ವೈರಲ್ ಆಗುತ್ತಿದೆ ನಟಿ ಮಾಳವಿಕಾ ಮೋಹನ್ ಮೇಕಪ್ ಲೆಸ್ ಫೋಟೋ. ಜನರಿಗಿರುವ ತಪ್ಪು ಕಲ್ಪನೆ ಬಗ್ಗೆ ಕ್ಲಾರಿಟಿ ಕೊಟ್ಟ ನಟಿ...
ಸೆಲೆಬ್ರಿಟಿಗಳು ಆನ್‌ಸ್ಕ್ರೀನ್ ಎಷ್ಟು ಗ್ಲಾಮ್ ಆಂಡ್ ಫ್ಯಾಬ್ ಆಗಿ ಕಾಣಿಸಿಕೊಳ್ಳುತ್ತಾರೆ ಆಫ್‌ಸ್ಕ್ರೀನ್ ಕೂಡ ಹಾಗೆ ಇರಬೇಕು ಎಂದು ಜನರು ನಿರೀಕ್ಷೆ ಮಾಡುವುದು ತಪ್ಪಲ್ಲ ಏಕೆಂದರೆ ಹಲವು ವರ್ಷಗಳಿಂದ ಗ್ಲಾಮ್ ಲೋಕ ಕ್ರಿಯೇಟ್ ಮಾಡಿರುವ ಹೈಪ್ ಇದು. ಇತ್ತೀಚಿನ ದಿನಗಳ ನಟಿಯರು ತಮ್ಮ ಸ್ಕಿನ್ ಕೇರ್, ಹೇರ್ ಕೇರ್, ಬಾಡಿ ಶೇಮಿಂಗ್ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ ಹೀಗಾಗಿ ತಮ್ಮ ರಿಯಲ್ ಸ್ಕಿನ್‌ನ ಜನರಿಗೆ ತೋರಿಸುವುದಕ್ಕೆ ಹಿಂಜರಿಯುತ್ತಿಲ್ಲ.
ನಮ್ಮ ದೇಹವನ್ನು ನಾನು ಮೊದಲು ಒಪ್ಪಿಕೊಳ್ಳಬೇಕು ಸಮಾಜದ ಕಾಮೆಂಟ್ಸ್‌ಗೆ ಕೇರ್ ಮಾಡಬಾರದು ಎಂದು ನಟಿ ಸಮೀರಾ ರೆಡ್ಡಿ (Shameera Reddy), ತಹಿರಾ ಕಶ್ಯಪ್, ಅನ್ಶುಲಾ ಕಪೂರ್, ಇಲಿಯಾನ ಮತ್ತು ಸೋನಂ ಕಪೂರ್ (Sonam Kapoor) ಸಂದರ್ಶನಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಹೇಳುತ್ತಲೇ ಇರುತ್ತಾರೆ ಈಗ ಅವರ ಸಾಲಿಗೆ ಮಲಯಾಳಂ ನಟಿ ಮಾಳವಿಕಾ ಮೋಹನ್ (Malavika Mohan) ಸೇರಿಕೊಂಡಿದ್ದಾರೆ.
ಹೌದು! ಚಿತ್ರರಂಗದ ಬೇಡಿಕೆಯ ನಟಿ ಮಾಳವಿಕಾ ಮೋಹನ್ ಇನ್‌ಸ್ಟಾಗ್ರಾಂನಲ್ಲಿ ಮೇಕಪ್ ಇಲ್ಲದ ಫೋಟೋ ಹಂಚಿಕೊಂಡಿದ್ದಾರೆ. ಶೂಟಿಂಗ್ ಇಲ್ಲದ ಸಮಯಗಳಲ್ಲಿ ತ್ವಚೆ ಉಸಿರಾಡಲು ಬಿಡಬೇಕು ಎಂದಿದ್ದಾರೆ. ನಿಜ ಜೀವನದಲ್ಲಿ ನಮ್ಮನ್ನು ನಾವು ಒಪ್ಪಿಕೊಂಡರೆ ಕ್ಯಾಮೆರಾ ಎದುರು ಒಪ್ಪಿಕೊಳ್ಳುವುದಕ್ಕೆ ಕಷ್ಟ ಆಗೋಲ್ಲ ಎಂದು ಸಲಹೆ ನೀಡಿದ್ದಾರೆ.

