Asianet Suvarna News Asianet Suvarna News

Mouni Roy Wedding: ಮದ್ವೆ ವಿಚಾರ ಕನ್ಫರ್ಮ್ ಮಾಡಿದ KGF ಬೆಡಗಿ

  • ಮದುವೆ ಶುಭಾಶಯ ಹೇಳಿದ ಪಾಪ್ಪರಾಜಿಗೆ ಥ್ಯಾಂಕ್ಸ್ ಎಂದ ಮೌನಿ ರಾಯ್
  • ಮದುವೆಯನ್ನು ಕನ್ಫರ್ಮ್ ಮಾಡಿದ ಕೆಜಿಎಫ್ ಚೆಲುವೆ
Mouni Roy confirms her upcoming wedding as she thanks paparazzi for congratulating her dpl
Author
Bangalore, First Published Jan 25, 2022, 11:12 AM IST

ಬಾಲಿವುಡ್ ನಟಿ ಮೌನಿ ರಾಯ್ ಮದುವೆ ಸುದ್ದಿ ಹಬ್ಬಿ ತಿಂಗಳಾಗುತ್ತಾ ಬಂತು. ಇದೀಗ ನಟಿ ತಮ್ಮ ವಿವಾಹವನ್ನು ಖುದ್ಧಾಗಿ ಖಚಿತಪಡಿಸಿದ್ದಾರೆ. ಮದುವೆ ಶುಭಾಶಯ ತಿಳಿಸಿದ ಪಾಪ್ಪರಾಜಿಗೆ ಥ್ಯಾಂಕ್ಸ್ ಕೂಡಾ ಹೇಳಿದ್ದಾರೆ. ಅಂತೂ ಕೆಜಿಎಫ್ ಬೆಡಗಿಯ ಮದುವೆ ಸಂಭ್ರಮ ಶುರುವಾಗಿದ್ದು, ದುಬೈ ಉದ್ಯಮಿ ಸೂರಜ್ ನಂಬಿಯಾರ್ ಜೊತೆ ಮದುವೆ ನಡೆಯಲಿದೆ. ಹಲವು ವಾರಗಳ ಊಹಾಪೋಹಗಳು, ವದಂತಿಗಳು ಮತ್ತು ಅವರ ಮುಂಬರುವ ವಿವಾಹದ ಬಗ್ಗೆ ಹಲವು ಅಪ್ಡೇಟ್‌ಗಳ ನಂತರ ಮೌನಿ ರಾಯ್ ಅಂತಿಮವಾಗಿ ವಿವಾಹ ಖಚಿತಪಡಿಸಿದ್ದಾರೆ. ಕೆಲವೇ ದಿನಗಳಲ್ಲಿ ವದಂತಿಗಳ ಗೆಳೆಯ ಸೂರಜ್ ನಂಬಿಯಾರ್ ಅವರನ್ನು ಮದುವೆಯಾಗುತ್ತಿರುವುದಾಗಿ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿನ ಹೊಸ ವೀಡಿಯೊದಲ್ಲಿ, ಜನವರಿ 27 ರಂದು ಗೋವಾದಲ್ಲಿ ನಡೆಯುತ್ತಿರುವ ಮದುವೆಗೆ ಮೌನಿಯನ್ನು ಪಾಪರಾಜಿಗಳು ಮುಂಚಿತೌಆಗಿ ಅಭಿನಂದಿಸಿದ್ದಾರೆ. ಮೌನಿ ಪಾಪರಾಜಿ ಹೇಳಿಕೆಗಳನ್ನು ನಿರಾಕರಿಸುವುದಿಲ್ಲ  ಎಂದಿದ್ದಾರೆ. ಸೋಮವಾರ ಮಧ್ಯಾಹ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪಾಪರಾಜಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಮೌನಿ ಪಾಪ್‌ಗಳಿಗಾಗಿ ಫೊಟೋಗಳಿಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಛಾಯಾಗ್ರಾಹಕರೊಬ್ಬರು ಆಕೆಯ ಮದುವೆಗೆ ಅಭಿನಂದನೆ ಸಲ್ಲಿಸುವುದನ್ನು ಕೇಳಬಹುದು. ಮೌನಿ ಜೀ, ಅಭಿನಂದನೆಗಳು! ನಿಮ್ಮ ಮದುವೆ 27 ರಂದು ಎಂದು ಅವರು ಹಿಂದಿಯಲ್ಲಿ ಹೇಳುತ್ತಾರೆ. ಆರಂಭದಲ್ಲಿ ಮೌನಿ ಪ್ರತಿಕ್ರಿಯಿಸಲಿಲ್ಲ ಪೋಸ್ ಕೊಡುವುದ್ನು ಮುಂದುವರೆಸುತ್ತಾರೆ.

