ಬರೀ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತೀರಾ, ಬಿಕಿನಿ ಫೋಟೋ ಎಲ್ಲಿ ಎಂದು ಹೇಳಿದವನಿಗೆ ಉತ್ತರ ಕೊಟ್ಟ ಅನುಮಪಾ. 

ಮಾಲಯಾಳಂ (Mollywood) ಚಿತ್ರರಂಗದ ಮುದ್ದು ಮುಖದ ಚೆಲುವೆ ಅನುಪಮಾ ಪರಮೇಶ್ವರಿ ( Anupama Parameswaran) ಸ್ಟಾರ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ ಬಿಡುವು ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ (Netizen) ಜೊತೆ ಮಾತನಾಡುತ್ತಾರೆ. ಅಭಿಮಾನಿಗಳು ಮುಂದಿಡುವ ಡಿಮ್ಯಾಂಡ್‌ಗಳಿಗೆ ಉತ್ತರ ನೀಡುತ್ತಾರೆ. ಎಲ್ಲರಿಗೂ ತಪ್ಪದೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕೆಲವರು ಹೇಳಿದ್ದಿದೆ. 

ಇನ್‌ಸ್ಟಾಗ್ರಾಂನಲ್ಲಿ (Instagram) Ask Me Anything ಎನ್ನುವ ಆಯ್ಕೆ ಇದೆ. ಇದನ್ನು ಟ್ರೆಂಡ್ ಮಾಡಿದ್ದು ಸೆಲೆಬ್ರಿಟಿಗಳು (Celebrities). ತಮ್ಮ ಫಾಲೋವರ್ಸ್‌ಗಿರುವ ಪ್ರಶ್ನೆಗಳನ್ನು ಇಲ್ಲಿ ಬರೆದು ಹಾಕುತ್ತಾರೆ. ಅದನ್ನು ಮತ್ತೆ ತಮ್ಮ ಸ್ಟೇಟಸ್‌ಗೆ (Status) ಶೇರ್ ಮಾಡಿಕೊಂಡು ಉತ್ತರ ನೀಡುತ್ತಾರೆ. ಹಾಗೆಯೇ ಅನುಪಮಾ ಕೂಡ ಬಿಡುವಿದ್ದು ಪ್ರಶ್ನೆ ಕೇಳಿ ಎಂದಿದ್ದಾರೆ. 

ಸಿನಿಮಾ, ಪ್ರಾಜೆಕ್ಟ್‌, ಹೀರೋಗಳ ಜೊತೆ ಫೋಟೋ ಕೇಳುತ್ತಿದ್ದ ಅಭಿಮಾನಿಗಳ ನಡುವೆ ಒಬ್ಬ ಪುಂಡ ನಿಮ್ಮ ಬಿಕಿನಿ (Bikini) ಫೋಟೋ ಹಂಚಿಕೊಳ್ಳಿ. ಯಾಕೆ ಸದಾ ಟ್ರೆಡಿಷನ್‌ (Traditional wear) ವೇರ್‌ನಲ್ಲಿ ಇರುತ್ತೀರಾ ಎಂದು ಕೇಳಿದ್ದಾನೆ. ಬೇಕೆಂದು ಕಾಲೆಳೆಯವ ಜನರ ಪ್ರಶ್ನೆಯನ್ನು ಕೆಲವರು ಬೇಕೆಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಅನುಪಮಾ ಅದನ್ನು ಶೇರ್ ಮಾಡಿಕೊಂಡು ಉತ್ತರ ನೀಡಿದ್ದಾರೆ. 

ಬೆತ್ತಲೆ ಫೋಟೋ ಹಂಚಿಕೊಂಡು ಬಾಡಿ ಶೇಮಿಂಗ್‌ಗೆ No ಹೇಳಿ ನಟಿ ಅನುಪಮಾ!

'ಬಿಕಿನಿ ಫೋಟೋ ಬೇಕಾ? ನಿಮ್ಮ ವಿಳಾಸ (Address) ಕಳುಹಿಸಿ ನಾನು ಫೋಟೋ ಕಳುಹಿಸುತ್ತೇನೆ. ಅದಕ್ಕೆ ಫ್ರೇಮ್ ಹಾಕಿಸಿ ನಿಮ್ಮ ಮನೆಯ ಗೋಡೆಯಲ್ಲಿ ಹಾಕಿಕೊಳ್ಳಿ,' ಎಂದು ಹೇಳಿದ್ದಾರೆ. ಅನುಪಮಾ ಅವರ ಪ್ರತಿಕ್ರಿಯೆ ಎಲ್ಲೆಡೆ ವೈರಲ್ ಆಗುತ್ತಿದೆ. ಅಭಿಮಾನಿಗಳು ಇದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ನೀವು ಮೇಡಂ ನಿಜವಾಗ್ಲೂ ಬೋಲ್ಡ್ ಹುಡುಗಿ ಎಂದಿದ್ದಾರೆ. 

2015ರಲ್ಲಿ ಪ್ರೇಮಂ (Premam) ಚಿತ್ರದ ಮೂಲಕ ಬಣ್ಣದ ಜರ್ನಿ ಆರಂಭಿಸಿದ ನಟಿ ಅನುಪಮಾ ತಮಿಳು, ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲೂ (Sandalwood) ತೊಡಗಿಸಿಕೊಂಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜೊತೆ ನಟಸಾರ್ವಭೌಮ (Natasaarvabhowma)ಚಿತ್ರದಲ್ಲಿಯೂ ಶ್ರುತಿ ಪಾತ್ರದ ಮೂಲಕ ಕನ್ನಡಿಗರ ಮನಸ್ಸು ಗೆದ್ದರು. ಸದ್ಯ ನಾಲ್ಕು ತೆಲುಗು ಸಿನಿಮಾ ಹಾಗೂ ಒಂದು ತಮಿಳು ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ.