ಎಸ್‌ಪಿ ಬಾಲಸುಬ್ರಹ್ಮಣ್ಯಂಗೆ ಅವರದೇ ಹಾಡುಗಳ ಮ್ಯೂಸಿಕ್ ಥೆರಪಿ!
ನಮ್ಮ ಬಾಲು ಸರ್, ಗಾನಗಂಧರ್ವ ಎಸ್‌ಪಿ ಬಾಲಸುಬ್ರಮಣ್ಯಂ ಅವರು ಕೋವಿಡ್‌ನಿಂಧ ಚೇತರಿಸಿಕೊಳ್ತಿರೋದು, ತಮ್ಮದೇ ಹಾಡುಗಳನ್ನು ಕೇಳುವ ಮೂಲಕ.
ಪಂಚಭಾಷಾ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಕೋವಿಡ್ ಸೋಂಕಿನಿಂದ ಆಗಸ್ಟ್ ೧೩ರಂದು ಆಸ್ಪತ್ರೆಗೆ ಸೇರಿದ್ದರು. ಕೋವಿಡ್ ಪಾಸಿಟಿವ್ ಅಂತ ಗೊತ್ತಾದ ಕೂಡಲೇ, ಸ್ಥೂಲಕಾಯ ಹಾಗೂ ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಎಸ್‌ಪಿಬಿ, ಇನ್ನೇನೋ ಕಾಂಪ್ಲಿಕೇಶನ್ ಆಗುವುದು ಬೇಡ ಅಂತ ಕೂಡಲೇ ಆಸ್ಪತ್ರೆ ಸೇರಿಕೊಂಡರು. ಅಲ್ಲಿ ಅವರ ಆರೋಗ್ಯ ತುಸು ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಐಸಿಯುಗೆ ಶಿಫ್ಟ್ ಮಾಡಿ ಲೈಫ್ ಸಪೋರ್ಟ್‌ನಲ್ಲಿ ಇಡಲಾಯಿತು. ನಂತರ ಅವರ ಆರೋಗ್ಯ ಸ್ಥಿರವಾಗಿದೆ.
"
ಈಗ ಅವರಿಗೆ ಮ್ಯೂಸಿಕ್ ಥೆರಪಿ ಕೊಡಲಾಗ್ತಾ ಇದೆ ಅಂತ ಅವರ ಮಗ ತಿಳಿಸಿದ್ದಾರೆ. ಮ್ಯೂಸಿಕ್ ಥೆರಪಿಯ ತಿರುಳು ಏನೆಂದರೆ ಕೆಲವು ಶಮನಕಾರಿ ಗುಣಗಳುಳ್ಳ ಹಾಡುಗಳನ್ನು ಕೇಳಿಸುವುದು. ಸದ್ಯಕ್ಕೆ ಬಾಲು ಸರ್‌ಗೆ ಅವರದೇ ಹಾಡುಗಳನ್ನು ಕೇಳಿಸಲಾಗ್ತಾ ಇದೆಯಂತೆ. ಅದರಲ್ಲಿ ಚಿಯರ್ ಅಪ್ ಮಾಡುವಂಥ, ರೊಮ್ಯಾಂಟಿಕ್ ಆದ, ಸ್ನೇಹಭಾವದ, ಹೀಗೆ ಎಲ್ಲ ಬಗೆಯ ಹಾಡುಗಳು ಇವೆ. ಅದರಲ್ಲೂ ಎಪ್ಪತ್ತು ಎಂಬತ್ತರ ದಶಕದಲ್ಲಿ ತಮ್ಮ ವೃತ್ತಿ ಜೀವನದ ಪೀಕ್‌ನಲ್ಲಿದ್ದಾಗ ಎಸ್‌ಪಿಬಿ ಹಾಡಿದ, ಅವರ ಚೈತನ್ಯದ ಉತ್ತುಂಗ ಕಾಲದ ಹಾಡುಗಳನ್ನು ಕೇಳಿಸಲಾಗ್ತಾ ಇದೆ. ಈ ಹಾಡುಗಳಿಗೆ ಅವರು ತುಂಬಾ ಸಕಾರಾತ್ಮಕವಾಗಿ ಸ್ಪಂದಿಸುತ್ತಾ ಇದ್ದಾರಂತೆ. ಆಹಾರ ಸೇವಿಸುತ್ತಿದ್ದಾರೆ. ಹತ್ತಿರ ಬಂದವರನ್ನು ಗುರುತು ಹಿಡಿಯುತ್ತಿದ್ದಾರೆ.
