ಮಾಲ್ಡೀವ್ಸ್‌ನಲ್ಲಿ ಮಾಳವಿಕ ಮಾಯಾಜಾಲ..ಬಿಕಿನಿ ಲೋಕ!
ನಟಿ ಮಾಳವಿಕಾ ಮೋಹನನ್ (Malavika Mohanan) ಅವರು ತಮ್ಮ ಮಾಲ್ಡೀವ್ಸ್ ಹಾಲಿಡೇ ವಿವಿಧ ಬಿಕಿನಿ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಸೋಮವಾರ, ಮಾಳವಿಕಾ ಅವರು ನಿಯಾನ್ ನೀಲಿ ಮತ್ತು ಬಿಳಿ ಕಟೌಟ್ ಮೊನೊಕಿನಿಯ ಫೋಟೋಗಳ ಸರಣಿಯನ್ನು ಹಂಚಿಕೊಂಡಿದ್ದಾರೆ. ನಟಿ ತಮ್ಮ ಬಿಕಿನಿ ಲುಕ್ ಮೂಲಕ ಇದು ಇಂಟರ್ನೆಟ್‌ಗೆ ಹವಾ ಸೃಷ್ಟಿ ಮಾಡಿದ್ದಾರೆ.
ಮಾಳವಿಕಾ ಮೋಹನನ್ ಮಾಲ್ಡೀವ್ಸ್‌ನಲ್ಲಿ ತಮ್ಮ ವೇಕೆಷನ್ ಎಂಜಾಯ್ ಮಾಡುತ್ತಿದ್ದಾರೆ. ಪ್ರಸ್ತುತ ಹಾಲಿಡೇಯಲ್ಲಿರುವ ನಟಿ, ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ಮತ್ತು ಅದ್ಭುತವಾದ ಬೀಚ್‌ವೇರ್ ಸಂಗ್ರಹದ ಮೂಲಕ ಫ್ಯಾನ್ಸ್ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ.
ಮಾಲಿವುಡ್ ಚೆಲುವೆ ಮಾಳವಿಕಾ ಫ್ಲರ್ಟೇಷಿಯಸ್ ಬ್ರಾಂಡ್‌ನ ರಿಸ್ಕ್ ಬಿಕಿನಿಯನ್ನು ಆರಿಸಿಕೊಂಡರು. ನೀಲಿ ಮತ್ತು ಲ್ಯಾವೆಂಡರ್ ಕಲರ್‌ನ ಮುಂಭಾಗದಲ್ಲಿ ಹೂಪ್ ಇರುವ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.
Image Credit: Malavika Mohanan Instagram
ಬಿಕಿನಿ ಜೊತೆಗೆ ಲೇಯರ್ ಮಾಡಲು ಆರ್ಗನ್ಜಾ ಡ್ರಾಪ್ ಅನ್ನು ಪೇರ್ ಮಾಡಿಕೊಂಡಿದ್ದಾರೆ. ನಟಿ ಶನೆಲ್ ಬ್ರಾಂಡ್‌ನ ಉದ್ದ ಗೋಲ್ಡನ್ ಚೈನ್ ಮತ್ತು ಬ್ರ್ಯಾಂಡ್‌ನ ಲೋಗೋದೊಂದಿಗೆ ಅಲಂಕೃತವಾದ ಪೆಂಡೆಂಟ್ ಜೊತೆ ಲುಕ್ ಪೂರ್ಣಗೊಳಸಿದ್ದಾರೆ. ಈ ಬಿಕಿನಿ ಬೆಲೆ 6,160 ರೂಪಾಯಿಗಳು!
