Asianet Suvarna News Asianet Suvarna News

5G ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದೇಕೆ ? ಜೂಹಿ ಹೇಳಿದ್ರು ಅಸಲಿ ಕಾರಣ

  • 5G ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದ ಬಹುಭಾಷಾ ನಟಿ
  • ನ್ಯಾಯಾಲಯ ಮೆಟ್ಟಿಲೇರಿ ಮುಖಭಂಗ ಅನುಭವಿಸಿದ್ದ ಜೂಹಿ ಚಾವ್ಲಾ
  • ಪಬ್ಲಿಸಿಡಿ ಸ್ಟಂಟ್ ಎಂದೋರಿಗೆ ತನ್ನ ನಡೆಯ ಹಿಂದಿನ ರಿಯಲ್ ಕಾರಣ ಹೇಳಿದ ನಟಿ
Juhi Chawla finally breaks silence on allegations of 5G lawsuit being a publicity stunt dpl
Author
Bangalore, First Published Aug 10, 2021, 10:41 AM IST

ದೆಹಲಿ ಹೈಕೋರ್ಟ್ ತಮ್ಮ ಮನವಿಯನ್ನು ತಿರಸ್ಕರಿಸಿದ ಬಗ್ಗೆ ನಟಿ, ಪರಿಸರವಾದಿ ಜೂಹಿ ಚಾವ್ಲಾ ಅವರು ಪ್ರತಿಕ್ರಿಯಿಸಿದ್ದಾರೆ.  ಭಾರತದಲ್ಲಿ 5ಜಿ ಟೆಕ್ನಾಲಜಿಯ ಅನುಷ್ಠಾನವನ್ನು ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದ ನಟಿಯ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್ ನಟಿಗೆ ದಂಡವನ್ನೂ ವಿಧಿಸಿತ್ತು. 2021 ಜೂನ್‌ನಲ್ಲಿ ರಾಲ್‌ಔಟ್ 5ಜಿ ನೆಟ್‌ವರ್ಕ್‌ ಟೆಕ್ನಾಲಜಿ ಅನುಷ್ಠಾನವನ್ನು ವಿರೋಧಿಸಿ ನಟಿ ಜೂಹಿ ಚಾವ್ಲಾ ಅರ್ಜಿ ಸಲ್ಲಿಸಿದ ನಂತರ ಸುದ್ದಿಯಾಗಿದ್ದರು. ಈ ಬಗ್ಗೆ ಟ್ವಿಟರ್‌ನಲ್ಲೂ ಸಾಕಷ್ಟು ಚರ್ಚೆಯಾಗುತ್ತು. ಆದರೆ ಆ ಸಂದರ್ಭ ನಟಿ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಆದರೆ ಈಗ ಅದೇ ವಿಚಾರವಾಗಿ ತಮ್ಮ ಮೌನ ಮುರಿದಿದ್ದಾರೆ.

ನಟಿ 14 ನಿಮಿಷಗಳ ವಿಡಿಯೋ ಶೇರ್ ಮಾಡಿದ್ದು, 5ಜಿ ವಿರುದ್ಧ ಆಕೆಯ ಅರ್ಜಿ ಪಬ್ಲಿಸಿಟಿ ಸ್ಟಂಟ್ ಎಂದವರಿಗೆ ಪ್ರತ್ಯುತ್ತರ ಕೊಟ್ಟಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಮೌನವಾಗಿದ್ದ ನಂತರ ಜೂಹಿ ಕಳೆದ 10 ವರ್ಷಗಳ ಅವಧಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತಾನು ನಡೆಸಿದ ಪ್ರಯತ್ನವನ್ನು ದಾಖಲಿಸುವ ವೀಡಿಯೊವನ್ನು ಹೊರಬಿಟ್ಟಿದ್ದಾರೆ. ಇದೆಲ್ಲವೂ ಸಮಯದ ಕುರಿತು ಎಂದು ಅವರು ಪೋಸ್ಟ್‌ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಇದು ಪಬ್ಲಿಸಿಟಿ ಸ್ಟಂಟ್ ಆಗಿದೆಯಾ ಎಂಬುದನ್ನು ನೀವೇ ನಿರ್ಧರಿಸಿ ಎಂದು ಟ್ರೋಲಿಗರಿಗೆ ಉತ್ತರಿಸಿದ್ದಾರೆ. ತಮ್ಮ ಮುಂಬೈ ಮನೆಯ ಸುತ್ತ 14 ಟವರ್ ಇರುವುದನ್ನೂ ತಿಳಿಸಿದ್ದಾರೆ ನಟಿ

ಸುರಕ್ಷತೆ ಖಚಿತಪಡಿಸಿ; 5G ಕೆನೆಕ್ಷನ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ!

