150 ವರ್ಷ ಬದುಕಲು ಸಿದ್ಧತೆ ಮಾಡಿಕೊಂಡಿದ್ದ ಮೈಕೆಲ್ ಜಾಕ್ಸನ್! ಇನ್ನೂ ತೀರಲಿಲ್ಲ 3,800 ಕೋಟಿ ರೂ. ಸಾಲ
150 ವರ್ಷ ಬದುಕಲು ಸಕಲ ಸಿದ್ಧತೆ ಮಾಡಿಕೊಂಡು 50 ವರ್ಷಕ್ಕೇ ಕೊನೆಯುಸಿರೆಳೆದ ಪಾಪ್ ಲೋಕದ ದಂತಕಥೆ ಮೈಕೆಲ್ ಜಾಕ್ಸನ್ ಕುರಿತ ಇಂಟರೆಸ್ಟಿಂಗ್ ವಿಷ್ಯವೊಂದು ಈಗ ಹೊರ ಬಂದಿದೆ.
ಮೈಕೆಲ್ ಜಾಕ್ಸನ್ ಎಂದರೆ ಸಾಕು, ಎಲ್ಲರಲ್ಲಿಯೂ ಒಂದು ರೀತಿಯ ರೋಮಾಂಚನವಾಗುತ್ತದೆ. ಅವರ ನೃತ್ಯದ ಶೈಲಿಯನ್ನು ಅನುಕರಿಸಲು ಪ್ರಯತ್ನಿಸಿ ಸೋತರವೇ ಹಲವು ಸ್ಟಾರ್ ನಟರು, ರ್ಯಾಪರ್ಗಳು. ಮೈಕಲ್ ಪಾಪ್ ಲೋಕದ ದಂತಕಥೆಯಾಗಿಯೇ ಉಳಿದಿದ್ದಾರೆ. ಅವರು ಕಿಂಗ್ ಆಫ್ ಪಾಪ್ ಎಂದೇ ಫೇಮಸ್ ಆಗಿದ್ದರು. ಅವರ ಮೂನ್ವಾಕ್ಗೆ ಎಲ್ಲರೂ ಫಿದಾ ಆಗಿದ್ದರು. ಹಲವು ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಸದ್ದು ಮಾಡಿದವರು. 150 ವರ್ಷ ಬದುಕುವ ಆಸೆ ಹೊತ್ತಿದ್ದ ಮೈಕೆಲ್ ಅವರು ಸಾವನ್ನಪ್ಪಿದಾಗ ಅವರಿಗೆ 50 ವರ್ಷ ವಯಸ್ಸು. ವಿಪರೀತ ಡ್ರಗ್ಸ್ ಸೇವಿಸುತ್ತಿದ್ದರು ಎಂದು ಹೇಳಲಾಗುತ್ತಿದ್ದರೂ ಇವರ ಸಾವು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಇವರ ಕುರಿತಾದ ಬಯೋಪಿಕ್ಗಳು ಬಂದರೂ ಇವರ ಬಗ್ಗೆ ಹಲವು ಸಂದೇಹಗಳು ಇಂದಿಗೂ ಉಳಿದುಕೊಂಡಿವೆ.
2009ರ ಜೂನ್ ತಿಂಗಳಿನಲ್ಲಿ ಸಾವನ್ನಪ್ಪಿರುವ ಮೈಕೆಲ್ ಅವರು ನಿಧನರಾಗಿ ಈಗ 15 ವರ್ಷಗಳಾಗಿವೆ. ಈ ಸಮಯದಲ್ಲಿ ಅವರ ಕುರಿತು ಕುತೂಹಲದ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಅದೇನೆಂದರೆ ಅವರು ಸಾಯುವ ಸಮಯದಲ್ಲಿ ಬರೋಬ್ಬರಿ 500 ಮಿಲಿಯನ್ ಡಾಲರ್ ಹಣವನ್ನು ಸಾಲ ಪಡೆದಿದ್ದು, ಅದನ್ನು ತೀರಿಸಿರಲಿಲ್ಲ ಎನ್ನುವುದು. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ, 3,775 ಕೋಟಿ ರೂಪಾಯಿ. ಅಷ್ಟಕ್ಕೂ ಅವರ ಜೀವನ ಕ್ರಮವೇ ವಿಚಿತ್ರವಾಗಿತ್ತು. ಮೈಕಲ್ ಜಾಕ್ಸನ್‌ನ ಪ್ರತಿನಿತ್ಯ ಚೆಕಪ್‌ಗೆ 12 ದಿನ ಡಾಕ್ಟರ್ ಇದ್ದರು. ಶರೀರದ ಒಂದೊಂದು ಭಾಗದ ಆರೋಗ್ಯ ತಪಾಸಣೆ ಅವರು ಮಾಡುತ್ತಿದ್ದರು. ಅವರು ತಿನ್ನುವ ಆಹಾರ ಲ್ಯಾಬೋರೇಟರಿಯಲ್ಲಿ ಪರೀಕ್ಷೆಗೆ ಒಳಗಾಗುತ್ತಿತ್ತಂತೆ.
ಪ್ರೀತಿಗಾಗಿ ಸಾಯುವತನಕವೂ ಹೋರಾಡ್ತಾರಂತೆ ಮಲೈಕಾ! 1,2,3... ಯಾರ ಜೊತೆ ಕೇಳ್ತಿದ್ದಾರೆ ನೆಟ್ಟಿಗರು!
