ್ಲಂತೂ ಈ ರಾಧಿಕಾ ತಮ್ಮ ಸೊಂಟದ ಕೆಳ ಭಾಗವನ್ನು ನಗ್ನರಾಗಿ ಸಹಕಲಾವಿದನಿಗೆ ತೋರಿಸುವ ದೃಶ್ಯ ಫುಲ್ ಸದ್ದು ಮಾಡಿತ್ತು. ನಂತರ ಪಾರ್ಚ್‌ಡ್ ಸಿನಿಮಾದಲ್ಲೂ ಆಪ್ಟೆ ನೂಡ್ ಆಗಿ ಕಾಣಿಸಿಕೊಂಡಿದ್ದಾಳೆ. ಬೆತ್ತಲಾಗುವ ಟ್ರೆಂಡ್ ಕ್ರಿಯೇಟ್ ಮಾಡಿದ ರಾಧಿಕಾ ಒಳ್ಳೆಯ ನಟಿಯೂ ಹೌದು. ಇದರಿಂದಾನೇ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದರು.
ಇನ್ನು ಪಿಕೆ ಚಿತ್ರಕ್ಕಾಗಿ ಆಮೀರ್ ಖಾನ್ (Amir khan)ಬೆತ್ತಲಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಆ ಜಾಗಕ್ಕೆ ರೇಡಿಯೋ ಇಟ್ಕೊಂಡು ಮಾನ ಮುಚ್ಚಿಕೊಂಡರೂ, ಬಾಲಿವುಡ್ ಪರ್ಫೆಕ್ಷನಿಸ್ಟ್‌ನ ಈ ಫೋಸ್‌ಗೆ ಸಿಕ್ಕಾಪಟ್ಟೆ ಟೀಕೆಗಳು ವ್ಯಕ್ತವಾಗಿದ್ದವು. ಅನ್ಯಗ್ರಹ ಜೀವಿಯಾಗಿ ಹುಟ್ಟು ಬಟ್ಟೆಯಲ್ಲಿ ಭೂಮಿಗೆ ಬಂದು ಬೀಳುವ ಪಾತ್ರ ಅವರದ್ದು. ಈ ಚಿತ್ರದ ಮೊದಲ ದೃಶ್ಯದಲ್ಲಿಯೇ ಬಟ್ಟೆ ಇಲ್ಲದೇ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. ಈ ದೃಶ್ಯ ಈ ಫಿಲಂಗೆ ಅತ್ಯಗತ್ಯವೂ ಆಗಿತ್ತು ಬಿಡಿ.