ತನ್ನ ಸ್ನೇಹಿತರೊಂದಿಗೆ ದ್ವೀಪ ರಾಷ್ಟ್ರದಲ್ಲಿ ಎಂಜಾಯ್ ಮಾಡುತ್ತಿರುವ ಮಾಳವಿಕಾ ಮೋಹನನ್, ವಾರಾಂತ್ಯದಲ್ಲಿ ಪಿಂಕ್ ಮೊನೊಕಿನಿ ಬಕಿನಿ ಜೊತೆ ಮ್ಯಾಚಿಂಗ್ ಬ್ರೀಜಿ ಟ್ಯೂನಿಕ್ ಪೇರ್ ಮಾಡಿರುವ ಸೆಕ್ಸಿ ಫೋಟೋವನ್ನು ಹಂಚಿಕೊಂಡಿದ್ದರು.
ಮತ್ತೊಂದು ಪೋಸ್ಟ್‌ನಲ್ಲಿ, ನಟಿ ಕೆಂಪು ಮತ್ತು ಬಿಳಿ ಮುದ್ರಿತ ಬಿಕಿನಿಯಲ್ಲಿ ಮಾಲ್ಡೀವ್ಸ್‌ನ ನೀರಿನಲ್ಲಿ ತೇಲುತ್ತಿದ್ದಾರೆ. ಈ ಫೊಟೋಗೆ 'ಫ್ಲೋಟ್' ಎಂಬ ಶೀರ್ಷಿಕೆ ನೀಡಿದ್ದು, ಆಕೆಯ ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬದಿಂದ ಸಖತ್ ಕಾಮೆಂಟ್‌ಗಳನ್ನು ಗಳಿಸಿದೆ, ಕೆಲವರು ಅವರನ್ನು ಮತ್ಸ್ಯಕನ್ಯೆ ಎಂದಿದ್ದಾರೆ.
ಮಾಳವಿಕಾ ಮೋಹನನ್ ಅವರು ಕಿತ್ತಳೆ ಮತ್ತು ಬಿಳಿ ಈಜುಡುಗೆ ಧರಿಸಿ, ಅದೇ ರೀತಿಯ ಪ್ರಿಟೆಂಡ್ ಟ್ಯೂನಿಕ್‌ನೊಂದಿಗೆ ಪೇರ್ ಮಾಡಿಕೊಂಡು ಲುಕ್ ಪೂರ್ಣಗಳಿಸಿದ್ದಾರೆ. ಈ ಫೋಟೋಗೆ My sky is blue-r than yours ಎಂದು ಶೀರ್ಷಿಕೆ ನೀಡಿ ಪೋಸ್ಟ್ ಮಾಡಲಾಗಿದೆ.
ಪ್ರಸ್ತುತ ಧನುಷ್ ನಟಿಸಿರುವ ಚಿತ್ರ 'ಮಾರನ್' ಬಿಡುಗಡೆಗಾಗಿ ನಟಿ ಕಾಯುತ್ತಿದ್ದಾರೆ. ಐದು ದಿನಗಳ ಹಿಂದೆ ಹಳದಿ ಟೋಪಿಯೊಂದಿಗೆ ಹಳದಿ ಬಿಕಿನಿಯಲ್ಲಿ ಮಾಲ್ಡೀವ್ಸ್‌ನ ತನ್ನ ಪ್ರವಾಸದ ಮೊದಲ ಫೋಟೊ ಶೇರ್ ಮಾಡಿಕೊಂಡಿದ್ದರು
ಫಾಲಿಂಗ್ ಇನ್ ಲವ್ ವಿತ್ ಯು ಎಂದು ಕ್ಯಾಪ್ಷನ್ ನೀಡಿದ ತಮ್ಮ ಹಾಲಿಡೇಯ ವೀಡಿಯೊವನ್ನು ಸಹ ಪೋಸ್ಟ್ ಮಾಳವಿಕಾ ಮೋಹನನ್ ಮಾಡಿದ್ದಾರೆ. ನಿರ್ದೇಶಕ ಲೋಕೇಶ್ ಕನಕರಾಜ್ ಅವರ 'ಮಾಸ್ಟರ್' ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.