ಬಾಲಿವುಡ್ ಚೆಲುವೆ ಇನ್ನು ಬೆಂಗಳೂರಿನ ಸೊಸೆ, ನಂಬಿಯಾರ್ ಮಲಯಾಳಿಯಾ?

ನಟಿ ತನ್ನ ಕಾರಿನ ಕಡೆಗೆ ನಡೆದ ತಕ್ಷಣ ಫೋಟೋಗ್ರಫರ್ ನಟಿಯನ್ನು ಮತ್ತೊಮ್ಮೆ ಅಭಿನಂದಿಸುತ್ತಾನೆ. ಈ ಸಮಯದಲ್ಲಿ, ಮೌನಿ ತಿರುಗಿ, ನಗುತ್ತಾರೆ, ಧನ್ಯವಾದಗಳು ಎಂದು ಹೇಳಿ ಅವರು ತನ್ನ ಕಾರಿನಲ್ಲಿ ಕುಳಿತಾಗ, ಇತರ ಪಾಪರಾಜಿಗಳು ಸಹ ಅವರನ್ನು ಅಭಿನಂದಿಸುತ್ತಾರೆ. ಅವರು ಮತ್ತೆ ಅವರಿಗೆ ಬಾಯ್ ಹೇಳುವ ಮೊದಲು ಎಲ್ಲರಿಗೂ ಧನ್ಯವಾದ ಎಂದು ಹೇಳುತ್ತಾರೆ. 27 ರಂದು ಗೋವಾದ ರೆಸಾರ್ಟ್‌ನಲ್ಲಿ ಮೌನಿ ಸೂರಜ್ ಅವರನ್ನು ಮದುವೆಯಾಗಲಿದ್ದಾರೆ ಎಂದು ಸುಮಾರು ಒಂದು ತಿಂಗಳಿಂದ ಸುದ್ದಿಯಾಗಿದೆ. ವರದಿಗಳ ಪ್ರಕಾರ ಮೌನಿ ಮತ್ತು ಸೂರಜ್ ತಮ್ಮ ಎರಡು ದಿನಗಳ ಗೋವಾ ಬೀಚ್ ಮದುವೆಯಲ್ಲಿ ಕೇವಲ ಕುಟುಂಬ ಮತ್ತು ಅತ್ಯಂತ ನಿಕಟ ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಂತರ ಮುಂಬೈನಲ್ಲಿ ಆರತಕ್ಷತೆಯನ್ನು ಆಯೋಜಿಸುತ್ತಿದ್ದಾರೆ ಎನ್ನಲಾಗಿದೆ. ಸೂರಜ್ ದುಬೈ ಮೂಲದ ಉದ್ಯಮಿ ಮತ್ತು ಇನ್ವೆಸ್ಟ್‌ಮೆಂಟ್ ಬ್ಯಾಂಕರ್.

