ಬಾಲಿವುಡ್ ತಾರೆಯರಿಂದ ಕೊರೋನಾ ಹೋರಾಟಕ್ಕೆ ಫಂಡ್ ಸಂಗ್ರಹ 25 ಕೋಟಿ ಸಂಗ್ರಹಕ್ಕೆ ಸಿದ್ಧರಾಗಿದ್ದಾರೆ ಬಾಲಿವುಡ್‌ನ 100 ತಾರೆಗಳು
ಭಾರತಕ್ಕೆ ಕೊರೋನಾ ಅಪ್ಪಳಿಸಿದಾಗಿನಿಂದ ಸೋನು ಸೂದ್‌ನಿಂದ ತೊಡಗಿ ಸಾರಾ ಅಲಿ ಖಾನ್ ತನಕ ಚಿತ್ರರಂಗದ ಬಹಳಷ್ಟು ತಾರೆಗಳು ಜನರಿಗೆ ನೆರವಾಗುತ್ತಿದ್ದಾರೆ. ಮೆಡಿಕಲ್ ಕಿಟ್, ಆಕ್ಸಿಜನ್, ಮಾಸ್ಕ್, ಔಷಧ, ಆಹಾರ, ವೈದ್ಯಕೀಯ ನೆರವು ಸೇರಿದಂತೆ ಬಹಳಷ್ಟು ರೀತಿಯಲ್ಲಿ ಜನ ಸಾಮಾನ್ಯರಿಗೆ ನೆರವಾಗಿದ್ದಾರೆ. ಈಗ ಬಾಲಿವುಡ್‌ನ ಟಾಪ್ ಸ್ಟಾರ್ಸ್ ಸೇರಿಕೊಂಡು ಮತ್ತೊಮ್ಮೆ ದೇಶದ ಜನರಿಗೆ ನೆರವಾಗಲು ಮುಂದಾಗಿದ್ದಾರೆ. ಈ ಮೂಲಕ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಕೊರೋನಾ ಹೋರಾಟಕ್ಕೆ ಸಾಥ್ ಕೊಡಲು ಸಿದ್ಧರಾಗಿದ್ದಾರೆ.
ಈ ಸ್ವಾತಂತ್ರ್ಯ ದಿನಾಚರಣೆಯಂದು ಫೇಸ್‌ಬುಕ್‌ನಲ್ಲಿ ಜಾಗತಿಕ ನಿಧಿಸಂಗ್ರಹಣೆಗಾಗಿ ಬಾಲಿವುಡ್ ಕಲಾವಿದರು ಮತ್ತು ಪ್ರಭಾವಶಾಲಿ ವ್ಯಕತಿಗಳು ಒಟ್ಟಾಗಿದ್ದಾರೆ. ಇದು ಕೋವಿಡ್ -19 ಪರಿಹಾರ ಕಾರ್ಯಕ್ಕಾಗಿ ₹ 25 ಕೋಟಿಗಳಷ್ಟು ದೇಣಿಗೆಯನ್ನು ಸಂಗ್ರಹಿಸುವುದಾಗಿದೆ. ವಿ ಫಾರ್ ಇಂಡಿಯಾ: ಸೇವಿಂಗ್ ಲೆವ್ಸ್ ಎನ್ನುವ ಘೋಷಣೆಯೊಂದಿಗೆ ಆಗಸ್ಟ್ 15 ರ ಭಾನುವಾರ ಸಂಜೆ 7.30 ಕ್ಕೆ ಲೈವ್ ಸ್ಟ್ರೀಮ್ ಆಗುತ್ತದೆ. ಅಂದು ಭಾರತದ ಅತಿದೊಡ್ಡ ಮತ್ತು ಅತ್ಯಂತ ವಿಶ್ವಾಸಾರ್ಹ ವೇದಿಕೆಯಾದ ಗಿವ್ ಇಂಡಿಯಾದ ಕೋವಿಡ್ -19 ಪರಿಹಾರ ಕಾರ್ಯಾಚರಣೆಗಳಿಗೆ ಹಣ ಸಂಗ್ರಹಿಸಲಾಗುತ್ತದೆ.
5G ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದೇಕೆ ? ಜೂಹಿ ಹೇಳಿದ್ರು ಅಸಲಿ ಕಾರಣ
ಭಾಗವಹಿಸುವವರು ಕೊರೋನಾ ಎರಡನೇ ತರಂಗದಿಂದ ಉಂಟಾದ ವಿನಾಶದ ನಂತರ ಭಾರತದಲ್ಲಿ ಜೀವಗಳು ಮತ್ತು ಜೀವನೋಪಾಯಗಳನ್ನು ಉಳಿಸಲು ಒಗ್ಗಟ್ಟು ಮತ್ತು ಬೆಂಬಲವನ್ನು ವ್ಯಕ್ತಪಡಿಸಲಿದ್ದಾರೆ. ಮೆಗಾ ಈವೆಂಟ್‌ನಿಂದ ಬರುವ ಎಲ್ಲಾ ಹಣವನ್ನು ಮಾನವೀಯ ನೆರವು ನೀಡಲು ಮತ್ತು ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲು ಗಿವ್ ಇಂಡಿಯಾ ಬಳಸಿಕೊಳ್ಳುತ್ತದೆ.
ಈ ಮೂರು ಗಂಟೆಯ ವೀಡಿಯೋಥಾನ್ ನಲ್ಲಿ ಬಾಲಿವುಡ್‌ನ ಪ್ರಮುಖ ಚಲನಚಿತ್ರ ನಿರ್ಮಾಪಕರಾದ ರಾಜಕುಮಾರ್ ಹಿರಾನಿ, ಕರಣ್ ಜೋಹರ್, ಇಮ್ತಿಯಾಜ್ ಅಲಿ, ಫರಾ ಖಾನ್, ವಿಕ್ರಮಾದಿತ್ಯ ಮೋಟ್ವಾನೆ, ವಿಕ್ರಮ್ ಭಟ್ ಮತ್ತು ರಿಭು ದಾಸ್ಗುಪ್ತ ಸೇರಿದಂತೆ 100 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ. ಅಂತಾರಾಷ್ಟ್ರೀಯ ತಾರೆಯರು ಮತ್ತು ಮ್ಯೂಸಿಕ್ ಸೆಲೆಬ್ರಿಟಿಗಳಾದ ಎಡ್ ಶೀರನ್, ಅನ್ನಿ ಲೆನಾಕ್ಸ್ ಅವರ ಮಗಳು, ಲೋಲಾ ಲೆನಾಕ್ಸ್, ರೋಲಿಂಗ್ ಸ್ಟೋನ್ಸ್ ಮಿಕ್ ಜಾಗರ್, ಆಫ್ರಿಕಾ ಮೂಲದ ನಟಿ ಇನಿ ದಿಮಾ-ಒಕೊಜಿ, ಸೂಪರ್ ಸ್ಟಾರ್ ಮತ್ತು ಯುನಿಸೆಫ್ ಗುಡ್‌ವಿಲ್ ರಾಯಭಾರಿ ನ್ಯಾನ್ಸಿ ಸೇರಲಿದ್ದಾರೆ.
