Asianet Suvarna News Asianet Suvarna News

October 30 : ಆಹಾನ ಕೃಷ್ಣ ನಿರ್ದೇಶನ, ನಟನೆಯ ಮ್ಯೂಸಿಕ್ ವಿಡಿಯೋ 'ತೊನ್ನಾಲ್' ಬಿಡುಗಡೆ ಸಿದ್ಧ

ಬರ್ತಡೇ ದಿನ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟ ಆಹಾನ ಕೃಷ್ಣ. ಮ್ಯೂಸಿಕಲ್ ಆಲ್ಬಂನಲ್ಲಿ ಶೆಫ್ ಲುಕ್.... 

Mollywood Ahaana Krishna debut direction Thonnal release on October 30th vcs
Author
Bangalore, First Published Oct 20, 2021, 4:33 PM IST
  • Facebook
  • Twitter
  • Whatsapp

ಮಲಯಾಳಂ ಚಿತ್ರರಂಗದ (Mollywood) ಸಿಂಪಲ್ ಚೆಲುವೆ ಆಹಾನ ಕೃಷ್ಣ (Ahaana Krishna) ತಮ್ಮ 26ನೇ ಹುಟ್ಟುಹಬ್ಬದ ದಿನ ಅಭಿಮಾನಿಗಳ ಜೊತೆ ವಿಶೇಷ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಇಷ್ಟು ದಿನ ನಟಿಯಾಗಿ ನೋಡಿದ್ದೀರಿ, ಫೆಮಿನಿಸ್ಟ್‌ (Feminist) ಆಗಿ ನೋಡಿದ್ದೀರಿ, Influencer ಆಗಿ ನೋಡಿದ್ದೀರಿ. ಇದೇ ಮೊದಲ ಬಾರಿ ಡೈರೆಕ್ಟರ್ ಪಾತ್ರ ವಹಿಸುತ್ತಿದ್ದಾರೆ. 

ಹೌದು! ಆಹಾನಾ ಕೃಷ್ಣ 'ತೊನ್ನಾಲ್' (Thonnal) ಶೀರ್ಷಿಕೆಯ ಮ್ಯೂಸಿಕಲ್ ಆಲ್ಬಂನಲ್ಲಿ (Musical Album) ನಟಿಸಿ, ಮೊದಲ ಬಾರಿ ನಿರ್ದೇಶನ ಮಾಡುತ್ತಿದ್ದಾರೆ. ಬಿಡುಗಡೆ ಮಾಡಿರುವ ಪೋಸ್ಟರ್‌ನಲ್ಲಿ ಆಹಾನ್ ಐಷಾರಾಮಿ ಹೋಟೆಲ್‌ನ (Hotel) ಅಡುಗೆ ಮನೆಯಲ್ಲಿ Chef ವೇಷ ಧರಿಸಿ ನಿಂತಿದ್ದಾರೆ. ಕೈಯಲ್ಲಿ ಏನೋ ಹಿಡಿದುಕೊಂಡು ಕಲ್ಪನೆ ಮಾಡುತ್ತಿರುವ ಹಾಗೆ ಪೋಸ್ ನೀಡಿದ್ದಾರೆ. 

