ಕಾಶ್ಮೀರದಿಂದ ಕೇರಳಗೆ ಹಿಂದಿರುಗಿರುವ ನಟಿ ಆಹಾನಾ ಕೃಷ್ಣ ಈಗ ಯುಟ್ಯೂಬ್‌ನಲ್ಲಿ ತಮ್ಮ ಬ್ಯಾಗಲ್ಲಿ ಏನೆಲ್ಲಾ ಇವೆ ಎಂದು ರಿವೀಲ್ ಮಾಡಿದ್ದಾರೆ... 

ಮಲಯಾಳಂ (Mollywood) ಚಿತ್ರರಂಗದ ಸಿಂಪಲ್ ಆ್ಯಂಡ್ ಹಂಬಲ್ ನಟಿ ಆಹಾನ ಕೃಷ್ಣ (Ahaana Krishna) ನಟಿಸಿರುವುದು ಕಡಿಮೆ ಸಿನಿಮಾಗಳಾದರೂ ಸೋಷಿಯಲ್ ಮೀಡಿಯಾ (Social Media) ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದಾರೆ. ತಂದೆ ಮತ್ತು ತಾಯಿ ಇಬ್ಬರೂ 80's ಮತ್ತು 90's ಕಾಲದ ಸ್ಟಾರ್ಸ್. ಕೇರಳದಲ್ಲಿ ಇವರ ಕುಟುಂಬ ಮತ್ತೊಂದು ದಾಖಲೆ ಮಾಡಿದೆ, ಅದುವೇ ಕುಟುಂಬದ ಪ್ರತಿಯೊಬ್ಬ ಸದಸ್ಯನೂ ಯುಟ್ಯೂಬ್ ಚಾನೆಲ್ (Youtube Channel) ಹೊಂದಿದ್ದು, ಒಟ್ಟಿಗೆ ಸಿಲ್ವರ್ ಮತ್ತು ಗೋಲ್ಡನ್ ಬಟನ್ ಪಡೆದುಕೊಂಡಿದ್ದಾರೆ. ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಎಲ್ಲರೂ ವ್ಲಾಗ್ (Vlog) ಮಾಡುತ್ತಾರೆ. 

ಕೆಲವು ದಿನಗಳ ಹಿಂದೆ ಕಾಶ್ಮೀರ (Kashmir) ಪ್ರವಾಸ ಮಾಡಿದ ಆಹಾನ ಕೃಷ್ಣ ಅಲ್ಲಿಂದ ಹೊರಡುವ ದಿನ ತಮ್ಮ ಬ್ಯಾಗ್‌ನಲ್ಲಿ ಏನೆಲ್ಲಾ ಇವೆ ಎಂಬುದನ್ನು ರಿವೀಲ್ ಮಾಡಿದ್ದಾರೆ. ಆಹಾನ್ ಹ್ಯಾಂಡ್‌ಬ್ಯಾಗ್ ಸೀಕ್ರೆಟ್ (Handbag secret) ತಿಳಿದುಕೊಳ್ಳಬೇಕು ಎಂದು ಅನೇಕ ಬಾರಿ ಅಭಿಮಾನಿಗಳು ಡಿಮ್ಯಾಂಡ್ ಮಾಡಿದ್ದರು. ಆದರೆ ಅದಕ್ಕೆ ಕಾಲವೀಗ ಕೂಡಿ ಬಂದಿದ್ದು ಟ್ರ್ಯಾವೆಲ್ (Travel) ಮಾಡುವಾಗ ಏನೆಲ್ಲಾ ಇರುತ್ತವೆ, ಎಂದು ತೋರಿಸಿದ್ದಾರೆ. 

