Miss India World 2023: ಕಿರೀಟ ಗೆದ್ದ ನಂದಿನಿ ಗುಪ್ತಾ ನಟಿ ಪ್ರಿಯಾಂಕಾ-ರತನ್ ಟಾಟಾ ಹೆಸರೇಳಿದ್ದೇಕೆ?

ಮಿಸ್ ಇಂಡಿಯಾ 2023 ಕಿರೀಟ ಗೆದ್ದ ನಂದಿನಿ ಗುಪ್ತಾ ಅವರು ಪ್ರಿಯಾಂಕಾ ಚೋಪ್ರಾ ಮತ್ತು ರತನ್ ಟಾಟಾ ತನ್ನ ಜೀವನದ ಸ್ಫೂರ್ತಿ ಎಂದು ಹೇಳಿದ್ದಾರೆ. 

Miss India 2023 Nandini Gupta says Priyanka Chopra and Ratan Tata inspiring people in her life sgk

ಮಿಸ್ ಇಂಡಿಯಾ 2023 ಪಟ್ಟ ಮುಡಿಗೇರಿಸಿಕೊಂಡ ರಾಜಸ್ಥಾನದ ಕೋಟಾ ಮೂಲದ ನಂದಿನಿ ಗುಪ್ತಾ ಪ್ರಿಯಾಂಕಾ ಚೋಪ್ರಾ ಮತ್ತು ರತನ್ ಟಾಟಾ ಹೆಸರನ್ನು ಹೇಳಿದ್ದಾರೆ. 19 ವರ್ಷದ ನಂದಿನಿ ಅಸ್ಕರ್ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2023 ಸ್ಪರ್ಧೆಯಲ್ಲಿ ಕಿರೀಟವನ್ನು ಗೆದ್ದರು. ದೆಹಲಿಯ ಶ್ರೇಯಾ ಪೂಂಜಾ ಮೊದಲ ರನ್ನರ್ ಅಪ್ ಆದರೆ ಮಣಿಪುರದ ತೌನೊಜಮ್ ಸ್ಟ್ರೆಲಾ ಲುವಾಂಗ್ 2 ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆಲ್ಲುವ ಮೊದಲು ನಂದಿನಿ ಮಿಸ್ ಇಂಡಿಯಾ ಸಂಸ್ಥೆಗೆ ಸಂದರ್ಶನ ನೀಡಿದರು. ಅಲ್ಲಿ ಅವರು ತಮ್ಮ ಜೀವನದ ಸ್ಫೂರ್ತಿದಾಯಕ ಮತ್ತು ಪ್ರಭಾವಿ ವ್ಯಕ್ತಿಗಳು ಯಾರು ಎಂದು ಬಹಿರಂಗ ಪಡಿಸಿದರು. ಪ್ರಿಯಾಂಕಾ ಚೋಪ್ರಾ ಮತ್ತು ರತನ್ ಟಾಟಾ ಹೆಸರನ್ನು ಹೇಳಿದ್ದಾರೆ. 

ನಂದಿನಿ ಗುಪ್ತಾ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ನಂದಿನಿ ತನ್ನ ಜೀವನದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳು ಪ್ರಿಯಾಂಕಾ ಮತ್ತು ರತನ್ ಟಾಟಾ ಎಂದು ಹೇಳಿದ್ದಾರೆ. 'ನನ್ನ ಜೀವನದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ರತನ್ ಟಾಟಾ ಸರ್, ಅವರು ಮಾನವೀಯತೆಗಾಗಿ ಎಲ್ಲವನ್ನೂ ಮಾಡುತ್ತಾರೆ ಮತ್ತು ಅದರಲ್ಲಿ ಹೆಚ್ಚಿನದನ್ನು ಚಾರಿಟಿಗೆ ದಾನ ಮಾಡುತ್ತಾರೆ. ಲಕ್ಷಾಂತರ ಜನರು ಪ್ರೀತಿಸುತ್ತಾರೆ ಮತ್ತು ಸರಳವ್ಯಕ್ತಿ' ಎಂದು ನಂದಿನಿ ಹೇಳಿದರು. 

ಪ್ರಿಯಾಂಕಾ ಚೋಪ್ರಾ ಸ್ಫೂರ್ತಿ ನೀಡಿದ ಬ್ಯೂಟಿ ಕ್ವೀನ್ ಎಂದು ನಂದಿನಿ ಹೇಳಿದರು, 'ಮಿಸ್ ವರ್ಲ್ಡ್ 2000 ಪ್ರಿಯಾಂಕಾ ಚೋಪ್ರಾ ಅವರು ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರ ಮಟ್ಟದಲ್ಲಿ ಖ್ಯಾತಿಗಳಿಸಿದ್ದರು.  ಹಾಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡಿದರು. ನಟಿಯಾಗಿ ಮಿಂಚಿದರು. ಅವರು ಅನೇಕ ಜನರಿಗೆ ಪ್ರೇರಣೆಯಾಗಿದ್ದಾರೆ. ಉತ್ತಮ ಹಾಸ್ಯ ಪ್ರಜ್ಞೆಯನ್ನು ಹೊಂದಿದ್ದಾರೆ ಮತ್ತು ಎತ್ತರಕ್ಕೆ ಬೆಳೆದಂತೆ ಹೆಚ್ಚು ಉತ್ಸಾಹ ಹೊಂದಿದ್ದಾರೆ' ಎಂದು ಹೇಳಿದ್ದಾರೆ.

