Asianet Suvarna News Asianet Suvarna News

ಚಿರಂಜೀವಿ ಬಗ್ಗೆ ರಾಮ್‌ ಚರಣ್ ಹೀಗ್ಯಾಕೆ ಹೇಳಿದ್ರು! ಅಪ್ಪ-ಮಗನ ನಡುವೆ ಸಂಬಂಧ ಹೀಗೂ ಇರಬಹುದಾ?

RRR ಖ್ಯಾತಿಯ ನಟ ರಾಮ್‌ ಚರಣ್, ತಮ್ಮ ತಂದೆ ಚಿರಂಜೀವಿ ಎಂತ ವ್ಯಕ್ತಿ ಎನ್ನುವ ಬಗ್ಗೆ ಮಾತನಾಡಿದ್ದಾರೆ. 'ನನ್ನ ಅಪ್ಪ ಯಾವತ್ತೂ ನನಗೆ ಸಿನಿಮಾ ನಟನೆ ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎಂದು ಹೇಳಿಯೇ ಇಲ್ಲ...

My father Never told me how to act and how to select movie says ram charan
Author
First Published Feb 12, 2024, 6:13 PM IST

ಚಿರಂಜೀವಿ ಮಗ ರಾಮ್‌ ಚರಣ್ ಅಪ್ಪನ ಬಗ್ಗೆ ಹೇಳಿರುವ ಮಾತು ಖಂಡಿತವಾಗಿಯೂ ಹಲವರು ಯೋಚನೆಗೆ ಬೀಳುವಂತೆ ಮಾಡುತ್ತದೆ. ಅಪ್ಪ ತೆಲುಗು ಇಂಡಸ್ಟ್ರಿಯ ಬಹುದೊಡ್ಡ ಸ್ಟಾರ್ ನಟ. ಮೆಗಾ ಸ್ಟಾರ್ ಖ್ಯಾತಿಯ ನಟ ಚಿರಂಜೀವಿ (Chiranjeevi)ಮಗ ರಾಮ್‌ ಚರಣ್ (Ram Charan)ಎಂಬುದು ಹಲವರಿಗೆ ಗೊತ್ತಿದೆ. ಗೊತ್ತಿಲ್ಲದಿದ್ದರೆ ನೋಡಿ, 'ಮಗಧೀರ' ಹೀರೋ ರಾಮ್‌ ಚರಣ್ ಚಿರಂಜೀವಿ ಮಗ, ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾ RRR ಬಳಿಕವಂತೂ ಅವರು ಭಾರತವನ್ನೂ ಮೀರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿದ್ದಾರೆ. 

ಅಂಥ ಅಪ್ಪನ ಇಂಥ ಮಗ ರಾಮ್‌ ಚರಣ್, ತಮ್ಮ ತಂದೆ ಚಿರಂಜೀವಿ ಎಂತ ವ್ಯಕ್ತಿ ಎನ್ನುವ ಬಗ್ಗೆ ಮಾತನಾಡಿದ್ದಾರೆ. 'ನನ್ನ ಅಪ್ಪ ಯಾವತ್ತೂ ನನಗೆ ಸಿನಿಮಾ ನಟನೆ ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎಂದು ಹೇಳಿಯೇ ಇಲ್ಲ. ಅಥವಾ ಸಿನಿಮಾ ಶೂಟಿಂಗ್ ಬಗ್ಗೆಯಾಗಲೀ ಆಯ್ಕೆಯ ಬಗ್ಗೆಯಾಗಲೀ ಎಂದೂ ಕೇಳಿಲ್ಲ. ಲೈಫ್ ವಿಷಯದಲ್ಲೂ ಅಷ್ಟೇ, ಹಾಗೆ ಮಾಡಬೇಡ, ಹೀಗೆ ಮಾಡಬೇಡ ಎಂದು ಯಾವತ್ತೂ ಹೇಳಿಲ್ಲ. ಆದರೆ, ನಿದ್ದೆ ಸರಿಯಾಗಿ ಮಾಡ್ತಾ ಇದೀಯ, ಊಟ-ತಿಂಡಿ ಸರಿಯಾಗಿ ಮಾಡ್ತಾ ಇದೀಯ, ಶೂಟಿಂಗ್‌ ಸ್ಪಾಟ್‌ಗೆ ಶಾರ್ಪ್ 7.00 ಗಂಟೆಗೆ ಹೋಗ್ತಾ ಇದೀಯ..? ಎಂದು ಕೇಳಿ ತಿಳಿದುಕೊಳ್ಳುತ್ತಾರೆ ಅಷ್ಟೇ' ಎಂದಿದ್ದಾರೆ ನಟ ರಾಮ್ ಚರಣ್. 