- ಚಾಕೋಲೇಟ್ (Chocolate): ಪ್ರವಾಸ ಮಾಡುವಾಗ ನಾನು ಚಾಕೋಲೆಟ್ ಕ್ಯಾರಿ ಮಾಡ್ತೀನಿ. ಆದರೆ ಈ ಟ್ರಿಪ್‌ನಲ್ಲಿ ಇದನ್ನು ಬಳಸಿಲ್ಲ.
- ಕಿವಿ ಓಲೆ (Earring): ಸಾಮಾನ್ಯವಾಗಿ ಒಂದು ಜೊತೆ ಓಲೆ ಇರುತ್ತದೆ. ಫೋಟೋ ತೆಗೆದುಕೊಳ್ಳುವ ಸಮಯದಲ್ಲಿ ಸ್ವಲ್ಪ ಗ್ರಾಂಡ್ ಆಗಿ ಕಾಣಿಸಬೇಕು ಅಂದ್ರೆ ಇದನ್ನು ಬಳಸುವೆ.
- ಹೇರ್‌ ಬ್ಯಾಂಡ್‌ (Hair band): ನನ್ನ ಜೀವನದಲ್ಲಿ ತುಂಬಾ ಮುಖ್ಯ ಪಾತ್ರ ವಹಿಸುತ್ತದೆ. ಎಲ್ಲರಂತೆ ನಾನು ತುಂಬಾ ಕಳದುಕೊಳ್ಳುವೆ. ಅದಕ್ಕೆ ಹೆಚ್ಚಿಗೆ ಇಟ್ಟುಕೊಂಡಿರುವೆ. ಹೀಗೆ ತಮ್ಮ ಸಂಪೂರ್ಣ ಬ್ಯಾಗ್ ವಿಡಿಯೋದಲ್ಲಿ ಸುಮಾರು 10ಕ್ಕೂ ಹೆಚ್ಚು ಹೇರ್‌ ಬ್ಯಾಂಡ್‌ಗಳನ್ನು ವೀಕ್ಷಕರಿಗೆ ತೋರಿಸಿದ್ದಾರೆ. 

Ahaana Krishna In Kashmir: ಕಾಶ್ಮೀರ ಟ್ರಿಪ್ಪಲ್ಲಿ ಸೂರ್ಯಕಾಂತಿ, ಕಾಟನ್ ಕ್ಯಾಂಡಿ ಕ್ರಿಯೇಟ್‌ ಮಾಡಿದ ನಟಿ!

