Asianet Suvarna News Asianet Suvarna News

ಸ್ತ್ರೀ 2 ಚಿತ್ರದ ನಂತರ ಹೆಚ್ಚಾಯಿತು ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಪ್ರಸಿದ್ಧಿ, ಇನ್ಸ್ಟಾಗ್ರಾಮ್ ನಲ್ಲಿ ಮೋದಿ ಹಿಂದಿಕ್ಕಿದ ನಟಿ

ಇನ್ಸ್ಟಾಗ್ರಾಮ್ ನಲ್ಲಿ ಯಾರು ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಟಿ ಶ್ರದ್ಧಾ ಕಪೂರ್ ಸ್ತ್ರೀ 2 ಜೊತೆಗೆ ಇದ್ರಲ್ಲೂ ಸಾಧನೆ ಮಾಡಿದ್ದಾರೆ. ಅತಿ ಹೆಚ್ಚು ಇನ್ಸ್ಟಾಗ್ರಾಮ್ ಫಾಲೋವರ್ಸ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದಾರೆ. ನಂಬರ್ ಒನ್ ಯಾರು ಎಂಬುದಕ್ಕೆ ಉತ್ತರ ಇಲ್ಲಿದೆ. 
 

most followed indians on instagram virat kohli shraddha kapoor roo
Author
First Published Aug 26, 2024, 12:49 PM IST | Last Updated Aug 26, 2024, 12:49 PM IST

ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ (social media Instagram ) ನಲ್ಲಿನ ಮಿಲಿಯನ್ ನಲ್ಲಿ ಫಾಲೋವರ್ಸ್ (Followers) ಹೊಂದಿರುವ ಸೆಲೆಬ್ರಿಟಿಗಳ ಸಂಖ್ಯೆ ಸಾಕಷ್ಟಿದೆ. ಭಾರತದಲ್ಲಿ ಯಾರು ಪ್ರಭಾವಿಗಳು ಎನ್ನುವ ಪ್ರಶ್ನೆ ಬಂದಾಗ ಸಿಕ್ಕ ಉತ್ತರ ವಿರಾಟ್ ಕೊಹ್ಲಿ (Virat Kohli) . ಇನ್ಸ್ಟಾಗ್ರಾಮ್ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ವಿರಾಟ್ ಕೊಹ್ಲಿ, ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಆದ್ರೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅದೃಷ್ಟ ತಿರುಗಿದೆ. ಸ್ತ್ರೀ 2 ನಂತ್ರ ಶ್ರದ್ಧಾ, ಬಾಲಿವುಡ್ ಮಾತ್ರವಲ್ಲ ವಿಶ್ವದಾದ್ಯಂತ ಪ್ರಸಿದ್ಧಿ ಪಡೆಯುತ್ತಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಅವರ ಫಾಲೋವರ್ಸ್ ಸಂಖ್ಯೆ ಕೂಡ ಹೆಚ್ಚಾಗಿದೆ. ಈಗ ಪ್ರಧಾನಿ ನರೇಂದ್ರ ಮೋದಿಯವರನ್ನು ಹಿಂದಿಕ್ಕಿರುವ ಶ್ರದ್ಧಾ ಕಪೂರ್, ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. 

ಪ್ರಧಾನಿ ಮೋದಿಯವರನ್ನು ಮೀರಿಸಿರುವ ನಟಿ ಶ್ರದ್ಧಾ ಕಪೂರ್, ಮೆಟಾ-ಮಾಲೀಕತ್ವದ ವೇದಿಕೆಯಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಮೂರನೇ ಭಾರತೀಯರಾಗಿದ್ದಾರೆ. ಇನ್ಸ್ಟಾದಲ್ಲಿ ವಿರಾಟ್ ಕೊಹ್ಲಿ ಫಾಲೋವರ್ಸ್ ಸಂಖ್ಯೆ 270 ಮಿಲಿಯನ್ ಇದೆ. ಇನ್ನು ಮೂರನೇ ಸ್ಥಾನದಲ್ಲಿರುವ ಶ್ರದ್ಧಾ ಕಪೂರ್ ಫಾಲೋವರ್ಸ್ ಸಂಖ್ಯೆ 92.1 ಮಿಲಿಯನ್ ಇದೆ. 

Vijay Raghavendra: ನನ್ನ ಬೆಳಕಾಗು ಎನ್ನುತ್ತಲೇ ಪ್ರೀತಿಯ ಮಡದಿಗೆ ವೆಡ್ಡಿಂಗ್ ಆನಿವರ್ಸರಿ ವಿಶ್ ಮಾಡಿದ ವಿಜಯ್

ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿ, ಅಲ್ಲಿ ಒಂದಾದ್ಮೇಲೆ ಒಂದು ಸಿನಿಮಾ ಮಾಡ್ತಾ, ಮರಾಠಿ  ಚಿತ್ರಗಳನ್ನು ನಿರ್ಮಾಣ ಮಾಡ್ತಿರುವ ದೇಸಿ ಗರ್ಲ್ ಪಿಗ್ಗಿಗೆ ಫಾಲೋವರ್ಸ್ ಸಂಖ್ಯೆ ಕಡಿಮೆ ಏನಿಲ್ಲ. ವಿರಾಟ್ ಕೊಹ್ಲಿ ನಂತ್ರ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿ ಪ್ರಿಯಾಂಕಾ ಚೋಪ್ರಾ. 91.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ ಪ್ರಿಯಾಂಕ. 

