ಕಿರುತೆರೆ ನಟ ಸಾವು: ಗರ್ಲ್‌ಫ್ರೆಂಡ್ ಮತ್ತು ಆಕೆಯ ತಂಗಿಯಿಂದಲೇ ನಟನ ಕೊಲೆ..?

26 ವರ್ಷದ ಕಿರುತೆರೆ ನಟ ಅಕ್ಷತ್ ಉತ್ಕರ್ಷ್‌ ಗರ್ಲ್‌ಫ್ರೆಂಡ್‌ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ

Mumbai Police register FIR in death case of TV actor Akshat Utkarsh dpl

ಮುಂಬೈನಲ್ಲಿ ಸಾವನ್ನಪ್ಪಿದ 26 ವರ್ಷದ ಕಿರುತೆರೆ ನಟ ಅಕ್ಷತ್ ಉತ್ಕರ್ಷ್‌ ಗರ್ಲ್‌ಫ್ರೆಂಡ್‌ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನಟನ ಸಾವಿನ ಬಗ್ಗೆ ಬಿಹಾರದಲ್ಲಿ ತೀವ್ರ ಆಕ್ರೋಶ ಕಂಡು ಬಂದಿತ್ತು. ಇದರ ಬೆನ್ನಲ್ಲೇ ಇದೀಗ ದೂರು ದಾಖಲಿಸಲಾಗಿದೆ.

ನಟನ ಪೋಷಕರ ದೂರಿನಂತೆ ಬಿಹಾರದ ಮುಝಾಫರ್‌ಪುರ್‌ನಲ್ಲಿ ಬಿಹಾರ್ ಪೊಲೀಸರು ನಟನ ಗರ್ಲ್‌ಫ್ರೆಂಡ್ ಮತ್ತು ಆಕೆಯ ಗೆಳತಿಯ ವಿರುದ್ಧ ಝೀರೋ ಎಫ್‌ಐಆರ್ ದಾಖಲಿಸಿದ್ದರು.

ಗಂಡನ ಲವ್ವಿಡವ್ವಿ ಪತ್ತೆ ಹಚ್ಚಲು ಹೋದ ಹೆಂಡ್ತಿ: ಮಾನಕ್ಕೆ ಅಂಜಿ ಮಹಿಳೆ ಆತ್ಮಹತ್ಯೆ

ಇನ್ನೊಂದು ರಾಜ್ಯದಲ್ಲಿ ನಡೆದ ಅಪರಾಧವನ್ನು ಮತ್ತೊಂದು ರಾಜ್ಯ ತನಿಖೆ  ನಡೆಸಬಾರದು. ಅಗಸ್ಟ್‌ನಿಂದಲೂ ಬಿಹಾರ ಪೊಲೀಸರು ಇದನ್ನೇ ಮಾಡುತ್ತಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ನಟ ಸಾವು ಆತ್ಮಹತ್ಯೆ, ಆಸ್ತಿ ವಂಚನೆ ಎಂಬ ಆರೋಪದಲ್ಲಿ ಬಿಹಾರ ಪೊಲೀಸರು ತನಿಖೆ ನಡೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕ್ರಿಯೆಗಳ ಪ್ರಕಾರ ಝೀರೋ ಎಫ್‌ಐಆರ್‌ನ್ನು ಬಿಹಾರದಿಂದ ಅಂಬೊಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಮುಂಬೈನ ಅಂಬೊಲಿಯಲ್ಲಿ ಕೊಲೆಗೆ ಶಿಕ್ಷೆ ಐಪಿಸಿ 302ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮದುವೆ ಆಗದಿದ್ದರೆ ನಗ್ನ ಫೋಟೋ ವೈರಲ್‌ ಬೆದರಿಕೆ: ಕಂಗಾಲಾದ ಯುವತಿ..!

ಉತ್ಕರ್ಷ ಮುಂಬೈನ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೆಲಸವಿಲ್ಲದೆ ಖಿನ್ನತೆಗೊಳಗಾಗಿದ್ದ ನಟ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ನಟನ ಪೋಷಕರು ಇದು ಕೊಲೆ ಎಂದು ಹೇಳಿದ್ದಾರೆ.

ನಟನ ತಂದೆ ಆತ ವಿವಾಹಕ್ಕೆ ನಿರಾಕರಿಸಿದ್ದಕ್ಕೆ ಗರ್ಲ್‌ಫ್ರೆಂಡ್ ಕೊಲೆ ಮಾಡಿದ್ದಾಗಿ ತಿಳಿಸಿದ್ದಾರೆ. ಯುವತಿಯ ಸಹೋದರಿಯೂ ಕೊಲೆಗೆ ನೆರವಾಗಿದ್ದಾರೆ ಎಂದು ಆರೋಪಿಸಲಾಗಿದೆ.

Latest Videos
Follow Us:
Download App:
  • android
  • ios