- ವಿಕ್ಸ್ ಚಾಕೋಲೇಟ್ : ಕಾಶ್ಮೀರದಲ್ಲಿ ಹವಾಮಾನ ಕೋಲ್ಡ್ ಇರುವ ಕಾರಣ ಗಂಟಲಿಗೆ ಯಾವುದೇ ತೊಂದರೆ ಆಗ ಬಾರದು ಎಂದು ಇಷ್ಟೊಂದು ಇಟ್ಟುಕೊಂಡಿರುವೆ. 
- Ointment: ಈ ಚಳಿಗೆ ಸ್ಕಿನ್ ತುಂಬಾನೇ ಡ್ರೈ ಆಗುತ್ತದೆ ಅದಿಕ್ಕೆ ಅಮ್ಮ ಈ ಆಯಿಂಟ್‌ಮೆಂಟ್ ಕೊಟ್ಟಿದ್ದಾರೆ. ಇದು ನನಗೆ ವರ್ಕ್ ಆಗುತ್ತದೆ, ನೀವು ಒಮ್ಮೆ ಬಳಸಬೇಕು. 
- ಆರ್ಗ್ಯಾನಿಕ್ ಪರ್ಫ್ಯೂಮ್ (Organic Perfume): ಎರಡು ಆರ್ಗ್ಯಾನಿಕ್ ಪರ್ಫ್ಯೂಮ್‌ ಇದೆ, ಒಂದು ಕಳೆದುಕೊಂಡೆ ಮತ್ತೊಂದು ಇರುತ್ತದೆ. 
- ಟೋಪಿ (Hat): ಕಿವಿ ಬೆಚ್ಚಗೆ ಇರಬೇಕು ಎಂದು ಟೋಪಿ. ಸ್ಟೈಲ್‌ಗೆ ಮಾತ್ರವಲ್ಲ ನಿಜಕ್ಕೂ ಉಪಯೋಗಕ್ಕೆ ಬರುತ್ತದೆ.
- ಹ್ಯಾಂಡ್ ಗ್ಲೌಸ್: ಚಳಿ ತಡೆದುಕೊಳ್ಳುವುದು ತುಂಬಾನೇ ಕಷ್ಟ. ಅದಿಕ್ಕ ಎರಡು ರೀತಿ ಗ್ಲೌಸ್ ತೆಗೆದುಕೊಂಡು ಬಂದಿರುವೆ.
- ನೀರು ಬಾಟಲ್ (Water Bottle)
- ಕನ್ನಡಕ
- ಕೂಲಿಂಗ್ ಗ್ಲಾಸ್ ಮತ್ತು ಲೆನ್ಸ್‌
- Tissue Paper
- ಇಯರ್ ಫೋನ್, ಐ ಪಾಡ್ ಮತ್ತು ಕನೆಕ್ಟರ್ ಕಾರ್ಡ್.
- ಎರಡು ಜೊತೆ ಸಾಕ್ಸ್ (socks)
- ಕವರ್: ಸೆಕ್ಯೂರಿಟಿ ಚಕ್ ಬಳಿ ಫೋನ್‌ ಚೆಕ್ ಮಾಡುತ್ತಾರೆ. ಟ್ರೇನಲ್ಲಿ ಇಡುವುದಕ್ಕೆ ನನಗೆ ಭಯ. ಯಾರು ಬೇಕಿದ್ದರೂ ತೆಗೆದುಕೊಂಡ ಓಡಿ ಹೋಗಬಹುದು. ಅದಕ್ಕೆ ಈ ಕವರ್‌ನಲ್ಲಿ ಹಾಕಿ ನಾನು ಇಡುವೆ, ಕವರ್‌ನಲ್ಲಿ ಇದ್ದರೆ ಯಾರೂ ಮುಟ್ಟುವುದಿಲ್ಲ.
- ಸ್ಕಿನ್ ಕ್ರೀಮ್
- ಲಿಪ್‌ಸ್ಟಿಕ್
- ಬ್ರಶ್
- ಸ್ಯಾನಿಟೈಜರ್ (Sanitizer)
- ಐ ಮಾಸ್ಕ್‌
- ಟ್ರ್ಯಾವಲ್ ಜರ್ನಲ್
- ಟೀ ಬ್ಯಾಗ್

ಹೀಗೆ ತಮ್ಮ ಬ್ಯಾಗ್‌ನಲ್ಲಿರುವುದನ್ನು ಒಂದೊಂದಾಗಿ ತೋರಿಸಿದ್ದಾರೆ. ಕಾಶ್ಮೀರದಲ್ಲಿ ಪ್ರಯಾಣ ಮಾಡುವಾಗ ಆಹಾನ ತಮ್ಮ ಫೋನ್ ಕಳೆದುಕೊಂಡಿದ್ದಾರೆ. ಎಲ್ಲಿ ಯಾರನ್ನು ಕೇಳುವುದು ಎಂದು ಚಿಂತಿಸಿ ಕುಳಿತಿದ್ದಾಗ, ಅದರಿಂದ ಯಾರೋ ತಮ್ಮ ಲೋಕಲ್ ಕಾರ್ ಡ್ರೈವರ್‌ಗೆ ಕರೆ ಮಾಡಿ ಫೋನ್‌ ಬಿಟ್ಟಿದ್ದೀರಿ ಎಂದು ತಿಳಿಸಿದ್ದಾರೆ. ಆಗ ಅವರು ಮತ್ತೆ ಪ್ರಯಾಣ ಮಾಡಿ ತಮ್ಮ ಫೋನ್ ಹಿಂಪಡೆದುಕೊಂಡರಂತೆ.

YouTube video player