ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮುಂಬೈ ಪೊಲೀಸರ ಮೇಲೆ ಮತ್ತೊಮ್ಮೆ ಸಂಶಯಪಡುವಂತಾಗಿದೆ. ಮುಂಬೈ ಪೊಲೀಸರ ಆದೇಶದಂತೆ ಉದ್ದೇಶಪೂರ್ವಕವಾಗಿ ಸುಶಾಂತ್ ಮೃತದೇಹದ ಪೋಸ್ಟ್ ಮಾರ್ಟಂ ತಡರಾತ್ರಿಯಲ್ಲಿ ನಡೆಸಲಾಗಿತ್ತು ಎಂದು ಸಿಬಿಐ ತನಿಖೆಯಲ್ಲಿ ತಿಳಿದು ಬಂದಿದೆ.

ಮರಣೋತ್ತರ ಪರೀಕ್ಷೆ ನಡೆಸಿದ 5 ವೈದ್ಯರ ತಂಡವನ್ನು ಸಿಬಿಐ ವಿಚಾರಣೆ ನಡೆಸಿದಾ ಕೂಪರ್ ಆಸ್ಪತ್ರೆಯ ವೈದ್ಯರೊಬ್ಬರು ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಸುಶಾಂತ್ ಸಿಂಗರ್ ರಜಪೂತ್‌ನ ಕೊರೋನಾ ಟೆಸ್ಟಿಂಗ್ ವರದಿ ಸಿಗುವ ಮುನ್ನ ಯಾಕೆ ಪೋಸ್ಟ್ ಮಾರ್ಟಂ ಮಾಡಿದ್ದೇಕೆ ಎಂಬ ಸಿಬಿಐ ಪ್ರಶ್ನೆಗೆ ಉತ್ತರಿಸಿದ ವೈದ್ಯರು, ಮುಂಬೈ ಪೊಲೀಸರ ಸೂಚನೆ ಮೇರೆಗೆ ಈ ರೀತಿ ತಡ ರಾತ್ರಿ ಪೋಸ್ಟ್ ಮಾರ್ಟಂ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಹೇಶ್ ಭಟ್- ನಟಿ ರಿಯಾ ಫೋಟೋಸ್ ವೈರಲ್

ವೈದ್ಯರು ಸಿಬಿಐಗೆ ಒಪ್ಪುವಂತಹ ಉತ್ತರ ನೀಡಿಲ್ಲ ಎನ್ನಲಾಗುತ್ತಿದೆ. ಕೊರೋನಾ ವರದಿಗಾಗಿ ಏಕೆ ಕಾಯಲಿಲ್ಲ ಎಂಬ ಸಿಬಿಐ ಪ್ರಶ್ನೆಗೆ ಉತ್ತರಿಸಿದ ವೈದ್ಯರು ಕೊರೋನಾ ವರದಿ ಸಿಗುವ ಮುನ್ನ ಪೋಸ್ಟ್ ಮಾರ್ಟಂ ಮಾಡಬಾರದು ಎಂಬ ನಿಯಮವಿಲ್ಲ ಎಂದು ಉತ್ತರಿಸಿದ್ದಾರೆ.

ನಟ ಸುಶಾಂತ್ ಜೂನ್ 14ರಂದು ಮುಂಬೈನ ಬಾಂದ್ರಾದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸುಶಾಂತ್ ಮನೆಯ ಅಡುಗೆಯವನನ್ನೂ ಸಿಬಿಐ ವಿಚಾರಣೆ ನಡೆಸಿದ್ದು, ನಂತರ ಸುಶಾಂತ್ ಫ್ಲಾಟ್ ಮೇಟ್ ಸಿದ್ಧಾರ್ಥ್ ಪಿತನಿ ಬಗ್ಗೆಯೂ ಸಿಬಿಐ ನಿಗಾ ಇರಿಸಿದೆ.

ಸುಶಾಂತ್ ಸಾವಿನ ತನಿಖೆ ವೇಗ ಹೆಚ್ಚಿಸಲು 5 ವಿಶೇಷ ತಂಡ ರಚಿಸಿದ CBI

ಜೂನ್ 13,14ರ ರಾತ್ರಿಗೆ ಸಂಬಂಧಿಸಿ ಸಿಬಿಐ ಸಿದ್ಧಾರ್ಥ್‌ನನ್ನು ಪ್ರಶ್ನೆ ಮಾಡಲಿದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಸಂದರ್ಭ ಸಿದ್ಧಾರ್ಥ್ ಕೂಡಾ ಫ್ಲಾಟ್‌ನಲ್ಲಿದ್ದ. ಇಂದು ಸಿಬಿಐ ಸಿದ್ಧಾರ್ಥ್ ಹಾಗೂ ಅಡುಗೆಯವನನ್ನು ಸುಶಾಂತ್ ಮನೆಗೆ ಅಂದಿನ ಸೀನ್ ರೀ ಕ್ರಿಯೇಟ್ ಮಾಡಲು ಕರೆದೊಯ್ಯಲಿದ್ದಾರೆ.