ಸ್ತ್ರೀ 2 ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಶ್ರದ್ಧಾ ಕಪೂರ್, ಒಂದ್ಕಡೆ ಚಿತ್ರದ ಯಶಸ್ಸನ್ನು ಎಂಜಾಯ್ ಮಾಡ್ತಿದ್ದರೆ ಇನ್ನೊಂದು ಕಡೆ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದ್ದಕ್ಕೆ ಖುಷಿಪಡುವಂತಾಗಿದೆ. ವಿಶೇಷ ಅಂದ್ರೆ ಮೋದಿಯವರನ್ನು ಹಿಂದಿಕ್ಕಿದ್ದು. ಪಿಎಂ ಮೋದಿ ಇನ್ಸ್ಟಾಗ್ರಾಮ್ ನಲ್ಲಿ 91.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇನ್ಸ್ಟಾದಲ್ಲಿ ಈ ಬದಲಾವಣೆ ಆದ್ರೂ, ಪಿಎಂ ಮೋದಿ ಎಕ್ಸ್‌ನಲ್ಲಿ ಅತ್ಯಂತ ಜನಪ್ರಿಯ ಜಾಗತಿಕ ನಾಯಕರಾಗಿ ಉಳಿದಿದ್ದಾರೆ. 

ವಿರಾಟ್ ಕೊಹ್ಲಿ ಹಾಗೂ ಶ್ರದ್ಧಾ ಕಪೂರ್ ಮಧ್ಯೆ ಫಾಲೋವರ್ಸ್ ಸಂಖ್ಯೆಯಲ್ಲಿ ಅಜಗಜಾಂತರ ವ್ಯತ್ಯಾಸವಿದ್ರೂ ಅಭಿಮಾನಿಗಳು ಶ್ರದ್ಧಾ ಸಾಧನೆಯನ್ನು ಮೆಚ್ಚಿದ್ದಾರೆ. 

ಹಾರರ್ ಕಾಮಿಡಿ, ಸ್ತ್ರೀ 2 ಅನ್ನು ಅಮರ್ ಕೌಶಿಕ್ ನಿರ್ದೇಶಿಸಿದ್ದು, ಮ್ಯಾಡಾಕ್ ಫಿಲ್ಮ್ಸ್ ನಿರ್ಮಿಸಿದೆ. ಸ್ಟ್ರೀ 2 ಆಗಸ್ಟ್ 15 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ನಟಿಸಿರುವ ಸಿನಿಮಾ 2018 ರ ಸ್ತ್ರೀಯ ಮುಂದುವರಿದ ಭಾಗವಾಗಿದೆ. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ಸಿನಿಮಾ 386 ಕೋಟಿ ಜಾಗತಿಕ ಕಲೆಕ್ಷನ್ ಮೂಲಕ ದಾಖಲೆ ನಿರ್ಮಿಸಿದೆ.

ಶ್ರದ್ಧಾ ಕಪೂರ್ ನಂಬರ್ ಒನ್ ಎಂದ ಅಭಿಮಾನಿಗಳು : ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಜೊತೆ ಲಂಡನ್ ನಲ್ಲಿ ಸೆಟಲ್ ಆಗ್ತಾರೆ ಎನ್ನುವ ಮಾತಿದೆ. ಟಿ – 20 ವಿಶ್ವಕಪ್ ನಂತ್ರ ಕೊಹ್ಲಿ ಲಂಡನ್ ನಲ್ಲಿದ್ದಾರೆ. ಇನ್ನು ಪ್ರಿಯಾಂಕಾ ಚೋಪ್ರಾ ಈಗಾಗಲೇ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಹಾಗಾಗಿ ಇನ್ಸ್ಟಾಗ್ರಾಮ್ ನಲ್ಲಿ ನಂಬರ್ ಒನ್ ಫಾಲೋವರ್ಸ್ ಹೊಂದಿರುವ ಸೆಲೆಬ್ರಿಟಿ ಶ್ರದ್ಧಾ ಕಪೂರ್ ಅನ್ನೋದು ಅಭಿಮಾನಿಗಳ ವಾದ.

lakshmi baramma : ಲಕ್ಷ್ಮಿ ದೇಹದಲ್ಲಿ ಕೀರ್ತಿ ಆತ್ಮ..? ಲಕ್ಷ್ಮಿ ಬಾರಮ್ಮ ಸೀರಿಯಲ್ ಗೆ ಹೊಸ ಟ್ವಿಸ್ಟ್

ಫಾಲೋವರ್ಸ್ ಪಟ್ಟಿಯನ್ನು ನೋಡೋದಾದ್ರೆ ನರೇಂದ್ರ ಮೋದಿ ನಂತ್ರದ ಸ್ಥಾನದಲ್ಲಿ ಆಲಿಯಾ ಭಟ್ ಇದ್ದಾರೆ. 85.1 ಮಿಲಿಯನ್ ಫಾಲೋವರ್ಸ್ ಅವರಿಗಿದ್ರೆ, ಅವ್ರ ನಂತ್ರ ಕತ್ರಿನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ ಬರ್ತಾರೆ. ಇಬ್ಬರು ತಲಾ 80.4 ಹಾಗೂ 79.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. 

Latest Videos
Follow Us:
Download App:
  • android
  • ios