ಜೂನ್‌ನಲ್ಲಿ ಆದ ಘಟನೆಯಿಂದ ನೋವಾಗಿದೆ, ಗೊಂದಲವೂ ಆಗಿದೆ. ಒಂದು ಕಡೆ ನನ್ನ ಬಗ್ಗೆ ಕೆಟ್ಟದಾಗಿ ಸುದ್ದಿಯಾಯಿತು, ಪಬ್ಲಿಸಿಟಿಯಾಯಿತು. ಇನ್ನೊಂದು ಕಡೆ ಬಹಳಷ್ಟು ಜನ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ರೈತರು ಇಂತಹದೊಂದು ಮೆಸೇಜ್ ಮಾಡಿದ್ದಾರೆ. ಇದು ನನಗೆ ಕಣ್ಣೀರು ತರಿಸಿತು. ನನಗೆ ವಿಧಿಸಲಾಗಿದ್ದ ದಂಡವನ್ನು ಪಾವತಿಸಲು ನನಗೆ ನೆರವಾಗಲು ಹಣ ಸಂಗ್ರಹಿಸಲು ಅವರು ಮುಂದಾಗಿದ್ದರು ಎಂದಿದ್ದಾರೆ.

ಇಂತಹ ಘಟನೆಯಿಂದ ನಾನು ಸಲ್ಲಿಸಿದ ಅರ್ಜಿ ಬಗ್ಗೆ ಹೆಮ್ಮೆಯಾಗಿದೆ. ನನ್ನ ದೇಶದ ಸಾಮಾನ್ಯ ಜನರಿಗಾಗಿ ನಾನು ಧ್ವನಿ ಎತ್ತಿದ್ದೇನೆ. ಸಮಯೋಚಿತವಾಗಿ ನಾನು ಪ್ರಶ್ನೆ ಮಾಡಿದೆ ಎಂದಿದ್ದಾರೆ. ಈ ಎಲ್ಲಾ ಸಮಯದಲ್ಲಿ ನಾನು ಮೌನವಾಗಿದ್ದೆ. ಏಕೆಂದರೆ ಮೌನವು ತನ್ನದೇ ನಿರ್ಲಕ್ಷ್ಯದ ಶಬ್ದವನ್ನು ಹೊಂದಿದೆ ಎಂದು ನಾನು ನಂಬಿದ್ದೇನೆ. ಆದರೆ ಈಗ ನಾನು ಇಎಮ್‌ಎಫ್ ವಿಕಿರಣ, ಅದರ ಆರೋಗ್ಯ ಪರಿಣಾಮಗಳ ಕುರಿತು ನನ್ನ 11 ವರ್ಷಗಳ ಪ್ರಯಾಣದಲ್ಲಿ ಸಿಕ್ಕಿದ ಕೆಲವು ಪ್ರಮುಖ ಮತ್ತು ಆಘಾತಕಾರಿ ವಿವರಗಳನ್ನು ತರಲು ಬಯಸುತ್ತೇನೆ ಈ ವಿಷಯದಲ್ಲಿ ಕೆಲವು ಅಧಿಕಾರಿಗಳ ಅಜ್ಞಾನವಿದೆ ಎಂದಿದ್ದಾರೆ.

5ಜಿ ತರಂಗಾಂತರ ಪ್ರಶ್ನಿಸಿದ ಜೂಹಿ ಚಾವ್ಲಾ ಅರ್ಜಿ ವಜಾ, 20 ಲಕ್ಷ ದಂಡ ಹಾಕಿದ ಕೋರ್ಟ್!

ತನ್ನ ಮನವಿಯಲ್ಲಿ, ಜೂಹಿ ಭಾರತದಲ್ಲಿ 5 ಜಿ ಅನುಷ್ಠಾನದಿಂದ ಸಾರ್ವಜನಿಕ ಆರೋಗ್ಯಕ್ಕೆ ಹಾನಿಯಾಗಲಿದೆ ಎಂದು ಹೇಳಿದ್ದರು. ಏಕೆಂದರೆ ಅದು ಹೊರಸೂಸುವ ವಿಕಿರಣವು ಜನರ ಆರೋಗ್ಯ ಮತ್ತು ಸುರಕ್ಷತೆಗೆ ಅತ್ಯಂತ ಹಾನಿಕಾರಕವಾಗಿದೆ ಎಂದಿದ್ದರು.

Follow Us:
Download App:
  • android
  • ios