ಮ್ಯೂಸಿಕ್ ಥೆರಪಿ ಎಂಬುದಕ್ಕೆ ವೈಜ್ಞಾನಿಕ ಹಿನ್ನೆಲೆಯೂ ಇದೆ. ಅದನ್ನು ವೈಜ್ಞಾನಿಕವಾಗಿ ವರ್ಗೀಕರಿಸಿ, ಅದಕ್ಕೆ ತಕ್ಕಂತೆ ಚಿಕಿತ್ಸೆ ಕೊಡುವವರೂ ಇದ್ದಾರೆ. ಸಾಮಾನ್ಯವಾಗಿ ನಾವು ಕೇಳುವ ಸಂಗೀತವೆಲ್ಲವೂ ಮ್ಯೂಸಿಕ್ ಥೆರಪಿಯಲ್ಲ. ರೋಗಿಯ ಸ್ಥಿತಿಗತಿ, ಆತ ಎಂಥ ಸಂಗೀತಕ್ಕೆ ಸ್ಪಂದಿಸುತ್ತಾನೆ- ಇದನ್ನು ತಿಳಿದುಕೊಂಡು, ಶಮನಕಾರಿ ಗುಣ ಹೊಂದಿರುವ ಸಂಗೀತವನ್ನು ಮೆಲೊಡಿಯಾಗಿ ಕೇಳಿಸಬೇಕು. ಶಬ್ದ ಪ್ರಮಾಣ ಹೆಚ್ಚೂ ಇರಬಾರದು, ಕಡಿಮೆಯೂ ಇರಬಾರದು. ಅಪರಿಚಿತ ಸಂಗೀತವಾದರೂ, ಅರ್ಥವಾಗದೆ ಹೋದರೂ ಅದರಿಂದ ಪ್ರಯೋಜನವಿಲ್ಲ. ಪದಗಳು ಇರಬೇಕು, ಆದರೆ ಅವುಗಳೇ ಹೆಚ್ಚು ಇರಬಾರದು. ನಾದವೇ ಪ್ರಧಾನವಾಗಿ ಇರಬೇಕು. ಇವೆಲ್ಲ ಮ್ಯೂಸಿಕ್ ಥೆರಪಿಯ ಅಂಶಗಳು.
