ಮಲಯಾಳಂ,ತಮಿಳು ಹಾಗೂ ತೆಲುಗು ಚಿತ್ರರಂಗದ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ 'ರೌಡಿ ಬೇಬಿ' ಸಾಯಿ ಪಲ್ಲವಿ ಈಗ ಮತ್ತೊಮ್ಮೆ ನಟ ನಾನಿ ಜೊತೆ ಅಭಿನಯಿಸಲು ಸೈ ಎಂದಿದ್ದಾರೆ.

ಮರೆಯಲಾಗದ ತೆರೆಯ ಮೇಲಿನ ಟೀಚರ್ಸ್ ಇವರು..!

ಡಿ ಸುರೇಶ್ ಬಾಬು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಶ್ಯಾಮ್ ಸಿಂಗ್ ರಾಯ್' ಚಿತ್ರದಲ್ಲಿ ಸಾಯಿ ಪಲ್ಲಿವಿ, ನಾನಿ ಜೊತೆ ಅಭಿನಯಿಸಲಿದ್ದಾರೆ, ಚಿತ್ರದ ಬಹುತೇಕ ಮಾತುಕಥೆ ಅಂತಿಮವಾಗಿದೆ ಎನ್ನಲಾಗಿದೆ. ಆದರೆ ರಿಲೀಸ್‌ ಅಗಿರುವ ಪೋಸ್ಟರ್‌ನಲ್ಲಿ ನಟ ರಾಣಾ ದಗ್ಗುಬಾಟಿ ಹೆಸರು ಇರುವುದು ವಿಶೇಷವಾಗಿದೆ. ಇದರಲ್ಲಿ ರಾಣಾ ಪಾತ್ರ ಏನು ಎಂಬುವುದು ತಿಳಿದು ಬಂದಿಲ್ಲ.

ಸಂಭಾವನೆ ಡಿಮ್ಯಾಂಡ್‌ ನಿಜವೇ?:
ಅತಿ ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟಕ್ಕೆ ಹೆಸರು ಮಾಡಿದ ಸರಳ ಸುಂದರ ನೈಜ ನಟಿ ಸಾಯಿ ಪಲ್ಲವಿ. ನಿರ್ಮಾಪಕರ ಹಾಗೂ ನಿರ್ದೇಶಕರ ಪರಿಸ್ಥಿತಿ ಹಾಗೂ ಚಿತ್ರಕ್ಕೆ ಹಾಕುತ್ತಿರುವ ಬಂಡವಾಳವನ್ನು ಅರಿತ ನಂತರ ಸಂಭಾವನೆ ಡಿಮ್ಯಾಂಡ್ ಮಾಡುತ್ತಾರೆ ಎಂದು ಕೇಳಿದ್ದೀವಿ. ಆದರೆ ಸಾಮಾಜಿಕ ಜಾಲತಾಣದಲ್ಲಿ ಪಲ್ಲವಿ ಬರೋಬ್ಬರಿ 2 ಕೋಟಿ ಡಿಮ್ಯಾಂಡ್‌ ಮಾಡಿದ್ದಾರೆ ಎನ್ನಲಾಗಿದೆ. ಇದು ನಿಜಾನಾ?

ಪ್ರೇಮಂ ನಟಿಗೆ ಸೀರೆ ಮೇಲೆ ಸಿಕ್ಕಾಪಟ್ಟೆ ಲವ್ ಅನ್ನೋದಕ್ಕೆ ಈ ಪೋಟೋಗಳೇ ಸಾಕ್ಷಿ..!

ಈ ಹಿಂದೆ 'ಪಡಿ ಪಡಿ ಲೇಚಿ ಮನಸ್ಸು' ಸಿನಿಮಾ ಹಿಟ್ ಆಗದ ಕಾರಣ ನಿರ್ಮಾಪಕರಿಗೆ ಲಾಸ್ ಆಯ್ತು. ಇದರಿಂದ ಇನ್ನಿತರ ಕಲಾವಿದರ ಸಂಭಾನೆಗೆ ತೊಂದರೆ ಆಗಬಾರದು, ಎನ್ನುವ ಕಾರಣಕ್ಕೆ ಪಲ್ಲವಿ ತಮ್ಮ ಸಂಭಾವನೆ 60% ಹಣವನ್ನು ಹಿಂದಿರುಗಿಸಿದರು. ಜನರನ್ನು ಗ್ಲಾಮರಸ್ ಆಗಿ ತೋರಿಸುವ ಫೇರ್‌ನೆಸ್‌ ಕ್ರೀಮ್‌ಗಳ ಜಾಹೀರಾತಿನ ಆಫರ್‌ಗಳನ್ನು ನಿರಾಕರಿಸಿದ್ದಾರೆ ಈ ಪ್ರೇಮಂ ನಟಿ.

ನಿರ್ಮಾಪಕ, ನಿರ್ದೇಶಕ ಹಾಗೂ ಇನಿತ್ತರ ಕಲಾ ಬಂಧುಗಳು ಆರ್ಥಿಕ ಪರಿಸ್ಥಿತಿ ಅರ್ಥ ಮಾಡಿಕೊಂಡು. ಕೆಲಸ ಮಾಡುವ ವ್ಯಕ್ತಿಯೇ ನಿಜವಾದ ಕಲಾವಿದೆ. ಅದು ಸಾಯಿ ಪಲ್ಲವಿ ಎನ್ನುವುದರಲ್ಲಿ ಅನುಮಾನವೇ ಇಲ್ಲ.