ಚಿಕನ್ ಪಾಕ್ಸ್‌ಗೆ ಗಾಬರಿ ಬೇಡ, ಏನೇ ಮಾರ್ಕ್‌ ಇದ್ದರೂ ಹೋಗುತ್ತದೆ: ನಟಿ ಆಹಾನ ಕೃಷ್ಣ

' ನಿಮ್ಮ ಮುಂದೆ ತೊನ್ನಾಲ್. ನನ್ನ ಚೊಚ್ಚಲ ನಿರ್ದೇಶನ (Debut Direction). 6 ತಿಂಗಳ ಹಿಂದೆ ನನ್ನ ತಲೆಯಲ್ಲಿದ್ದ ಸಣ್ಣ ಬೀಜಕ್ಕೆ (Small Seed) ನಾವು ಪ್ರೀತಿ, ಆರೈಕೆ ಮತ್ತು ಪೋಷಣೆ ಮಾಡಿ ಅದು ಬೆಳೆಯುವುದನ್ನು ಈಗ ಒಂದು ಜೀವವಾಗಿ ನಿಂತಿದೆ. ಅಪೇಕ್ಷೆ ಇಲ್ಲ ಅಂದರೆ ಇದು ನನ್ನ ಮೊದಲ ಮಗು ಎಂದು ಕರೆಯುವುದಕ್ಕೆ ಇಷ್ಟ ಪಡುತ್ತೇನೆ. ನಾನು ತುಂಬಾನೇ ಪ್ರೀತಿಸವ ಜನರು ಒಂದಾಗಿ ಕೆಲಸ ಮಾಡಿರುವ ಪ್ರಾಜೆಕ್ಟ್‌ ಇದಾಗಿದ್ದು, ಅಕ್ಟೋಬರ್ 30ರಂದು ಬಿಡುಗಡೆ ಮಾಡುತ್ತಿದ್ದೇವೆ. ನಮ್ಮ ಹೃದಯದಿಂದ ಹೊರ ಬಂದು ನಿಮ್ಮ ಹೃದಯದಲ್ಲಿ ಜಾಗ ಪಡೆದು ಕೊಳ್ಳುತ್ತದೆ ಎಂದು ಭಾವಿಸಿರುವೆ,' ಎಂದು ಆಹಾನ ಬರೆದುಕೊಂಡಿದ್ದಾರೆ. 

Mollywood Ahaana Krishna debut direction Thonnal release on October 30th vcs

26ನೇ ಹುಟ್ಟುಹಬ್ಬವನ್ನು ತಾಯಿ ಸಿಂಧು ಕೃಷ್ಣ (Sindhi Krishna) ಸ್ನೇಹಿತರ ಜೊತೆ ಚೆನ್ನೈನಲ್ಲಿ (Chennai) ಆಚರಿಸಿಕೊಂಡಿದ್ದಾರೆ. ಯುಟ್ಯೂಬ್‌ನಲ್ಲಿ (Youtube) ಆ್ಯಕ್ಟೀವ್ ಆಗಿರುವ ಆಹಾನ ತಮ್ಮ ಬರ್ತಡೇ (Birthday) ಸೆಲೆಬ್ರೆಷನ್‌ ಹೇಗಿತ್ತು, ಯಾವೆಲ್ಲಾ ರೀತಿಯ ಗಿಫ್ಟ್‌ ಬಂತು ಏನೆಲ್ಲಾ ಮಾಡಿದ್ದರು ಎಂದು ವಿಡಿಯೋದಲ್ಲಿ ತೋರಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಲೈವ್ ಬರುವ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿ, ತಮ್ಮ ಪ್ರಾಜೆಕ್ಟ್‌ ಬಗ್ಗೆ ಚರ್ಚೆ ಮಾಡಿದ್ದಾರೆ. 

ಖ್ಯಾತ ನಟನ ನಾಲ್ವರು ಪುತ್ರಿಯರಲ್ಲಿ ಈಕೆಗೆ ಇದ್ದಾರೆ ಮಿಲಿಯನ್ ಫಾಲೋವರ್ಸ್!

ಕೆಲವು ತಿಂಗಳ ಹಿಂದೆ ಆಹಾನಾ ತಮ್ಮ ಸೌಂದರ್ಯದ ಬಗ್ಗೆ ಯಾರಿಗೂ ಗೊತ್ತಿರದ ಸತ್ಯವೊಂದನ್ನು ಹಂಚಿಕೊಂಡಿದ್ದಾರೆ. ಚಿಕನ್ ಪಾಕ್ಸ್‌ನಿಂದ (Chicken Pox) ಮುಖದ ಮೇಲೆ ಆದ ಗಾಯಗಳನ್ನು ಹೇಗೆ ಸರಿ ಮಾಡಿಕೊಂಡರು, ಏನೆಲ್ಲಾ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಬರೆದುಕೊಂಡು ಅನೇಕರಿಗೆ ಸ್ಫೂರ್ತಿ ಆಗಿದ್ದಾರೆ.

Follow Us:
Download App:
  • android
  • ios