ದಿಢೀರ್ ಸರ್ಜರಿ ಮಾಡಿಸಿಕೊಂಡ ಖುಷ್ಬೂ ನೀಡಿದ ಸಂದೇಶ
ಹೀಗಿರುವ ಮ್ಯೂಸಿಕ್ ಥೆರಪಿ ಅನೇಕ ಬಗೆಯ ರೋಗಿಗಳಲ್ಲಿ ಉಪಶಮನಕಾರಕ ಎನ್ನುವುದು ರುಜುವಾತಾಗಿದೆ, ಮುಖ್ಯವಾಗಿ, ಸಂಗೀತವು ಚಲನೆಗೆ ಪೂರಕ. ಪಕ್ಷವಾತ ಆದ ರೋಗಿಗಳಲ್ಲಿ, ಕೈಕಾಲುಗಳ ಚಲನೆಗೆ ಸಂಗೀತ ಸಹಕಾರ ನೀಡಿದೆ. ಮಲಗಿದಲ್ಲೇ ಇದ್ದ ಪಾರ್ಶ್ವವಾಯು ಪೀಡಿತರು ಸಂಗೀತ ಕೇಳ್ತಾ ಕೇಳ್ತಾ ಎದ್ದು ಓಡಾಡಲು ಶುರು ಮಾಡಿದ್ದುಂಟು. ಹಾಗೇ ಮಾನಸಿಕ ಸಮಸ್ಯೆ ಹೊಂದಿರುವವರಿಗೆ ಸರಿಯಾದ ಸಂಗೀತ ಕೇಳಿಸಿದರೆ ಅದು ರಾಮಬಾಣವೇ ಸರಿ. ಮಾನಸಿಕ ಹಿಂಸೆ ಹೆಚ್ಚಾಗಿ ಏಕಾಂತದಲ್ಲಿ ಬಳಲುವ, ಡಿಪ್ರೆಶನ್‌ಗೆ ಹೋಗುವವರಿಗಂತೂ ಈ ಮ್ಯೂಸಿಕ್ ಥೆರಪಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಡಿಮೆನ್ಷಿಯಾ, ಸ್ಕಿಜೋಫ್ರೇನಿಯಾ, ಅಲ್ಝೀಮರ್ಸ್ ಮುಂತಾದ ರೋಗ ಹೊಂದಿರುವವರಲ್ಲೂ ಈ ಥೆರಪಿ ಕೆಲಸ ಮಾಡುತ್ತದೆ ಎಂಬುದು ಗೊತ್ತಾಗಿದೆ.
SPB ಆರೋಗ್ಯ; ಪುತ್ರ ಚರಣ್ ನೀಡಿದ ಮಹತ್ವದ ಮಾಹಿತಿ
ಮುಖ್ಯವಾಗಿ, ಮಕ್ಕಳಿಗೆ ದಿನಕ್ಕೆ ಕನಿಷ್ಠ ಅರ್ಧ ಗಂಟೆ ಮ್ಯೂಸಿಕ್ ಕೇಳಿಸುವುದು ಅತ್ಯುತ್ತಮ ಹವ್ಯಾಸ, ಇದರಿಂದ ಅವರ ಮೆದುಳಿನ ಬೆಳವಣಿಗೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತದೆ. ಗಣೀತದ ಸಮಸ್ಯೆಗಳನ್ನು ಬಿಡಿಸುವ ಮಕ್ಕಳ ಸಾಮರ್ಥ್ಯಕ್ಕೂ, ಸಂಗೀತವನ್ನು ಕೇಳುವ ಹವ್ಯಾಸಕ್ಕೂ ಹತ್ತಿರದ ಸಂಬಂಧವಿದೆ ಎಂಬುದು ತಜ್ಞರ ಅಭಿಪ್ರಾಯ. ಸಂಗೀತ ಆಲಿಸುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ, ಕಲಿಕೆಯಲ್ಲಿ ಮಕ್ಕಳು ಚುರುಕಾಗುತ್ತಾರೆ.
ಅದೇನೇ ಇರಲಿ, ಎಸ್‌ಪಿಬಿ ಮಾತ್ರ ಆರೋಗ್ಯವಾಗಿ ಹಿಂದಿರುಗಿ ಬರಲಿ. ಅವರು ಹಾಡಬೇಕಾದ ಹಾಡುಗಳು ಇನ್ನೂ ಸಾವಿರಾರು ಇವೆ.
ಈ ಕಾರಣಕ್ಕೆ ಎಸ್‌ಪಿಬಿ- ರವಿಮಾಮ ಕಾಂಬಿನೇಶನ್ ಅಂದಿಗೂ- ಇಂದಿಗೂ ಎಂದೆಂದಿಗೂ ಹಿಟ್...
ವಿಶ್ವ ಛಾಯಾಗ್ರಹಣ ದಿನ: ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾದ ರಾಜು ಡವಳಗಿ ತೆಗೆದ ವಿಡಿಯೋ
"