15 ಜನರು ಮೈಕಲ್ ಜಾಕ್ಸನ್ ವ್ಯಾಯಾಮ ಹಾಗೂ ವರ್ಕೌಟ್ ಬಗ್ಗೆ ಗಮನಹರಿಸಲು ನೇಮಿಸಿಕೊಂಡಿದ್ದರು, ಮೈಕಲ್ ಜಾಕ್ಸನ್‌ರ ಆಕ್ಸಿಜನ್ ಲೆವಲ್ ಎಷ್ಟಿತ್ತು ಎಂಬುವುದನ್ನು ಪ್ರತಿನಿತ್ಯ ಪರೀಕ್ಷೆ ಮಾಡುತ್ತಿದ್ದರಂತೆ. ಇದಕ್ಕೆ ಕಾರಣ, ಅವರು 150 ವರ್ಷ ಬದುಕಲು ಇಚ್ಛಿಸಿದ್ದೇ ಎನ್ನಲಾಗಿದೆ. ಈ ಬಗ್ಗೆ ಅವರು ಹಲವಾರು ಬಾರಿ ಹೇಳಿಕೊಂಡಿದ್ದರು. ಎಲ್ಲವೂ ನನ್ನ ಬಳಿಯಿದೆ, ಏನಾದರೂ ಸ್ವಲ್ಪ ಹೆಚ್ಚು ಕಡಿಮೆಯಾದರೆ ಚಿಕಿತ್ಸೆ ನೀಡಲು ತಜ್ಞೆ ತಂಡವೇ ನನ್ನ ಬಳಿಯಿದೆ, ದೇಹದ ಯಾವುದೇ ಅಂಗಾಂಗ ದಾನ ಪಡೆಯಲು ಸಕಲ ವ್ಯವಸ್ಥೆಯಿದೆ, ದಿನಾ ಆರೋಗ್ಯ ತಪಾಸಣೆ ಎಲ್ಲವೂ ಇರುವುದರಿಂದ ನನಗೇನೂ ಸಂಭವಿಸುವುದಿಲ್ಲ ಎಂದು ಅವರು ಹೇಳಿದ್ದರು. ಅದೇ ಇನ್ನೊಂದೆಡೆ, ಮೈಕಲ್ ಜಾಕ್ಸನ್ ಡ್ರಗ್ಸ್ ಖರೀದಿಸಲು 19 ನಕಲಿ ಐಡಿಗಳನ್ನು ಬಳಸುತ್ತಿರುವ ಅಂಶವೂ ಬೆಳಕಿಗೆ ಬಂದಿತ್ತು. ಮೈಕೆಲ್ ಜಾಕ್ಸನ್ ಅವರ ಮನೆಯಲ್ಲಿ ಫ್ರೀಜ್ ಆಗಿದ್ದರು. ಅವರು ಅರಿವಳಿಕೆ ಪ್ರೊಪೋಫೋಲ್ನ ಮಿತಿಮೀರಿದ ಸೇವನೆಯಿಂದ ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ.
ಆದರೆ ಇದೀಗ ಅವರ ಸಾಲದ ಬಗ್ಗೆ ಮಾಹಿತಿ ಬಂದಿದೆ. ವಿಪರೀತ ಸಾಲ ಮಾಡಿಕೊಂಡಿದ್ದ ಅವರು, ಸಾಯುವ ಸಂದರ್ಭದಲ್ಲಿ 500 ಮಿಲಿಯನ್ ಡಾಲರ್ ಸಾಲ ಉಲಿಸಿಕೊಂಡಿದ್ದರು. ಈ ಪೈಕಿ ಕೆಲವು ಹೆಚ್ಚಿನ ಬಡ್ಡಿ ಮೊತ್ತಕ್ಕೆ ಪಡೆದ ಸಾಲವಾಗಿದೆ ಎನ್ನಲಾಗಿದೆ. ಜಾಕ್ಸನ್ ಅವರ ಮಕ್ಕಳಾಗಿರುವ ಪ್ಯಾರಿಸ್, ಪ್ರಿನ್ಸ್, ಬಿಗಿ ಹಾಗೂ ಪತ್ನಿ ಕ್ಯಾಥರೀನ್ ಅವರಿಗೆ ಈಗ ಇದೇ ಕಾರಣದಿಂದ ಮೈಕಲ್ ಜಾಕ್ಸನ್ ಟ್ರಸ್ಟ್ನಿಂದ ಯಾವುದೇ ಹಣ ಸಿಗುತ್ತಿಲ್ಲ ಎನ್ನಲಾಗುತ್ತಿತ್ತು. ಕುಟುಂಬ ಇದನ್ನು ಅಲ್ಲಗಳೆದಿದೆ. ಆದರೆ ಸಾಲದ ವಿಷಯ ಮಾತ್ರ ಅವರ ಸಾವಿನಂತೆಯೇ ನಿಗೂಢವಾಗಿದೆ.
ಹಸಿಬಿಸಿ ದೃಶ್ಯ ಎಂದ್ರು, ಬಟ್ಟೆ ಬಿಚ್ಚಿ ಹೀರೊ ಜೊತೆ ಮಲಗಿದೆ... ಅದ್ರಲ್ಲೇನಿದೆ? ನಟಿ ದರ್ಶನಾ ಓಪನ್ ಮಾತು...