ಬಾಲ್ಯದಿಂದಲೂ ನಾನು ಬೇರೆಯದೇ ರೀತಿಯ ವ್ಯಕ್ತಿ; ಸಾಯಿ ಪಲ್ಲವಿ ಮಾತಿನ ಮರ್ಮ ಏನಿರಬಹುದು..!?

ಮಗನನ್ನು ನಟನಾಗಿ ನೋಡದೇ ಕೇವಲ ಮಗ ಎಂಬಂತೆ ನೋಡಿದಾಗ ಮಾತ್ರ ಇಂಥ ನಿರ್ಧಾರಗಳು ಬರಲು ಸಾಧ್ಯ. ನನ್ನ ಮಗ ನನ್ನಂತೆ ಆಗಬೇಕು ಎಂದು ಚಿರಂಜೀವಿ ಯೋಚಿಸಿದ್ದರೆ ಖಂಡಿತವಾಗಿಯೂ ಅವರು ಹಾಗೆ ಮಾಡು ಹೀಗೆ ಮಾಡಬೇಡ ಎಂದು ಉಪದೇಶ ಮಾಡಿರುತ್ತಿದ್ದರು. ಆದರೆ, ಸ್ಟಾರ್ ನಟ ಚಿರಂಜೀವಿಗೆ ರಾಮ್‌ ಚರಣ್ ನನ್ನ ಮಗ, ನಾನಲ್ಲ ಎಂಬ ಅರಿವಿದೆ ಎನ್ನಬಹುದು. ಅದಕ್ಕೇ ಅವರು ಯಾವತ್ತೂ ಮಗ ರಾಮ್‌ ಚರಣ್ ಅವರಿಗೆ 'ಜಂಝೀರ್' ಸಿನಿಮಾ ಮಾಡಿ ಸೋತಾಗ ಕೂಡ ಎನೂ ಹೇಳಲಿಲ್ಲವಂತೆ. 

ಅಯ್ಯೋ, ನಟ ನಾನಿಗೆ ಹುಚ್ಚ ಅಂದಿದ್ಯಾಕೆ; ಪವರ್ ಕಟ್ ಆದ್ರೆ ಹಾಗೆಲ್ಲಾ ಮಾಡ್ತಿದ್ರಾ 'ಈಗ' ನಟ!

ಮಗನ ಮೇಲೆ ಒಬ್ಬ ತಂದೆಗೆ ಇರಬಹುದಾದ ಸಹಜ ಮಮತೆ-ವಾತ್ಸಲ್ಯ ಸ್ಟಾರ್ ನಟರಾದ ಚಿರಂಜೀವಿಗೂ ಇದೆ. ಈ ಕಾರಣಕ್ಕೆ ಅವರು ' ಊಟ ಮಾಡಿದ್ಯಾ, ನಿದ್ದೆ ಮಾಡಿದ್ಯಾ, ಟೈಮ್ ಮೆಂಟೇನ್ ಮಾಡ್ತಾ ಇದೀಯ' ಎಂದಷ್ಟೇ ಕೇಳುತ್ತಿದ್ದರು. ಈ ಬಗ್ಗೆ ಕ್ಲಾರಿಟಿ ಕೊಟ್ಟಿರುವ ರಾಮ್ ಚರಣ್ 'ಲೆಗ್ಗಸಿ (Legacy)ಅಂದ್ರೆ ನನ್ನ ಪ್ರಕಾರ ಅದೇ ಆಗಿದೆ, ಕೆಲಸ ಏನೇ ಮಾಡಲಿ, ನಮ್ಮ ಜೀವನದಲ್ಲಿ ಶಿಸ್ತು ಹಾಗೂ ಜೀವನದ ಮೂಲಭೂತ ಅಗತ್ಯಗಳ ಬಗ್ಗೆ ಗಮನ ಕೋಡುವುದು' ಎಂದಿದ್ದಾರೆ.  ರಾಮ್ ಚರಣ್ ಪ್ರಕಾರ ಈ ಮೂಲಕ 'ನನ್ನ ಅಪ್ಪ ಚಿರಂಜೀವಿ ನನಗೆ ಶ್ರೇಷ್ಠ ಪರಂಪರೆಯನ್ನು ಬಳುವಳಿಯಾಗಿ ನೀಡಿದ್ದಾರೆ' ಎಂದಿದ್ದಾರೆ ಎನ್ನಬಹುದು.

'ರಂಗನಾಯಕ'ನ ಕಾಂಟ್ರೋವರ್ಸಿ ಶುರು; ಗಾಳಿ ತಂಗಾಳಿ ಅಂತ 'ಬಿರುಗಾಳಿ' ಎಬ್ಬಿಸಲು ಹೊರಟ್ರಾ ಗುರೂ..!?

Follow Us:
Download App:
  • android
  • ios