ಜೋರ್ಡಾನ್‌ನಲ್ಲಿ ಸಿಲುಕಿಕೊಂಡಿದ್ದ ಮಾಲಿವುಡ್ ನಟ ಪೃಥ್ವಿ ರಾಜ್ ತಾಯಿ ನಾಡಿಗೆ ಹಿಂದಿರುಗಿದ್ದಾರೆ. ಪತಿ ಅಗಮನದ ಬಗ್ಗೆ ಪತ್ನಿ ಕೊಟ್ಟ ಮೆಸೇಜ್ ಇದು.....
ಮಾಲಿವುಡ್ ಸ್ಟಾರ್ ನಟ ಪೃಥ್ವಿ ರಾಜ್ 'ಆಡು ಜೀವಿತಂ' ಸಿನಿಮಾ ಚಿತ್ರೀಕರಣಕ್ಕೆಂದು ಜೋರ್ಡಾನ್‌ಗೆ 57 ಜನರ ತಂಡವಾಗಿ ತೆರಳಿದ್ದರು. ಕೊರೋನಾ ವೈರಸ್ ಹೆಚ್ಚಾಗುತ್ತಿದ್ದಂತೆ, ಚಿತ್ರೀಕರಣ ಮಾಡಲು ಅನುಮತಿ ಸಿಗದೇ ತಮ್ಮ ತಾಯ್ನಾಡಿಗೂ ಬರಲು ಸಾಧ್ಯವಾಗದ ಸ್ಥಿತಿ ಇತ್ತು. ಅದಕ್ಕೆ ಅಲ್ಲಿಯೇ ಸಿಲುಕಿಕೊಂಡಿದ್ದರು. ಈ ಬಗ್ಗೆ ಫಿಲಂ ಛೇಂಬರ್ ಹಾಗೂ ಸರ್ಕಾರಕ್ಕೆ ಮನವಿ ಮಾಡಿಕೊಂಡು, ಹೇಗಾದರೂ ಭಾರತಕ್ಕೆ ಕರೆಯಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು.
ಸುಮಾರು 2 ತಿಂಗಳ ಕಾಲ ಪೃಥ್ವಿರಾಜ್ ಮತ್ತು ತಂಡ ಜೋರ್ಡಾನ್‌ನಲ್ಲಿ ಸಿಲುಕಿಕೊಂಡಿದ್ದು, ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಆಗಿದ್ದಾರೆ. ಜೋರ್ಡಾನ್‌ನಿಂದ ದೆಹಲಿಗೆ ವಿಶೇಷ ವಿಮಾನದಲ್ಲಿ ಬಂದು, ಅಲ್ಲಿಂದ ಕೇರಳದ ಕೊಚ್ಚಿಗೆ ತಲುಪಿದ್ದಾರೆ.
58 ಮಂದಿಗೆ ಕ್ವಾರಂಟೈನ್:
ಪೃಥ್ವಿರಾಜ್ ಹಾಗೂ ಚಿತ್ರತಂಡದವರು ಕೊಚ್ಚಿನ್ ತೆರಳಿದ ನಂತರ ಕೇರಳ ಸರ್ಕಾರದ ನಿಯಮದ ಪ್ರಕಾರ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದಾರೆ. ಜೋರ್ಡಾನ್‌ನಲ್ಲಿ ಏಪ್ರಿಲ್ 10ರ ತನಕ ಚಿತ್ರೀಕರಣ ಮಾಡಲಾಗಿದ್ದು ಆ ನಂತರ ಪ್ಯಾಕ್ ಅಪ್ ಮಾಡಲಾಗಿತ್ತು.
ವಿದೇಶದ ಮರುಭೂಮಿಯಲ್ಲಿ ಸಿಕ್ಕಾಕಿಕೊಂಡ ನಟ; ಭಾರತಕ್ಕೆ ಕರೆತರಲು ಮನವಿ!
ಜೋರ್ಡಾನ್‌ನಲ್ಲಿ ಪೃಥ್ವಿ ಜೊತೆ ಅನೇಕ ಕಲಾವಿದರು ಸಿಲುಕಿಕೊಂಡಿದ್ದು, ವಾದಿ ರಮ್‌ನಲ್ಲಿ ವಸತಿ ಹಾಗೂ ಆಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು. ಪ್ರತಿ 72 ಗಂಟೆಗಳಿಗೊಮ್ಮೆ ಆರೋಗ್ಯ ತಪಾಸಣೆಗೆಂದು ವೈದ್ಯರನ್ನು ನಿಯೋಜಿಸಲಾಗಿತ್ತು. ಇದೀಗ ತಮ್ಮ ಊರಿಗೆ ತೆರಳಿ 14 ದಿನಗಳ ಕಾಲ್ ಕ್ವಾರಂಟೈನ್‌ನಲ್ಲಿರುತ್ತಾರೆ.

ಪತ್ನಿ ಕೊಟ್ಟ ಸ್ಪಷ್ಟನೆ:
ಪೃಥ್ವಿರಾಜ್ ಪತ್ನಿ ಸುಪ್ರೀಯಾ ಇನ್‌ಸ್ಟಾಗ್ರಾಂನಲ್ಲಿ ಪತಿ ಆಗಮನದ ಬಗ್ಗೆ ಅಪ್ಡೇಟ್ ನೀಡುತ್ತಲ್ಲೇ ಇದ್ದರು. 'ಮೂರು ತಿಂಗಳ ನಂತರ ಪೃಥ್ವಿರಾಜ್ ಹಾಗೂ ತಂಡ ಭಾರತಕ್ಕೆ ಹಿಂದಿರುಗಿದ್ದಾರೆ. ಸರ್ಕಾರದ ನಿಯಮಗಳ ಪ್ರಕಾರ ಕ್ವಾರಂಟೈನ್‌ನಲ್ಲಿ ಇರುತ್ತಾರೆ. ಅವರು ಬರಲು ಸಹಾಯ ಮಾಡಿದ ಪ್ರತಿಯೊಬ್ಬ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗೂ ಧನ್ಯವಾದಗಳು. ನಮ್ಮ ಮಗಳು ತಂದೆಯನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾಳೆ. ಕ್ವಾರಂಟೈನ್ ಮುಗಿಯಬೇಕು' ಎಂದು ಬರೆದುಕೊಂಡಿದ್ದಾರೆ.
ವಂದೇ ಭಾರತಮ್ ಎಂಬ ಕಾರ್ಯಕ್ರಮದಡಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರುವ ಕಾರ್ಯಕ್ಕೆ ಭಾರತ ಸರಕಾರ ಮುಂದಾಗಿದೆ. ಎಲ್ಲಿಯೋ, ನಮ್ಮವರಿಲ್ಲದೇ, ಕೆಲಸವನ್ನೂ ಕಳೆದುಕೊಂಡು ಪರದಾಡುತ್ತಿದ್ದ ಮಂದಿ ಸ್ವದೇಶಕ್ಕೆ ಮರಳಿದ್ದಾರೆ. ಅವರಲ್ಲಿಯೂ ಅನೇಕರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇನ್ನು ಕೆಲವರು ಕಡ್ಡಾಯವಾಗಿ ಕ್ವಾರಂಟೈನ್ ಆಗಬೇಕಿದೆ.