ಮೌನಿ ರಾಯ್ ಅವರ ಬಾಯ್‌ಫ್ರೆಂಡ್ ಹೆಸರು ಸೂರಜ್ ನಂಬಿಯಾರ್. ಹೆಸರು ಕೇಳಿ ಅಪ್ಪಟ ಮಲಯಾಳಿ ಹುಡುಗ ಎಂದೇ ಎಲ್ಲರೂ ಅಂದುಕೊಂಡಿದ್ದರು. ದುಬೈ ಉದ್ಯಮಿಯ ಕೈ ಹಿಡಿಯುತ್ತಿರುವ ನಟಿ ಜನವರಿ 27ರಂದು ಮದುವೆಯಾಗುತ್ತಿದ್ದಾರೆ. ಬೀಚ್ ಬ್ಯೂಟಿ ಮೌನಿ ರಾಯ್ ಮದುವೆಗೂ ಬೀಚ್ ಲೊಕೇಷನ್ ಆರಿಸಿಕೊಂಡಿದ್ದಾರೆ.

ಲಸಿಕೆ ಪಡೆದ ಸರ್ಟಿಫಿಕೇಟ್ ಮಸ್ಟ್

ದುಬೈ ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ಮೌನಿ ರಾಯ್ ಮದುವೆಯಾಗುತ್ತಿರೋ ಸುದ್ದಿ ಈಗಾಗಲೇ ವೈರಲ್ ಆಗಿದೆ. ಲಾಕ್‌ಡೌನ್ ಸಮಯದಲ್ಲಿ, ವೆಕೇಷನ್‌ಗಳನ್ನೂ ಸೂರಜ್ ಜೊತೆ ಎಂಜಾಯ್ ಮಾಡಿದ್ದ ಮೌನಿ ಇದೀಗ ಲಾಂಗ್‌ಟೈಂ ಬಾಯ್‌ಫ್ರೆಂಡ್‌ನ ಪತ್ನಿಯಾಗುತ್ತಿದ್ದಾರೆ. ಜನವರಿ 27ರಂದು ಮದುವೆ ನಿಗದಿಯಾಗಿದೆ. ಫೈವ್ ಸ್ಟಾರ್ ರೆಸಾರ್ಟ್ ಮದುವೆಗಾಗಿ ಬುಕ್ ಮಾಡಲಾಗಿದ್ದು, ಆತ್ಮೀಯ ಕುಟುಂಬಸ್ಥರು ಹಾಗೂ ಸ್ನೇಹಿತರಷ್ಟೇ ಮದುವೆಯಲ್ಲಿ ಭಾಗಿಯಾಗಲಿದ್ದಾರೆ. ಅತಿಥಿಗಳಲ್ಲಿ ಕೊರೋನಾ ಲಸಿಕೆ ಪಡೆದ ಸರ್ಟಿಫಿಕೇಟ್ ಇರುವುದು ಕಡ್ಡಾಯವಾಗಿದೆ.

ಈ ಜೋಡಿ 2019ರಿಂದ ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಮೌನಿ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಎಲ್ಲವೂ ಸೀಕ್ರೆಟ್ ಆಗಿತ್ತು. ನಟಿಗೆ ಕಳೆದ ವರ್ಷ ಯುಎಇ ಗೋಲ್ಡನ್ ವೀಸಾ ನೀಡಿತ್ತು. ನಟಿ ವೆಕೇಷನ್‌ಗೆ ದುಬೈಗೆ ಹೋಗುತ್ತಿದ್ದರು. ಲಾಕ್‌ಡೌನ್ ಸಮಯವನ್ನೂ ಪೂರ್ತಿಯಾಗಿ ನಟಿ ಅಲ್ಲಿಯೇ ಕಳೆದಿದ್ದರು. ಈ ನಡುವೆ ಬಾಯ್‌ಫ್ರೆಂಡ್ ಜೊತೆಗೆ ನಟಿಯ ಫೋಟೋ ವೈರಲ್ ಆಗಿತ್ತು.

Follow Us:
Download App:
  • android
  • ios