Femina Miss India World 2023: ಕಿರೀಟ ಗೆದ್ದ ರಾಜಸ್ಥಾನದ ನಂದಿನಿ ಗುಪ್ತಾ

ನಂದಿನಿ ಗುಪ್ತಾ 10 ವರ್ಷದವರಾಗಿದ್ದಾಲೆ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸುವ ಕನಸುಕಂಡಿದ್ದರಂತೆ. ಈ ಬಗ್ಗೆ ಸಹ ಮಾತನಾಡಿದ್ದಾರೆ. '10 ವರ್ಷ ವಯಸ್ಸಿನಲ್ಲೇ ನಾನು ಅದರ ಸೌಂದರ್ಯ ಕಿರೀಟವನ್ನು ಗೆಲ್ಲುವ ಕನಸು ಕಂಡಿದ್ದೆ, ನಾನು ಯಾವಾಗಲೂ ಫೆಮಿನಾ ಮಿಸ್ ಇಂಡಿಯಾದಲ್ಲಿ ಸ್ಪರ್ಧಿಸಲು ಬಯಸಿದ್ದೆ. ಆದರೆ ನಾನು ದೊಡ್ಡವಳಾಗುತ್ತಿದ್ದಂತೆ ಕಿರೀಟಕ್ಕಿಂತ ಹೆಚ್ಚು ಜರ್ನಿ ಬಗ್ಗೆ ತಿಳಿದುಕೊಂಡೆ. ಎತ್ತರಕ್ಕೆ ಹಾರಲು ಈ ವಿದಿಕೆ ರೆಕ್ಕೆಗಳನ್ನು ನೀಡುತ್ತೆ. ಮಿಸ್ ಇಂಡಿಯಾ ಸಾಮಾನ್ಯ ಹುಡುಗಿಯನ್ನು ಅಸಾಧಾರಣವಾಗಿ ಮಾಡುವ ಸ್ಥಳವಾಗಿದೆ, ಸರಳತೆಯನ್ನು ಹಾಗೇ ಉಳಿಸುತ್ತದೆ'ಎಂದು ಹೇಳಿದ್ದಾರೆ. ನಂದಿನಿ ಸದ್ಯ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ವಿಶ್ವ ಸುಂದರಿ ಸ್ಪರ್ಧೆಯ 71 ನೇ ಆವೃತ್ತಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಐಶ್ವರ್ಯ ರೈ ಮಿಸ್‌ ಇಂಡಿಯಾ ಗೆಲ್ಲಲು ಅರ್ಹರಲ್ಲ; ಸುಶ್ಮಿತಾ ಸೇನ್ ಶಾಕಿಂಗ್ ಹೇಳಿಕೆ

ನಂದಿನಿ ಗುಪ್ತಾ 10 ವರ್ಷದವರಾಗಿದ್ದಾಲೆ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸುವ ಕನಸುಕಂಡಿದ್ದರಂತೆ. ಈ ಬಗ್ಗೆ ಸಹ ಮಾತನಾಡಿದ್ದಾರೆ. '10 ವರ್ಷ ವಯಸ್ಸಿನಲ್ಲೇ ನಾನು ಅದರ ಸೌಂದರ್ಯ ಕಿರೀಟವನ್ನು ಗೆಲ್ಲುವ ಕನಸು ಕಂಡಿದ್ದೆ, ನಾನು ಯಾವಾಗಲೂ ಫೆಮಿನಾ ಮಿಸ್ ಇಂಡಿಯಾದಲ್ಲಿ ಸ್ಪರ್ಧಿಸಲು ಬಯಸಿದ್ದೆ. ಆದರೆ ನಾನು ದೊಡ್ಡವಳಾಗುತ್ತಿದ್ದಂತೆ ಕಿರೀಟಕ್ಕಿಂತ ಹೆಚ್ಚು ಜರ್ನಿ ಬಗ್ಗೆ ತಿಳಿದುಕೊಂಡೆ. ಎತ್ತರಕ್ಕೆ ಹಾರಲು ಈ ವಿದಿಕೆ ರೆಕ್ಕೆಗಳನ್ನು ನೀಡುತ್ತೆ. ಮಿಸ್ ಇಂಡಿಯಾ ಸಾಮಾನ್ಯ ಹುಡುಗಿಯನ್ನು ಅಸಾಧಾರಣವಾಗಿ ಮಾಡುವ ಸ್ಥಳವಾಗಿದೆ, ಸರಳತೆಯನ್ನು ಹಾಗೇ ಉಳಿಸುತ್ತದೆ'ಎಂದು ಹೇಳಿದ್ದಾರೆ. ನಂದಿನಿ ಸದ್ಯ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ವಿಶ್ವ ಸುಂದರಿ ಸ್ಪರ್ಧೆಯ 71 ನೇ ಆವೃತ್ತಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Latest Videos
Follow Us:
Download App:
  • android
  • ios