Asianet Suvarna News Asianet Suvarna News

ಪ್ಯಾಂಟ್‌ ಮರೆತು ಫೋಟೋಗೆ ಪೋಸ್‌ ಕೊಟ್ಟ ಚಿರಂಜೀವಿ ಅಳಿಯ; ನೆಟ್ಟಿಗರಿಂದ ಎಗ್ಗಾಮುಗ್ಗಾ ಕ್ಲಾಸ್?

ಮೆಗಾ ಸ್ಟಾರ್ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಶೇರ್ ಮಾಡಿಕೊಂಡ ರೀಸೆಂಟ್‌ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಿಶ್ರ ಅಭಿಪ್ರಾಯ ವ್ಯಕ್ತ ಪಡಿಸುತ್ತಿರುವುದು ಅಭಿಮಾನಿಗಳು ಮಾತ್ರವಲ್ಲ, ಸಿನಿಮಾ ಸ್ನೇಹಿತರೂ ಕೂಡ ಹೌದು...
 

mega star chiranjeevi son in law kalyaan dhev trolled for Sankranti outfit vcs
Author
Bangalore, First Published Jan 21, 2021, 10:23 AM IST

ಮೆಗಾ ಸ್ಟಾರ್ ಚಿರಂಜೀವಿ ಕುಟುಂಬ ಈ ವರ್ಷ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದೆ. ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಇತ್ತೀಚಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾರಣ ಅಳಿಯ ಚೈತನ್ಯಾ ಕುಟುಂಬ ಕೂಡ ಸುಗ್ಗಿ ಹಬ್ಬದಲ್ಲಿ ಭಾಗಿಯಾಗಿತ್ತು. ಇವೆಲ್ಲಾ ಓಕೆ, ಆದರೆ ಚಿರಂಜೀವಿ ಅಳಿಯ ಹಬ್ಬದ ದಿನ ಧರಿಸಿದ್ದ ಬಟ್ಟೆ ಹೇಗಿತ್ತು ನೋಡಿದ್ದೀರಾ?

ಕಾಂಡೋಮ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರಾ ಚಿರಂಜೀವಿ ಎರಡನೇ ಅಳಿಯ?

ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ರಚಿತಾ ರಾಮ್‌ ಜೊತೆ 'ಸೂಪರ್ ಮಚಿ' ಚಿತ್ರದಲ್ಲಿ ಹಾಗೂ 'ಕಿನ್ನೇರಸಾನಿ' ಚಿತ್ರದಲ್ಲಿ ಬ್ಯುಸಿಯಾಗಿರುವ ಕಲ್ಯಾಣ್ ದೇವ್‌ ಹಬ್ಬದ ದಿನ ಕುರ್ತಾ ಪೈಜಾಮ ಬದಲು ಕುರ್ತಾ ನಿಕ್ಕರ್ ಧರಿಸದ್ದಾರೆ. ಅಲ್ಲದೇ ಇದಕ್ಕೆ ಕ್ಯಾನವಸ್ ವೈಟ್‌ ಶೋಸ್‌ ಅನ್ನು ಮ್ಯಾಚ್ ಮಾಡಿಕೊಂಡಿದ್ದಾರೆ.  ಹಬ್ಬದ ದಿನ ಸ್ಟಾರ್ ಅಳಿಯನ ಅವತಾರ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

mega star chiranjeevi son in law kalyaan dhev trolled for Sankranti outfit vcsmega star chiranjeevi son in law kalyaan dhev trolled for Sankranti outfit vcs

ನೆಟ್ಟಿಗರ ಕಾಮೆಂಟ್:
ಕಲ್ಯಾಣ್ ಸುಖಾ ಸುಮ್ಮನೆ ಯಾವುದೋ ಬಟ್ಟೆಗೆ ಯಾವುದನ್ನೋ ಮ್ಯಾಚ್ ಮಾಡಿಕೊಂಡಿಲ್ಲ. ಇದೊಂದು ಡಿಸೈನರ್ ವೇರ್ ಉಡುಪು ಎನ್ನಲಾಗಿದೆ. 'ಸರ್ ನೀವು ಪ್ಯಾಂಟ್ ಹಾಕಿಕೊಳ್ಳುವುದನ್ನೇ ಮರೆತಿದ್ದೀರಾ?' ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದರೆ, ಮತ್ತೊಬ್ಬ 'ಮನೆಯಲ್ಲಿ ಚೇರ್ ಇಲ್ವಾ ಸರ್, ಕಮೋಡ್‌ ಮೇಲಿ ಯಾಕೆ?' ಎಂದು ಪ್ರಶ್ನೆ ಮಾಡಿದ್ದಾರೆ. 

ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ- ಕಲ್ಯಾಣ್ ದೇವ್‌ ಫ್ಯಾಮಿಲಿ ಫೋಟೋ! 

ಒಟ್ಟಿನಲ್ಲಿ ಕಲ್ಯಾಣ್ ದೇವ್‌ ಫ್ಯಾಷನ್‌ ಸೆನ್ಸ್‌ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Kalyaan Dhev (@kalyaan_dhev)

Follow Us:
Download App:
  • android
  • ios