ಮಾಳವಿಕಾ ಮಾತು:
'ಚಿತ್ರೀಕರಣ ಇಲ್ಲದ ಸಮಯದಲ್ಲಿ ನಿಮ್ಮ ತ್ವಚೆ ಉಸಿರಾಡಲು ದಿನ ಕೊಡಿ. ನಿನ್ನೆ ನನಗೆ ತುಂಬಾನೇ ಮುಖ್ಯವಾದ ಶೂಟಿಂಗ್ ಇತ್ತು ಎಲ್ಲಿ ಇತ್ತೋ ಏನೋ ಗೊತ್ತಿಲ್ಲ ಎರಡು ದಿನ ಮೊದಲೇ ಈ ಮೊಡವೆ ಬಂತು. ನಾನು ಸದಾ ಆರೋಗ್ಯವಾಗಿರುವ ಆಹಾರನ್ನು ತಿನ್ನುವುದು ಅಲ್ಲದೆ ವರ್ಕೌಟ್ ಮಾಡಿ ನಮ್ಮ ತ್ವಚೆ ಚೆನ್ನಾಗಿ ಕಾಣಿಸಲು ಶ್ರಮ ಹಾಕುವೆ. ನಮ್ಮ inner beauty ಕಾಣಿಸುವುದು ನಮ್ಮ ಮುಖದಲ್ಲಿ ಎನ್ನುತ್ತಾರೆ ಅಲ್ವಾ?' ಎಂದು ಮಾಳವಿಕಾ ಬರೆದುಕೊಂಡಿದ್ದಾರೆ.
ಮಾಲ್ಡೀವ್ಸ್‌ನಲ್ಲಿ ಮಾಳವಿಕ ಮಾಯಾಜಾಲ..ಬಿಕಿನಿ ಲೋಕ!
'ನಿಮ್ಮಲ್ಲರಿಗೂ ನಾನು ಒಂದು ವಿಚಾರ ಹೇಳಬೇಕು ಫೋಟೋಗಳಲ್ಲಿ ನಟಿಯರ ತ್ವಚೆ ಸೂಪರ್ ಆಗಿ ಕಾಣಿಸಬಹುದು ಅವರಿಗೆ ಪರ್ಫೆಕ್ಟ್ ತ್ವಚೆ,ಕೂದಲು,ಉಗುರು,ದೇಹ....ಹೀಗೆ ಒಂದೊಂದೆ ಲಿಸ್ಟ್ ಸೇರಿಕೊಳ್ಳುತ್ತದೆ ಆದರೆ ಸತ್ಯ ಅದಲ್ಲ. ನಿಜ ಹೇಳಬೇಕು ಅಂದ್ರೆ ನಿನ್ನ ನಾನು ಚಿತ್ರೀಕರಣ ಮಾಡಿದ ಜಾಹಿರಾತು ನೀವು ನೋಡಿದರೆ ವಾವ್ ಎಷ್ಟು ಸುಂದರವಾದ ತ್ವಚೆ ಅನಿಸುತ್ತದೆ. ಅದರೆ ಆ ಲುಕ್ ಹಿಂದೆ ಒಂದು ದೊಡ್ಡ ತಂಡವಿದೆ ಈ ಪ್ರಪಂಚಕ್ಕೆ ನನ್ನನ್ನು ಸುಂದರವಾಗಿ ತೋರಿಸುವುದಕ್ಕೆ ಶ್ರಮ ಹಾಕಿದ್ದಾರೆ ಆದರೆ ರಿಯಾಲಿಟಿಯಲ್ಲಿ ಇಷ್ಟೊಂದು ಪರ್ಫೆಕ್ಟ್ ಆಗಿ ಇರುವುದಿಲ್ಲ. ಈ ಪರ್ಫೆಕ್ಟ್ ಅನ್ನೋದು ಮ್ಯಾನ್‌ಮೇಡ್ ಆಲ್ವಾ? ಅದಿಕ್ಕೆ ನೀವು ಕೂಡ ಈ ಪರ್ಫೆಕ್ಟ್ ಲೋಕದಲ್ಲಿ ಕಳೆದು ಹೋಗಬೇಡಿ. ಈ ಚರ್ಮದಕ್ಕೆ ಆಗುವ ಸಣ್ಣ ಪುಟ್ಟ ತೊಂದರೆ ಮೊಡವೆಗಳನ್ನು ನೀವು ನಮಗೆ ಸ್ಪೆಷಲ್ ಗೆಸ್ಟ್ ರೀತಿ ಸ್ವೀಕಾರ ಮಾಡಿ ಆಗ ಆದಷ್ಟು ಬೇಗ ಹೇಳದೆ ಕೇಳದೆ ಹೋಗುತ್ತದೆ. ಇವತ್ತಿಗೆ ಇಷ್ಟು ಸಾಕು, ನಿಮ್ಮ ಜೀವನ ಚೆನ್ನಾಗಿರಲಿ ಎಂದು ವಿಶ್ ಮಾಡುತ್ತೀನಿ' ಎಂದು ಮಾಳವಿಕಾ ಹೇಳಿದ್ದಾರೆ.
